
ನಿಡ್ಪಳ್ಳಿ: ಶ್ರೀ ಉಳ್ಳಾಕುಲು ಪರಿವಾರ ದೈವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇದರ ವಾರ್ಷಿಕ ಜಾತ್ರೋತ್ಸವ ಜ.19 ರಿಂದ 24 ರವರೆಗೆ ನಡೆಯಲಿದ್ದು ಇದರ ಗೊನೆ ಮುಹೂರ್ತ ಕಾರ್ಯಕ್ರಮ ಜ. 9 ರಂದು ನಡೆಯಿತು.
ಬೆಳಿಗ್ಗೆ ಶ್ರೀ ಉಳ್ಳಾಕುಲು ಮೂಲಸ್ಥಾನದಲ್ಲಿ ಮುಂಡೂರು ಗೋಪಾಲಕೃಷ್ಣ ಭಟ್ ರವರು ಪ್ರಾರ್ಥನೆ ಸಲ್ಲಿಸಿದ ನಂತರ ಅಂಗಣಕ್ಕೆ ಹಾರೆ ಹಾಕಲಾಯಿತು. ನಂತರ ಬುಳೆನಡ್ಕ ವಿಷ್ಣು ಭಟ್ ರವರ ತೋಟಕ್ಕೆ ತೆರಳಿ ಗೊನೆ ಕಡಿಯಲಾಯಿತು. ಅನುವಂಶಿಕ ಆಡಳಿತ ಮೊಕ್ತೇಸರ ಪ್ರವೀಣ ಎನ್ ಆರಿಗ ನಿಡ್ಪಳ್ಳಿ ಗುತ್ತು, ಹರ್ಷೇಂದ್ರ ಪಡಿವಾಳ್ ಮಜಲೋಡಿ ಗುತ್ತು, ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಗೌಡ ಪುಳಿತ್ತಡಿ, ಕಾರ್ಯದರ್ಶಿ ನಾರಾಯಣ ರೈ ಕೊಪ್ಪಳ, ರಾಜಾರಾಮ ಭಟ್ ನಾಕುಡೇಲು ಮತ್ತು ದೈವಗಳ ಪಾತ್ರಿಗಳು,ಬಾರಿಕೆ ಮನೆಯವರು ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು.