
ನಿಡ್ಪಳ್ಳಿ: ಚಲನ ಚಿತ್ರ ನಟ ಯಶೋಮಾರ್ಗದ ಸಂಸ್ಥಾಪಕ ರಾಕಿಂಗ್ ಸ್ಟಾರ್ ಯಶ್ ರವರ ಹುಟ್ಟುಹಬ್ಬದ ಪ್ರಯುಕ್ತ ಜ. 8 ರಂದು ಯಶ್ ಅಭಿಮಾನಿ ಬಳಗ ಪುತ್ತೂರು ಇದರ ವತಿಯಿಂದ ಆನಂದ ವೃದ್ಧಾಶ್ರಮದಲ್ಲಿ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಆನಂದಾಶ್ರಮದ ಮುಖ್ಯಸ್ಥರಾದ ಗೌರಿ ಪೈ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಬಳಗದ ಸದಸ್ಯರಾದ ಜಗದೀಶ. ಬಿ, ಚಂದ್ರಮೌಳಿ,ವಿಜಯ್, ಜಯಪ್ರಕಾಶ್,ದಿವಾಕರ, ಸುಧಾಕರ ಮತ್ತೀತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.