ಪುತ್ತೂರು: ಪುತ್ತೂರಿನ ದರ್ಬೆ ಪ್ರಶಾಂತ್ ಮಹಲ್ನಲ್ಲಿ ಕಾರ್ಯಾಚರಿಸುತ್ತಿರುವ ವಿ ವಾಶ್ ಲಾಂಡ್ರಿ ಸಂಸ್ಥೆಯ ಸಹಸಂಸ್ಥೆಯಾಗಿರುವ ಸುಳ್ಯದ ಚೆನ್ನಕೇಶವ ಸರ್ಕಲ್, ಕೆವಿಜಿ ಆಯುರ್ವೇದಿಕ್ ಕಾಲೇಜು ಬಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಸಜ್ಜಿತ ಹವಾನಿಯಂತ್ರಿತ `ಕೆಫೆ ಕಾಫಿ ವಿ ಕೇಕ್’ ಸಂಸ್ಥೆಯು ಜ.೮ ರಂದು ಎರಡನೇ ವರ್ಷಕ್ಕೆ ಪಾದಾರ್ಪಣೆಗೊಂಡಿದೆ.
ಪಾದಾರ್ಪಣೆಗೊಂಡಿರುವ ಹಿನ್ನೆಲೆಯಲ್ಲಿ ಸಂಸ್ಥೆಯಲ್ಲಿ ವಾರ್ಷಿಕೋತ್ಸವವನ್ನು ಆಚರಿಸಲಾಗಿದ್ದು, ಮುಖ್ಯ ಅತಿಥಿಗಳಾಗಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ್ ರೈ, ಫ್ರೊಫೈಲ್ ಬ್ಯೂಟಿ ಪಾರ್ಲರ್ ಹಾಗೂ ಪರಮ್ ಸ್ಟುಡಿಯೋದ ಮಾಲಕ ಪರಮೇಶ್ವರ, ಕೆಫೆ ಕಾಫಿ ವಿ ಕೇಕ್ ಸಂಸ್ಥೆಯ ಮಾಲಕರ ತಾಯಿ ಬೇಬಿ, ಅಣ್ಣ ಯತೀನ್, ತಮ್ಮ ಹಿತೇಶ್, ಅಕ್ಷಯ್ ಆರ್ಕೆಡ್ ಮಾಲಕ ಶಿವಪ್ರಸಾದ್, ಸಂಸ್ಥೆಯ ಉದ್ಯೋಗಿಗಳಾದ ಕುಶಾಲ್ ಕುಮಾರ್, ಚಿತ್ರೆಶ್, ಅರುಣ್ ಉಪಸ್ಥಿತರಿದ್ದರು.
ಸಂಸ್ಥೆಯು ೧೫-೨೦ ಆಸನದ ಹವಾನಿಯಂತ್ರಿತ ಪ್ರತ್ಯೇಕ ಸೆಲೆಬ್ರೇಶನ್ ಪಾರ್ಟಿ ಕ್ಯಾಬಿನ್ ಹೊಂದಿದ್ದು, ಸಂಸ್ಥೆಯು ಕೋವಿಡ್ 19 ಸರಕಾರದ ನಿಯಮವನ್ನು ಅನುಸರಿಸಿಕೊಂಡು ಅಂತರ್ರಾಷ್ಟ್ರೀಯ ಕಂಪೆನಿಯ ಗುಣಮಟ್ಟದ ಪಿಜ್ಜಾ, ಬರ್ಗರ್, ಕೇಕ್, ಐಸ್ಕ್ರೀಂ, ಜ್ಯೂಸ್, ಕಾಫಿ, ಸ್ನ್ಯಾಕ್ಸ್, ಚೈನೀಸ್ ಐಟಂ ಲಭ್ಯವಿದ್ದು, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದೆ. ನಗರ ವ್ಯಾಪ್ತಿಯಲ್ಲಿ ಹೋಮ್ ಡೆಲಿವರಿ ವ್ಯವಸ್ಥೆಯಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಂಡು ಸಹಕಾರ ನೀಡಬೇಕಾಗಿ ಮಾಲಕರಾದ ಹರ್ಷಿತ್ ಕುಮಾರ್ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.