ಪುತ್ತೂರು: ಪುಣಚ ಗ್ರಾಮದ ಬೈಲುಗುತ್ತು ಸಂಕೇಶ ಕೊಡಂಗೆಯ ಶ್ರೀ ಧೂಮಾವತಿ ದೈವಸ್ಥಾನದಲ್ಲಿ ಜ. 7ರಂದು ಬೆಳಿಗ್ಗೆ ಗ್ರಾಮ ದೈವ ಶ್ರೀ ಧೂಮಾವತಿ ನೇಮೋತ್ಸವ ಜರಗಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಜ. 6ರಂದು ರಾತ್ರಿ ಪುದಕೋಲ ನೇಮ ನಡೆಯಿತು. ಸಮಾರಂಭದಲ್ಲಿ ಮದನ ಪೂಜಾರಿ ಸಂಕೇಶ ಕೊಡಂಗೆ ಮತ್ತು ಊರವರು, ವಿಠಲ ರೈ ಬೈಲುಗುತ್ತು ಮತ್ತು ಕುಟುಂಬಸ್ಥರು ಹಾಗೂ ಎ.ಜಗನ್ನಾಥ ರೈ ಯಾಜಮಾನರು ಬೈಲುಗುತ್ತುರವರುಗಳು ಭಾಗವಹಿಸಿದ್ದರು.