ಸವಣೂರು: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸವಣೂರು ವಲಯ ವತಿಯಿಂದ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಮಾಂತೂರು ಅಂಬೇಡ್ಕರ್ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಪಿಐ ಸವಣೂರು ವಲಯ ಅಧ್ಯಕ್ಷರಾದ ಸಿದ್ದೀಕ್ ಅಲೆಕ್ಕಾಡಿ ವಹಿಸಿದ್ದರು. ಎಸ್ಡಿಪಿಐ ರಾಷ್ಟ್ರೀಯ ಸಮಿತಿ ಸದಸ್ಯರಾದ ಲತೀಫ್ ಪುತ್ತೂರು ಮಾತನಾಡಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರು ಮತ್ತೊಮ್ಮ ಪ್ರತಿ ಮತದಾರರ ಬಳಿ ಭೇಟಿಯಾಗಿ ಮತದಾರರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರವನ್ನೊದಗಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು. ಎಸ್ಡಿಪಿಐ ಸುಳ್ಯ ವಿಧಾನ ಸಭಾ ಕ್ಷೇತ್ರ ಚುನಾವಣಾ ಉಸ್ತುವಾರಿ ಶಾಫಿ ಬೆಳ್ಳಾರೆ ಮಾತನಾಡಿದರು.
ಅಭಿನಂದನೆ:
ಸವಣೂರು ಗ್ರಾಮ ಪಂಚಾಯತ್ನ ವಾರ್ಡ್ ೧ರಲ್ಲಿ ಸ್ಪರ್ಧಿಸಿದ ಬಶೀರ್ ಕಾಯಾರ್ಗ, ಶ್ರೀಮತಿ ಮೀನಾಕ್ಷಿ, ರಶೀದಾ ಕುಕ್ಕುಜೆ , ಪಾಲ್ತಾಡಿ ೧ ಮತ್ತು ೨ನೇ ವಾರ್ಡ್ನಲ್ಲಿ ಸ್ಪರ್ಧಿಸಿದ ಎ ಆರ್ ರಝಾಕ್, ಶೇಕ್ ರಝಾಕ್, ರಹ್ಮಾನ್ ಹಾಗೂ ಬೆಳಂದೂರು ಗ್ರಾಮ ಪಂಚಾಯತ್ನ ಕುದ್ಮಾರು ೨ನೇ ವಾರ್ಡ್ನಲ್ಲಿ ಸ್ಪರ್ಧಿಸಿದ ಉಸ್ಮಾನ್ ಕೂರ ಮತ್ತು ಸವಣೂರು ೨ ಮತ್ತು ೩ನೇ ವಾರ್ಡ್ನಿಂದ ಆಯ್ಕೆಯಾದ ರಫೀಕ್ ಎಂ ಎ, ಶ್ರೀಮತಿ ಚೆನ್ನು, ಶಬೀನಾ , ರಝಾಕ್ ಕೆನರಾ, ಬಾಬು ಎನ್ ಸವಣೂರು ರವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಪುತ್ತೂರು ಜಿಲ್ಲಾಧ್ಯಕ್ಷ ಜಾಬಿರ್ ಅರಿಯಡ್ಕ, ಸವಣೂರು ಡಿವಿಷನ್ ಅಧ್ಯಕ್ಷ ರಫೀಕ್ ಎಂ ಎಸ್, ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಇಸ್ಮಾಯಿಲ್ ಟಾಸ್ಕೋ, ಬದ್ರಿಯಾ ಜುಮಾ ಮಸೀದಿ ಚಾಪಲ್ಲ ಅಧ್ಯಕ್ಷ ಉಮ್ಮರ್ ಹಾಜಿ ಕೆನರಾ,ಮಿಹ್ರಾಜ್ ಜುಮಾ ಮಸೀದಿ ಮಾಜಿ ಅಧ್ಯಕ್ಷ ಹಸೈನಾರ್ ಹಾಜಿ ಪರಣೆ, ಯುವ ಉಧ್ಯಮಿ ಬಿ ಎಂ ಮಹಮ್ಮದ್, ಅಲ್ ಅನ್ಸಾರ್ ಚಾರಿಟೇಬಲ್ ಟ್ರಸ್ಟ್ ಸವಣೂರು ಗೌರವಾಧ್ಯಕ್ಷ ಅಬ್ದುಲ್ ಕಾದರ್ ಚೆಡವು, ಸವಣೂರು ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ರಿಯಾದ್ ಅಧ್ಯಕ್ಷ ನಝೀರ್ ಸಿ ಎ, ಕರ್ಣಾಟಕ ಮುಸ್ಲಿಂ ಜಮಾಅತ್ ಸವಣೂರು ಕಾರ್ಯದರ್ಶಿ ಅಬ್ದುಲ್ಲಾ ಎಸ್ ಇ, ಎಸ್ಡಿಪಿಐ ಸವಣೂರು ವಲಯ ಉಪಾಧ್ಯಕ್ಷ ಸಲೈಮಾನ್ ಪಲ್ಲತಮೂಲೆ, ಎಸ್ಡಿಪಿಐ ಪುತ್ತೂರು ವಿಧಾನ ಸಭಾ ಸಮಿತಿ ಸದಸ್ಯರಾದ ಪಿಬಿಕೆ ಮಹಮ್ಮದ್, ಪಾಪ್ಯುಲರ್ ಫ್ರಂಟ್ ಸವಣೂರು ಏರಿಯಾ ಅಧ್ಯಕ್ಷ ಇರ್ಷಾದ್ ಸರ್ವೆ ಸಹಿತ ಹಲವು ಗಣ್ಯರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಸಹಿತ ಹಲವರು ಉಪಸ್ಥಿತರಿದ್ದರು. ಸಂಶೀರ್ ಸ್ವಾಗತಿಸಿದರು, ರಫೀಕ್ ಪಣೆಮಜಲ್ ವಂದಿಸಿದರು.