ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಬೆಟ್ಟಂಪಾಡಿ ವಲಯದ ಉಪ್ಪಳಿಗೆ ಒಕ್ಕೂಟ ಮತ್ತು ಗುಮ್ಮಟೆಗದ್ದೆ ಒಕ್ಕೂಟದ ವತಿಯಿಂದ ಇರ್ದೆ ಗೋಪಾಲ ಕ್ಷೇತ್ರ ಶ್ರೀ ವಿಷ್ಣು ಮೂರ್ತಿ ದೇವಾಲಯದ ಹೊರಾಂಗಣ ಮತ್ತು ಒಳಾಂಗಣದಲ್ಲಿ ಸ್ವಚ್ಚತಾ ಕಾರ್ಯಕ್ರಮ ಜ.9 ರಂದು ನಡೆಯಿತು.

ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಡಿ.ಬಾಲಕೃಷ್ಣ ಭಟ್, ಸದಸ್ಯರಾದ ದೇವಪ್ಪ ಉಪ್ಪಳಿಗೆ, ಪ್ರಕಾಶ್ ರೈ ಬೈಲಾಡಿ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ವಿಠಲ್ ರೈ ಬಾಲ್ಯೊಟ್ಟು ಗುತ್ತು, ಗುಮ್ಮಟೆಗದ್ದೆ ಒಕ್ಕೂಟದ ಅಧ್ಯಕ್ಷ ಚಿದಾನಂದ. ಜಿ, ಉಪ್ಪಳಿಗೆ ಒಕ್ಕೂಟದ ಅಧ್ಯಕ್ಷೆ ನಮಿತಾ .ಕೆ, ಪದಾಧಿಕಾರಿಗಳಾದ ಉಮಾವತಿ, ಜಗದೀಶ, ಸುಶೀಲ, ಸರೋಜಿನಿ ಮತ್ತು ಒಕ್ಕೂಟದ ಸದಸ್ಯರು, ಸೇವಾ ಪ್ರತಿನಿಧಿ ಭಾರತಿ ಉಪ್ಪಳಿಗೆ ಪಾಲ್ಗೊಂಡರು.
