ಪುತ್ತೂರು: ಸುದ್ದಿ ಬಿಡುಗಡೆ ಹಿರಿಯ ಪ್ರತಿನಿಧಿಯಾಗಿದ್ದ ಖಾದರ್ ಸಾಹೇಬ್ ಕಲ್ಲಗುಡ್ಡೆರವರಿಗೆ ಸುದ್ದಿ ಬಳಗದಿಂದ ಶ್ರದ್ಧಾಂಜಲಿ ಸಭೆ ಜ.9ರಂದು ಸುದ್ದಿ ಮೀಡಿಯಾ ಸೆಂಟರ್ ನಲ್ಲಿ ನಡೆಯಿತು.
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ, ಸಿ.ಇ.ಓ. ಸೃಜನ್ ಊರುಬೈಲು, ಸ್ಥಾನೀಯ ಸಂಪಾದಕ ಕರುಣಾಕರ ರೈ ಸಿ.ಎಚ್., ಮುಖ್ಯ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರ, ಹಿರಿಯ ವರದಿಗಾರ ಹರೀಶ್ ಬಾರಿಂಜ, ಜಾಹೀರಾತು ವಿಭಾಗದ ಮುಖ್ಯಸ್ಥೆ ಶೈಲಜಾ ಸುದೇಶ್ ಶ್ರದ್ಧಾಂಜಲಿ ಅರ್ಪಿಸಿದರು.
ಖಾದರ್ ಸಾಹೇಬ್ ರವರ ಪುತ್ರಿ, ಎಲ್.ಎಲ್.ಬಿ.ವಿದ್ಯಾರ್ಥಿನಿ ಕು.ಇಂದಿಕಾರವರು ತಾನೂ ಮುಂದಿನ ದಿನಗಳಲ್ಲಿ ಸುದ್ದಿ ಬಳಗದೊಂದಿಗೆ ಇದ್ದೇನೆ ಎಂದರು. ಸುದ್ದಿ ಬಳಗದ ಲೋಕೇಶ್ ಬನ್ನೂರು, ಮಹಮ್ಮದ್, ಶ್ರೀಧರ ರೈ, ಚಂದ್ರಶೇಖರ ಉಮಿಗದ್ದೆ, ರಾಜೇಶ್ ಎಂ.ಎಸ್.ಮಾಡಾವು, ರವೀಂದ್ರ ಕಬಕ, ಯತೀಶ್ ಉಪ್ಪಳಿಗೆ, ಹರಿಪ್ರಸಾದ್, ಸಿದ್ದೀಕ್ ಕುಂಬ್ರ, ಫಾರೂಕ್ ಶೇಕ್ ಮುಕ್ವೆ, ಶಿವಕುಮಾರ್ ಈಶ್ವರಮಂಗಲ, ಸಿ.ಶೇ.ಕಜೆಮಾರ್, ಯೂಸುಫ್ ರೆಂಜಲಾಡಿ, ಶರತ್ ಕುಮಾರ್ ಪಾರ, ಸದಾಶಿವ ಶೆಟ್ಟಿ ಮಾರಂಗ, ರಮೇಶ್ ಕೆಮ್ಮಾಯಿ, ಸುಧಾಕರ ಕಾಣಿಯೂರು, ಶಿವಪ್ರಸಾದ್ ರೈ ಪೆರುವಾಜೆ, ಚಂದ್ರಕಾಂತ ಉರ್ಲಾಂಡಿ, ಲೋಕಯ್ಯ, ಕೇಶವ ಪ್ರಸಾದ್, ಕಾರ್ತಿಕ್, ನಿತಿನ್, ಜನಾರ್ದನ, ಚಿರಂಜೀವಿ, ರಾಜೇಶ್ವರಿ, ರೇಶ್ಮ, ಆಶಿತಾರವರು ಉಪಸ್ಥಿತರಿದ್ದರು.