ಪುತ್ತೂರು:ಕಳೆದ ೨೫ ವರ್ಷಗಳಿಂದ ಉಪ್ಪಿನಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೋಹಾ ಬ್ಯೂಟಿ ಪಾರ್ಲರ್ನ ಎರಡನೇ ಸಂಸ್ಥೆ ಹವಾನಿಯಂತ್ರಿತ ಮಳಿಗೆ ನೋಹಾ ಬ್ಯೂಟಿ ಪಾರ್ಲರ್ ಮತ್ತು ಟೈಲರಿಂಗ್ ಜ.೮ರಂದು ಬೆಳಿಗ್ಗೆ ಉಪ್ಪಿನಂಗಡಿ ದುರ್ಗಾ ಟೆಕ್ಸ್ಟೈಲ್ಸ್ ಬಳಿಯ ಹಸನ್ ಟವರ್ಸ್ನಲ್ಲಿ ಶುಭಾರಂಭಗೊಂಡಿತು.
ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿಯವರು ನೂತನ ಮಳಿಗೆಯನ್ನು ಉದ್ಘಾಟಿಸಿ, ಶುಭಹಾರೈಸಿದರು. ಉಪ್ಪಿನಂಗಡಿ ದೀನರ ಕನ್ಯಾಮಾತೆ ದೇವಾಲಯದ ಫಾ| ಅಬೆಲ್ ಮೋಬೋ ಆಶೀರ್ವಚನ ನೀಡಿದರು. ಉಪ್ಪಿನಂಗಡಿ ತುಂಗಾ ಮಲ್ಟಿ ಸ್ಪೆಷಾಲಿಟಿ ಡೆಂಡೋ ಕೇರ್ನ ಡೆಂಟಲ್ ಸರ್ಜನ್ ಡಾ.ಸುಪ್ರಿತಾ ರೈ, ಉಪ್ಪಿನಂಗಡಿ ಪಿಜಿಡಿವೈಎನ್ ಆಯುರ್ವೇದ ತಜ್ಞ ಡಾ.ಸುಪ್ರೀತ್ ಲೋಬೋ ಎಂ.ಎಸ್, ಉಪ್ಪಿನಂಗಡಿ ವರ್ತಕ ಸಂಘದ ಅಧ್ಯಕ್ಷ ಹಾರೂನ್ ರಶೀದ್ ಅಗ್ನಾಡಿ, ಉಪ್ಪಿನಂಗಡಿ ಎಫ್.ಎಜಿ.ಇ, ಡಿಜಿಒ ಡಾ.ಎಂ.ಆರ್ ಶೆಣೈ, ಪುತ್ತೂರು ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ ತೌಸೀಫ್, ಉಪ್ಪಿನಂಗಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಕೆ.ಅಬ್ದುಲ್ ರಹಿಮಾನ್, ಪುತ್ತೂರು ಐಶ್ವರ್ಯ ಬ್ಯೂಟಿ ಪಾರ್ಲರ್ನ ಮ್ಹಾಲಕಿ ಐಶ್ವರ್ಯ ರೈ, ಉಪ್ಪಿನಂಗಡಿ ಪ್ರಗತಿ ಬ್ಯೂಟಿ ಪಾರ್ಲರ್ನ ಮ್ಹಾಲಕಿ ಮಾಧವಿ ಬಿ.ರೈ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭಹಾರೈಸಿದರು. ಮನೀಷಾ ಬ್ಯೂಟಿ ಪಾರ್ಲರ್ ಮ್ಹಾಲಕಿ ಉಷಾಚಂದ್ರ ಮುಳಿ, ಮ್ಯಾಕ್ರೋ ಮಿನೇಜಸ್, ಸ್ಟೀವನ್ ಮೋಂತೆರೋ, ಪ್ರಭ ಎಂ.ಜಿ., ಲಾರೆನ್ಸ್ ಡಿ ಸೋಜಾ, ಜೋಸಿಮ್ ಡಿ ಸೋಜಾ, ನವೀನ್ ಬ್ರಾಕ್ಸ್, ಓವಿನ್ ಪಿಂಟೋ ಹಾಗೂ ಜೋಶ್ ವಿ,ಎಮ್, ಆನಿ ಮಿನೇಜಸ್ ಮೊದಲಾದವರು ಆಗಮಿಸಿ ಶುಭಹಾರೈಸಿದರು. ಸ್ಟಿಲ್ವಾನ ಮೋಂತೆರೋ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಮ್ಹಾಲಕಿ ಸುಖೇತಾ ಪ್ರವೀಣ್ ವಂದಿಸಿದರು.
ನಮ್ಮಲ್ಲಿ ಐಬ್ರೋಸ್, ವ್ಯಾಕ್ಸಿಂಗ್, ಹೈರ್ ಕಟ್ಸ್, ಚಿಲ್ಡನ್ಸ್ ಹೈರ್ ಕಟ್ಟಿಂಗ್, ಹೈರ್ ಕಲರಿಂಗ್, ಬ್ಲೀಚಿಂಗ್, ಕ್ಲೀನ್ ಅಪ್ ಫೇಸಿಯಲ್, ಮೆನಿಕ್ಯೂರ್, ಪೆಡಿಕ್ಯೂರ್, ಹೈರ್ ಆಯಿಲ್ ಮಸಾಜ್, ಹೈರ್ ಸ್ಪಾ, ಲೈಟ್ ಮೇಕಪ್, ಬ್ರೈಡಲ್ ಮೇಕಪ್, ಬ್ರೈಡಲ್ ಮೆಹಂದಿ, ಪರ್ಮನೆಂಟ್ ಹೈರ್ ಸ್ಟೈಟಿಂಗ್, ಲೇಡೀಸ್ ಚೂಡಿದಾರ್, ಬ್ಲೌಸ್, ಗೌನ್ ಸ್ಟಿಚ್ಚಿಂಗ್ ಹಾಗೂ ಎಂಬ್ರಾಡರಿ ಮೊದಲಾದ ಸೇವೆಗಳು ಲಭ್ಯವಿದೆ. ಅಲ್ಲದೆ ಬ್ರೈಡಲ್ ವೈಟ್ ಗೌನ್ ಬಾಡಿಗೆಗೆ ದೊರೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.