HomePage_Banner
HomePage_Banner
HomePage_Banner
HomePage_Banner

ಜ.10: ಸೃಷ್ಠಿ ಇಕಲಾಜಿಕಲ್ ಆಗ್ರೋ ಟೆಕ್ನಾಲಾಜಿಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಗ್ರೀನ್ ಪ್ಲಾನೆಟ್ ಸಾವಯವ ಕೃಷಿ ಉತ್ಪನ್ನಗಳ ಸೇವಾ ಕೇಂದ್ರ ಮತ್ತು ಮಣ್ಣ ಪರೀಕ್ಷಾ ಕೇಂದ್ರ ಸೃಷ್ಠಿ ಇಕಲಾಜಿಕಲ್ ಆಗ್ರೋ ಟೆಕ್ನಾಲಾಜಿಸ್ ಜ.10ರಂದು ದರ್ಬೆ ಆರಾಧ್ಯ ಆರ್ಕೆಡ್‌ನಲ್ಲಿ ಶುಭಾರಂಭಗೊಳ್ಳಲಿದೆ.

ಶಾಸಕ ಸಂಜೀವ ಮಠಂದೂರು ನೂತನ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಕೃಷಿ ಲೇಖಕ ಡಾ|ನರೇಂದ್ರ ರೈ ದೇರ್ಲ, ವಿಷಮುಕ್ತ ಸಲಹೆಗಾರ ಮದೆತೀರ ತಿಮ್ಮಯ್ಯ, ತಾಲೂಕು ಸಹಾಯಕ ಕೃಷಿ ನಿರ್ದೇಶಕ ನಂದನ್ ಶೆಣೈ ಪಿ., ಆರಾಧ್ಯ ಆರ್ಕೆಡ್‌ನ ಮ್ಹಾಲಕ ದೇರ್ಲ ಎನ್. ಕರುಣಾಕರ ರೈ, ಎಪಿಎಂಸಿ ಮಾಜಿ ಅಧ್ಯಕ್ಷ ಅಮ್ಮಣ್ಣ ರೈ, ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಬು ಶೆಟ್ಟಿ, ಕೃಷಿಕ ರಾಜ್ ದೀಪಕ್ ಕುದ್ಮಾರು ಗುತ್ತು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಮಳಿಗೆಯಲ್ಲಿ ಕೃಷಿ ಕ್ಷೇತ್ರದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳಿಗೆ ಸುಲಭ ಮತ್ತು ಉತ್ತಮ ಪರಿಹಾರ, ಸಾವಯವ ಆರೋಗ್ಯಕರ ಉತ್ಪನ್ನಗಳು, ರಾಸಾಯನಿಕ ಮುಕ್ತ, ವಿಷ ಮುಕ್ತ ಸಾವಯವ ಕೃಷಿ ಉತ್ಪನ್ನಗಳ ದೊರೆಯಲಿದೆ. ರೈತನ ಜಮೀನನ್ನು ಫಲವತ್ತಾಗಿ ಮಾಡುವಲ್ಲಿ ಅನುಕೂಲಕರವಾದ ವಿವಿಧ ರೀತಿಯ ಸಾವಯವ ಗೊಬ್ಬರಗಳು, ಕೃಷಿ ರೋಗಗಳು ಬಾಧಿಸದಂತೆ ರೋಗ ನಿಯಂತ್ರಕ ಔಷಧಿಗಳು, ಪಶುಗಳ ಉತ್ತಮ ಬೆಳವಣಿಗೆ, ಸಮಗ್ರ ಆರೋಗ್ಯ ವೃದ್ಧಿಗಾಗಿ ವಿವಿಧ ರೀತಿಯ ಹೈನುಗಾರಿಕಾ ಉತ್ಪನ್ನಗಳು, ಬೀಜ ಅಥವಾ ಸಸಿಯಿಂದ ಬರುವ ರೋಗಗಳನ್ನು ನಡೆಯುವ ಗಿಡಗಳ ಏಕರೂಪದ ಬೆಳವಣಿಗೆಗೆ ಪೂರಕವಾದ ಬೀಜೋಪಚಾರಗಳು ಮಳಿಗೆಯಲ್ಲಿ ದೊರೆಯಲಿದೆ.

ಮಣ್ಣು ಪರೀಕ್ಷೆ:
ಕೃಷಿ ಭೂಮಿಯನ್ನು ರೈತರಿಗೆ ಫಲವತ್ತಾಗಿ ಮಾಡುವ ನಿಟ್ಟಿನಲ್ಲಿ ಮಣ್ಣಿನಲ್ಲಿರುವ ೧೧ ವಿವಿಧ ರೀತಿಯ ಅಂಶಗಳ ಪರೀಕ್ಷೆ ನಡೆಸಲಾಗುವುದು. ಮಣ್ಣಿನ ಸ್ಥೂಲ(ಮ್ಯಾಕ್ರೋ) ಮತ್ತು ಸೂಕ್ಷ್ಮ(ಮೈಕ್ರೋ) ವಿಷಯಗಳ ಪರಿಕ್ಷೆ ನಡೆಸಿ ಶೀಘ್ರ ಹಾಗೂ ನಿಖರವಾದ ಫಲಿತಾಂಶ ದೊರೆಯಲಿದ್ದು ರೈತರ ಮೊಬೈಲ್‌ಗೆ ಮಣ್ಣು ಪರೀಕ್ಷೆಯ ಫಲಿತಾಂಶವನ್ನು ಕಳುಹಿಸಲಾಗುತ್ತದೆ. ಅಲ್ಲದೆ ಮಣ್ಣಿನಲ್ಲಿರುವ ಸತ್ವ ಮತ್ತು ಪೋಷಕಾಂಶಗಳನ್ನು ಅರಿತು ಅದಕ್ಕೆ ಆವಶ್ಯಕವಾದ ಗೊಬ್ಬರ ಬಳಕೆಯ ಕುರಿತು ಮಾಹಿತಿ ಮೊದಲಾದ ಕೃಷಿ ಸಂಬಂಧಿಸಿದ ಸೇವೆಗಳು ನಮ್ಮಲ್ಲಿ ದೊರೆಯಲಿದೆ ಎಂದು ಮ್ಹಾಲಕ ರವೀಂದ್ರ ಪ್ರಭು ಬಿ ಬಜಪ್ಪಳ ತಿಳಿಸಿದ್ದಾರೆ.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.