ಪುತ್ತೂರು: ಕೊಂಬೆಟ್ಟು ಸರಕಾರಿ ಪ.ಪೂ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ನೂತನ ತರಗತಿ ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಜ.8ರಂದು ನಡೆಯಿತು.
ಶಾಲೆಯ ಹಿರಿಯ ಶಿಕ್ಷಕಿಯಾಗಿದ್ದ ಶಾಂತಾ ಶೆಟ್ಟಿ ಅವರ ಸ್ಮರಣಾರ್ಥ ೩ ತರಗತಿ ಕೊಠಡಿಗಳ ನಿರ್ಮಾಣಕ್ಕೆಂದು ಆರ್ಥಿಕ ನೆರವು ನೀಡಿದ ಹಿನ್ನೆಲೆಯಲ್ಲಿ ಶಂಕು ಸ್ಥಾಪಾನೆಯನ್ನು ನಿವೃತ್ತ ಉಪಾನ್ಯಾಸಕ ಸುರೇಶ್ ಶೆಟ್ಟಿಯವರು ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಂತಾ ಶೆಟ್ಟಿಯವರ ಸೊಸೆ ವೀಣಾ ಶೆಟ್ಟಿ, ಯಶವಂತ ಶೆಟ್ಟಿ, ವಿನಿತ್ ಶೆಟ್ಟಿ, ವಿಂಧ್ಯಾ ಶೆಟ್ಟಿಯವರು ಉಪಸ್ಥಿತರಿದ್ದರು. ಸಂಸ್ಥೆಯ ಉಪಪ್ರಾಂಶುಪಾಲ ವಸಂತ್ ಸ್ವಾಗತಿಸಿದರು. ಎಸ್ಡಿಎಂಸಿ ಸದಸ್ಯ ನ್ಯಾಯವಾದಿ ಸುರೇಶ್ ರೈ ಪಡ್ಡಂಬೈಲು, ಗುತ್ತಿಗೆದಾರ ಅಭಿಜಿತ್, ಹಿರಿಯ ವಿದ್ಯಾರ್ಥಿಗಳು, ದೈಹಿಕ ಶಿಕ್ಷಣ ಶಿಕ್ಷಕಿ ಗೀತಾಮಣಿ ಮತ್ತು ಶಿಕ್ಷಕರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.