HomePage_Banner
HomePage_Banner
HomePage_Banner
HomePage_Banner

ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಸಂಘದ ಮಹಾಸಭೆ, ದಿನಚರಿ‌ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಮೂಲ ನಿವಾಸಿಗಳ ಜನಜೀವನಕ್ಕೆ ಸಮಸ್ಯೆ ಅಗದಂತೆ ಕಸ್ತೂರಿ ರಂಗನ್‌ವರದಿ ಜಾರಿ- ಸಂಜೀವ ಮಠಂದೂರು
ಪುತ್ತೂರು: ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿಗಳ ಸಂಘ ಮಂಗಳೂರು ವಿಭಾಗದ 2020-21ನೇ ಸಾಲಿನ ಮಹಾಸಭೆ, 2021ರ ದಿನಚರಿ‌ ಬಿಡುಗಡೆ ಹಾಗೂ ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮಗಳು ಜ.9ರಂದು‌ ದರ್ಬೆ ಹೋಟೇಲ್‌ ಅಶ್ಚಿನಿ‌ಯ ಹಾಲ್ ನಲ್ಲಿ ನಡೆಯಿತು.
ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮವನ್ನು ದೀಪಬೆಳಗಿಸಿ‌ ಉದ್ಘಾಟಿಸಿ, ದಿನಚರಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಅರಣ್ಯ ಪ್ರದೇಶದ ರಕ್ಷಣೆಯ ಜೊತೆಗೆ  ಕಾನೂನಿಗೆ ತೊಡಕಗಾಗದಂತೆ ಅಲ್ಲಿನ ಮೂಲ‌ ನಿವಾಸಿಗಳು ಹಾಗೂ ಕೃಷಿಕರ ಜೀವನಕ್ಕೆ ವ್ಯತ್ಯಾಸ ಆಗದಂತೆ  ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವ ಯೋಜನೆ ಸರಕಾರ ಮುಂದಿದೆ. ಇದರ‌ ಕುರಿತು  ಮುಂದಿನ‌‌ ದಿನಗಳಲ್ಲಿ ನ್ಯಾಯಾಲಯದ ಸೂಚನೆ‌ಯಂತೆ‌ ಕೇಂದ್ರ ಸರಕಾರಿಂದ ರಾಜ್ಯ‌ ಸರಕಾರಗಳಿಗೆ ಸೂಚನೆ‌ ಬರಲಿದೆ ಎಂದು ಹೇಳಿದರು.

ಸಂಘದ ಅಧ್ಯಕ್ಷ ಸಂತೋಷ್ ರೈ‌ ಕೆ. ಅಧ್ಯಕ್ಷತೆ  ವಹಿಸಿದ್ದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಟಿ ಕಾರ್ಯಪ್ಪ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ, ಬಲ್ನಾಡು ಗ್ರಾಮ ಅರಣ್ಯ ಸಮಿತಿ‌ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಮಂಗಳೂರು ವೃತ್ತದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ತಾಂತ್ರಿಕ ಸಹಾಯಕ ಶ್ರೀಧರ್ ನಾಯಕ್, ಸರಕಾರಿ ನೌಕರರ‌ ಸಂಘದ ಅಧ್ಯಕ್ಷ  ಶಿವಾನಂದ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. 
ಸನ್ಮಾನ: ನಿವೃತ್ತ ಉಪ ವಲಯಾರಣ್ಯಾಧಿಕಾರಿ ವೆಂಕಪ್ಪ ಮುಖ್ಯ ಮಂತ್ರಿ ಪದಕ‌ ವಿಜೇತ ಮೋಹನ್ ಜಿ, ಸರಕಾರಿ ನೌಕರರ‌ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಉಪವಲಯ ಅರಣ್ಯಾಧಿಕಾರಿ ಶಿವಾನಂದ ಆಚಾರ್ಯ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನೇರ ನೇಮಕಾತಿ ಹಾಗೂ ಪದೋನ್ನತಿ ಪಡೆದ  ವಲಯಾರಣ್ಯಾಧಿಕಾರಿಗಳನ್ನು ಸಂಘಕ್ಕೆ ಸ್ವಾಗತಿಸಲಾಯಿತು. ಕಾರ್ಯಕ್ರಮ ಪ್ರಾರಂಭದಲ್ಲಿ ಸುಪ್ರೀತ್ ಸಪಲಿಗ ಬಳಗದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.

ಶ್ರೀ ವಿದ್ಯಾ ಮಂಗಳೂರು ಪ್ರಾರ್ಥಿಸಿದರು. ಸಂಘದ ಪ್ರಧಾನ‌ ಕಾರ್ಯದರ್ಶಿ ಪ್ರಕಾಶ್ ಬಿ.ಟಿ ಸ್ವಾಗತಿಸಿದರು. ಚಂದ್ರು, ಕುಮಾರಸ್ವಾಮಿ, ಅಶೋಕ್, ಲೋಕೇಶ್, ಪ್ರಕಾಶ್ ಶೆಟ್ಟಿ, ಸಂದೀಪ್, ರವೀಂದ್ರ ಅತಿಥಿಗಳಿಗೆ ಹೂ‌ಗುಚ್ಚ ನೀಡಿ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷ ಕುಮಾರ ಸ್ವಾಮಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.