HomePage_Banner
HomePage_Banner
HomePage_Banner
HomePage_Banner

ಹರಿಯುವ ತೋಡಿಗೆ ಕಟ್ಟ ನಿರ್ಮಿಸಿ ನೀರು ಶೇಖರಣೆ | ಅಂತರ್ಜಲ ವೃದ್ಧಿಗೆ ಮುಂದಾದ ನಿವೃತ್ತ ಉಪತಹಶೀಲ್ದಾರ್ ಗುಡ್ಡಪ್ಪ ಶೆಟ್ಟಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಹರಿಯುವ ನೀರಿಗೆ ಕಟ್ಟ ನಿರ್ಮಾಣ ಮಾಡಿ ಅಂತರ್ಜಲ ವೃದ್ಧಿಸುವ ಮೂಲಕ ಬೇಸಿಗೆಯಲ್ಲಿ ಜಲಕ್ಷಾಮ ತಲೆದೋರುವುದನ್ನು ತಪ್ಪಿಸಲು ನಿವೃತ್ತ ಉಪತಹಶೀಲ್ದಾರ್‌ರೊಬ್ಬರು ಮುಂದಾಗಿದ್ದಾರೆ.

ಎರಡು ವರ್ಷದ ಹಿಂದೆ ಪುತ್ತೂರಿನಲ್ಲಿ ಉಪತಹಶೀಲ್ದಾರ್ ಆಗಿದ್ದು ನಿವೃತ್ತರಾದ ನೆಲ್ಯಾಡಿ ನಿವಾಸಿ ಗುಡ್ಡಪ್ಪ ಶೆಟ್ಟಿಯವರು ಇದೀಗ ತಮ್ಮ ಕೃಷಿ ಭೂಮಿಯಲ್ಲಿ ಅಡಿಕೆ, ರಬ್ಬರ್ ಕೃಷಿ ಮಾಡುತ್ತಿದ್ದಾರೆ. ನೆಲ್ಯಾಡಿ ಗ್ರಾಮದ ಕುಂಟ್ರೋಡಿಮಜಲು (ಕೊಲ್ಯೊಟ್ಟು ಬೈಲು) ಎಂಬಲ್ಲಿರುವ ತಮ್ಮ ಕೃಷಿ ಜಮೀನಿನ ಮಧ್ಯೆ ತೋಡು ಹರಿಯುತ್ತಿದೆ. ಬಲ್ಯ ಗ್ರಾಮದ ಪನ್ಯಾಡಿಯಿಂದ ಹರಿದು ಬರುವ ಈ ತೋಡು ಕೊಕ್ಕಡ ಪಟ್ಟೂರು ಸಮೀಪ ಕಪಿಲಾ ನದಿ ಸೇರಿ ನೇತ್ರಾವತಿ ಸೇರುತ್ತದೆ. ಮಳೆಗಾಲದಲ್ಲಿ ಸಾಕಷ್ಟು ಮಳೆನೀರು ಈ ತೋಡಿನಲ್ಲಿ ಹರಿದು ಹೋಗುತ್ತಿದ್ದು ಜನವರಿ ವೇಳೆಗೆ ಸಂಪೂರ್ಣ ಬತ್ತಿಹೋಗುತ್ತದೆ. ಈ ಪ್ರದೇಶದಲ್ಲಿನ ಕೆರೆ, ಬಾವಿಯ ನೀರೂ ಜನವರಿ, ಫೆಬ್ರವರಿ ವೇಳೆಗೆ ಬತ್ತಿಹೋಗುತ್ತದೆ. ಇದನ್ನೆಲ್ಲಾ ಮನಗಂಡ ಗುಡ್ಡಪ್ಪ ಶೆಟ್ಟಿಯವರು ಸ್ಥಳೀಯ ನಿವಾಸಿ ಕರುಣಾಕರ ಶೆಟ್ಟಿ ಎಂಬವರ ಜೊತೆಗೂಡಿ ಕುಂಟ್ರೋಡಿಮಜಲುನಲ್ಲಿ ಪಿಡಬ್ಲ್ಯುಡಿ ಇಲಾಖೆ ನಿರ್ಮಿಸಿರುವ ಕಾಲುಸಂಕ ಉಪಯೋಗಿಸಿಕೊಂಡು ಕಟ್ಟ ನಿರ್ಮಾಣ ಮಾಡಿದ್ದಾರೆ. ಇದಕ್ಕೆ ಪ್ಲಾಸ್ಟಿಕ್ ಟರ್ಪಾಲು, ಅಡಿಕೆ ಮರದ ಸಲಾಕೆ, ಮಣ್ಣು ಉಪಯೋಗಿಸಲಾಗಿದೆ. ಕಟ್ಟ ನಿರ್ಮಾಣಗೊಂಡ ಜಾಗದಿಂದ ಮೇಲೆ ಸುಮಾರು ೧ ಕಿ.ಮೀ.ತನಕ ನೀರು ಸಂಗ್ರಹಗೊಂಡಿದೆ. ಕಟ್ಟಡದ ಜಾಗದಲ್ಲಿ ೫ ಅಡಿಗೂ ಹೆಚ್ಚು ನೀರು ಶೇಖರಣೆಗೊಂಡಿದೆ.

