HomePage_Banner
HomePage_Banner
HomePage_Banner
HomePage_Banner

ಪುತ್ತೂರಿನಲ್ಲಿ ‘ಸಾಹೇಬ್ರು ಬಂದವೇ’ ನಾಟಕ ಪ್ರದರ್ಶನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಡಾ.ಶಿವರಾಮ ಕಾರಂತರ ಬಾಲವನ ಹಾಗೂ ಸಹಾಯಕ ಆಯುಕ್ತರ ಕಛೇರಿ ಪುತ್ತೂರು ಇದರ ಆಶ್ರಯದಲ್ಲಿ ಜ.9ರಂದು ಸಂಜೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಸುತ ಪಡಿಸುವ ‘ಸಾಹೇಬ್ರು ಬಂದವೇ’ ನಾಟಕ ಪ್ರದರ್ಶನ ನಡೆಯಿತು.

ನಾಟಕ ಪ್ರದರ್ಶನದ ಮುಂಚಿತವಾಗಿ ನಡೆದ ಸಭಾ ಕಾರ್ಯಕ್ರಮವನ್ನು ಶಾಸಕ ಸಂಜೀವ ಮಠಂದೂರು ಅವರು ಉದ್ಘಾಟಿಸಿ ಮಾತನಾಡಿ ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿಯಾಗಿದಾಗ ಕರ್ನಾಟಕದ ಜನತೆಗೆ ಅರೆಭಾಷೆ ಸಂಸ್ಕೃತಿಯ ಪರಿಚಯವನ್ನು ಅರೆಭಾಷೆ ಸಂಸ್ಕೃತಿಕ ಸಾಹಿತ್ಯ ಅಕಾಡೆಮಿಯ ಮೂಲಕ ಮಾಡಿಸಿದರು. ಭಾಷೆಯನ್ನು ಯುವ ಪೀಳಿಗೆಗೆ ತಿಳಿಸುವ ಮೂಲಕ ಅಕಾಡೆಮಿಯ ಉದ್ದೇಶವನ್ನು ತಿಳಿಸುವ ಕೆಲಸ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಭಾಷೆಯನ್ನು ಕಲಿಯುವ ಮೂಲಕ ಜನಾಂಗಕ್ಕೆ ಗೌರವ ಕೊಟ್ಟಂತಾಗುತ್ತದೆ ಎಂದ ಅವರು ಭಾಷೆಯು ಜನಾಂಗ, ಸಂಸ್ಕೃತಿಯನ್ನು ಗುರುತಿಸುವ ಕೆಲಸ ಮಾಡುತ್ತದೆ ಎಂದರು. ಪುತ್ತೂರು ಡಾ. ಶಿವರಾಮ ಕಾರಂತರ ಬಾಲವನದಲ್ಲಿ ತಿಂಗಳ ಕಾರ್ಯಕ್ರಮ ಸೇರಿದಂತೆ ವಾರಕ್ಕೊಂದು ಕಾರ್ಯಕ್ರಮವನ್ನು ನಿರಂತರ ಮಾಡಲಾಗುತ್ತಿದೆ. ಮುಂದಿನ ದಿನ ಬಾಲವನ ಹಿರಿಯರ ಬಾಲವನ ಆಗಬೇಕು. ಬಾಲವನದ ಒಟ್ಟು ಅಭಿವೃದ್ಧಿಗೆ ಉಸ್ತುವಾರಿ ಸಚಿವರು ಕೂಡಾ ಒಂದಷ್ಟು ಯೋಜನೆ ಹಾಕಿಕೊಂಡಿದ್ದಾರೆ ಎಂದರು.

ಪುತ್ತೂರು ಸಾಹಿತ್ಯ, ಸಂಸ್ಕೃತಿಯ ಗುರುತ್ವ:
ಅಧ್ಯಕ್ಷತೆ ವಹಿಸಿದ್ದ ಸಹಾಯಕ ಕಮೀಷನರ್ ಆಗಿರುವ ಬಾಲವನ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಡಾ.ಯತೀಶ್ ಉಳ್ಳಾಲ್ ಅವರು ಮಾತನಾಡಿ ಪುತ್ತೂರು ಸಾಹಿತ್ಯ ಮತ್ತು ಸಂಸ್ಕೃತಿಯ ಗುರುತ್ವ. ಅನೇಕ ಸಾಹಿತಿಗಳ ಕರ್ಮಭೂಮಿ ಪುತ್ತೂರು. ಇಂತಹ ಸಂದರ್ಭದಲ್ಲಿ ಅರೆಭಾಷೆಯಲ್ಲಿ ಪ್ರದರ್ಶನಗೊಳ್ಳುತ್ತಿರುವ ನಾಟಕ ಪುತ್ತೂರಿನ ಕಿರೀಟಕ್ಕೆ ಗರಿಯಾಗಲಿದೆ ಎಂದರು.

ಭಾಷಾ ಪರಿಚಯಕ್ಕೆ ರಂಗಭೂಮಿ ಅಗತ್ಯ:
ಕರ್ನಾಟಕ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಅವರು ಮಾತನಾಡಿ ಪ್ರಾದೇಶಿಕ ಭಾಷೆಯನ್ನು ಪರಿಚಯಿಸಲು ರಂಗಭೂಮಿ ಅಗತ್ಯ. ರಂಗಪಯಣದ ಮೂಲಕ ಇಂತಹ ಭಾಷೆಯ ಪರಿಚಯ ಮಾಡಲು ಸಹಕಾರ ಸಿಕ್ಕಿದೆ ಎಂದರು.

ಬದುಕಿನ ಭಾಗವಾಗಿ ಅರೆಭಾಷೆ ಬೆಳೆದಿದೆ:
ಕರ್ನಾಟಕ ರಂಗ ಸಮಾಜದ ಸದಸ್ಯರು ರಂಗ ನಿರ್ದೇಶಕರು ಆಗಿರುವ ಜೀವನ್ ರಾಮ್ ಸುಳ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅಳಿವಿನಂಚಿನ ಭಾಷೆ ಉಳಿಯುವ ನಿಟ್ಟಿನಲ್ಲಿ ಅಕಾಡೆಮಿ ಆರಂಭಗೊಂಡಿತ್ತು. ಅರೆಭಾಷೆಯ ಸೊಗಡನ್ನು ಗಡಿ ದಾಟಿಸಿ ತೋರಿಸಲು ರಂಗ ಮಾಧ್ಯಮ ಅಗತ್ಯ. ಹಾಗಾಗಿ ಇವತ್ತು ಬದುಕಿನ ಭಾಗವಾಗಿ ಅರೆಭಾಷೆ ಬೆಳೆದಿದೆ ಎಂದರು. ನಗರಸಭಾ ಸದಸ್ಯೆ ದೀಕ್ಷಾ ಪೈ, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಹೆಚ್.ಡಿ.ಶಿವರಾಮ್, ತಹಶೀಲ್ದಾರ್ ರಮೇಶ್ ಬಾಬು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಾಲವನದ ವಿಶೇಷ ಕರ್ತವ್ಯಾಧಿಕಾರಿ ಡಾ. ಸುಂದರ್ ಕೇನಾಜೆ ಸ್ವಾಗತಿಸಿ, ಭರತ್ ಅಳಸಂಡೆಮಜಲು ವಂದಿಸಿದರು. ನಾಟಕವನ್ನು ಅರೆಭಾಷೆಗೆ ಅನುವಾದ ಮಾಡಿದ ಜಯಪ್ರಕಾಶ್ ಕುಕ್ಕೇಟಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.