ಪುತ್ತೂರು: ಜ.೭ ರಂದು ಸಂಜೆ ಸುರಿದ ಭಾರಿ ಮಳೆಗೆ ದರ್ಬೆ ಲಿಟ್ಲ್ ಪವರ್ ಶಾಲೆಯ ಆವರಣಗೋಡೆ ಕುಸಿತಗೊಂಡಿದೆ. ವಿದ್ಯಾಗಮ ತರಗತಿ ಮುನ್ನ ದುರಸ್ಥಿಯಾಗದಿದಲ್ಲಿ ವಿದ್ಯಾರ್ಥಿಗಳಿಗೆ ಅಪಾಯವಾಗುವ ಸಾಧ್ಯತೆ ಇದೆ.

ಜಲಸಿರಿ ಯೋಜನೆಯಲ್ಲಿ ಪೈಪ್ ಅಳವಡಿಕೆ ವೇಳೆ ಶಾಲೆಯ ಆವರಣದ ಹೊರಗಡೆ ಇದ್ದ ಮೋರಿಯೊಂದು ಬ್ಲಾಕ್ ಆಗಿದ್ದರಿಂದ ಶಾಲೆಯ ಆವರಣದೊಳಗೆ ಮಳೆ ನೀರು ಹರಿದು ಬಂದ ಹಿನ್ನಲೆಯಲ್ಲಿ ಶಾಲಾ ಹಿಂಬದಿಯ ಆವರಣಗೋಡೆ ಕುಸಿದು ಬಿದ್ದಿದೆ. ಇದರಿಂದಾಗಿ ಶಾಲಾ ಕೊಠಡಿಗಳಿಗೂ ಹಾನಿಯಾಗುವ ಸಾಧ್ಯತೆ ಇದೆ.
ತುರ್ತು ದುರಸ್ಥಿ ಪಡಿಸುವಂತೆ ಮನವಿ:
ಶಾಲೆಯಲ್ಲಿ ೬ ಮತ್ತು ೭ ನೇ ತರಗತಿಗೆ ವಿದ್ಯಾಗಮ ತರಗತಿ ಆರಂಭವಾಗುವ ಹಿನ್ನಲೆಯಲ್ಲಿ ಮಕ್ಕಳು ಒಡಾಡುವ ಜಾಗ ಆದ್ದರಿಂದ ಮಕ್ಕಳಿಗೆ ಆಗುವ ಅಪಾಯ ತಪ್ಪಿಸಲು ತಕ್ಷಣ ಆವರಣಗೋಡೆಯ ದುರಸ್ಥಿ ಆಗಬೇಕು. ಜಲಸಿರಿ ಯೋಜನೆಯವರು ನೀರಿನ ಪೈಪ್ ಗೆ ಅಗೆದ ಗುಂಡಿಯಿಂದಾಗಿ ಸಮಸ್ಯೆ ಉಂಟಾಗಿದೆ. ತಕ್ಷಣ ದುರಸ್ಥಿ ಮಾಡಿಕೊಡುವಂತೆ ಶಾಲಾ ಮುಖ್ಯಗುರು ಪ್ರಶಾಂತಿಯವರು ವಿನಂತಿಸಿದ್ದಾರೆ.