ಅಂತರ್ಜಲ ವೃದ್ಧಿ:
ಕಟ್ಟ ನಿರ್ಮಿಸಿರುವುದರಿಂದ ಈ ಭಾಗದಲ್ಲಿ ಅಂತರ್ಜಲವೂ ವೃದ್ಧಿಗೊಂಡಿದೆ. ಈ ಭಾಗದ ಸುಮಾರು ೫೦ಕ್ಕೂ ಹೆಚ್ಚು ಮನೆಗಳಿಗೆ ಇದರಿಂದ ಪ್ರಯೋಜನವಾಗಿದೆ. ಇವರ ಕೆರೆ, ಬಾವಿಗಳಲ್ಲಿ ನೀರಿನ ಒಳಹರಿವು ಅಧಿಕಗೊಂಡಿದೆ. ಕಟ್ಟಡದಲ್ಲಿ ಸಂಗ್ರಹವಾದ ನೀರನ್ನು ಕೃಷಿ ಚಟುವಟಿಕೆಗಳಿಗೆ ಉಪಯೋಗಿಸುತ್ತಿಲ್ಲ. ಇದರಿಂದ ಪರಿಸರದ ಕೆರೆ,ಬಾವಿಗಳಲ್ಲಿ ಅಂತರ್ಜಲ ವೃದ್ಧಿಗೊಂಡಿದೆ ಎಂದು ಕಟ್ಟ ನಿರ್ಮಾಣದ ರೂವಾರಿ ಗುಡ್ಡಪ್ಪ ಶೆಟ್ಟಿಯವರು ಹೇಳುತ್ತಾರೆ.

ಬೇಸಿಗೆ ಕಾಲದಲ್ಲಿ ತಲೆದೋರುವ ಜಲಕ್ಷಾಮ ನಿವಾರಣೆ ಮಾಡುವ ನಿಟ್ಟಿನಲ್ಲಿ ತೋಡಿಗೆ ಕಟ್ಟ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಸುಮಾರು ೧೦ ಸಾವಿರ ರೂ.ವೆಚ್ಚವಾಗಿದೆ. ಕಟ್ಟದಲ್ಲಿ ನೀರು ಸಂಗ್ರಹಣೆ ಆಗಿರುವುದರಿಂದ ಈ ಭಾಗದ ಕರೆ, ಬಾವಿಗಳಲ್ಲಿ ನೀರಿನ ಒಳಹರಿವು ಅಧಿಕಗೊಂಡಿದೆ. ಬೇಸಿಗೆ ಕಾಲದಲ್ಲಿ ಕೃಷಿ ಹಾಗೂ ದಿನಬಳಕೆ ನೀರಿಗೆ ಕೊರತೆ ಆಗಬಾರದು ಎಂಬ ದೃಷ್ಟಿಯಲ್ಲಿ ಇಲ್ಲಿ ಕಟ್ಟ ನಿರ್ಮಾಣ ಮಾಡಿದ್ದೇವೆ. ಇದು ಪ್ರಯೋಜಕನಕ್ಕೆ ಬಂದಿದೆ ಗುಡ್ಡಪ್ಪ ಶೆಟ್ಟಿ ನೆಲ್ಯಾಡಿ, ನಿವೃತ್ತ ಉಪತಹಶೀಲ್ದಾರ್

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.