ಪುತ್ತೂರು: ಜ.5ರಂದು ಜರಗಿದ ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಪ್ರತಿಷ್ಠಾ ದಿನಾಚರಣೆಯ ಸಂದರ್ಭದಲ್ಲಿ ದೇವಾಲಯಕ್ಕೆ ಆಗಮಿಸಿದ ಭಕ್ತಾಧಿಗಳಿಗೆ ಉಚಿತ ಕೋವಿಡ್ ಪರೀಕ್ಷೆಯನ್ನು ಆರೋಗ್ಯ ಇಲಾಖೆಯ ವತಿಯಿಂದ ನಡೆಸಲಾಯಿತು. ತಿಂಗಳಾಡಿ ಪ್ರಾಥಮಿಕ ಕೇಂದ್ರದ ಲ್ಯಾಬ್ ಟೆಕ್ನಿಷಿಯನ್ ರೋಶ್ನಾ, ಕಂಪ್ಯೂಟರ್ ಅಪರೇಟರ್ ಸೌಮ್ಯ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ದಮಯಂತಿ, ಅಂಗನವಾಡಿ ಕಾರ್ಯಕರ್ತೆಯರಾದ ಕಮಲ, ಶೋಭ, ಆಶಾ ಕಾರ್ಯಕರ್ತೆಯರಾದ ಸುಕನ್ಯ, ಯಮುನಾ ಹಾಗೂ ಸುಶೀಲರವರುಗಳು ಕೋವಿಡ್ ಪರೀಕ್ಷೆಯನ್ನು ನಡೆಸಿಕೊಟ್ಟರು.