- ಪುತ್ತೂರು ಬ್ಲಾಕ್ಗೆ 1978 ಮತದಾರರು
- ಆನ್ಲೈನ್ ಮೂಲಕ ಮತ ಚಲಾವಣೆ
ಪುತ್ತೂರು: ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷತೆಗೆ ಜ.11ರಂದು ಆನ್ಲೈನ್ ಮೂಲಕ ಚುನಾವಣೆ ನಡೆಯಲಿದೆ. ಪುತ್ತೂರು ಬ್ಲಾಕ್ಗೆ ಸಂಬಂಧಿಸಿದಂತೆ ನೋಂದಾಯಿತ ೧೯೭೮ ಯುವ ಕಾಂಗ್ರೆಸ್ ಮತದಾರರು ಆನ್ಲೈನ್ ಮೂಲಕ ಮತ ಚಲಾಯಿಸಲಿದ್ದಾರೆ. ಈ ಹಿಂದೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯುವ ಕಾಂಗ್ರೆಸ್ ಅಧ್ಯಕ್ಷತೆಗೆ ಚುನಾವಣೆ ನಡೆಯುತಿತ್ತು. ಆದರೆ ಈ ಬಾರಿ ಪುತ್ತೂರು ಬ್ಲಾಕ್ ಹಾಗೂ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ವಿಂಗಡಿಸಿ ಕ್ಷೇತ್ರಕ್ಕೆ ೨ ಯುವ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಿಸಲಾಗುತ್ತದೆ. ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷತೆಗೆ ಕೂರ್ನಡ್ಕದ ಸನದ್, ಕೆಮ್ಮಾರ ಬಾಲಕೃಷ್ಣ ಗೌಡ, ಪಾಣಾಜೆಯ ಶ್ರೀಪ್ರಸಾದ್ ಹಾಗೂ ಬೆಳ್ಳಿಪ್ಪಾಡಿಯ ಅಭಿಷೇಕ್ ಹಾಗೂ ಕೊಡಿಪ್ಪಾಡಿಯ ರಿಯಾಝ್ ರವರು ಕಣದಲ್ಲಿದ್ದಾರೆ. ವಿಟ್ಲ – ಉಪ್ಪಿನಂಗಡಿ ಬ್ಲಾಕ್ಗೆ ಸಿದ್ಧೀಕ್ ಉಪ್ಪಿನಂಗಡಿ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇದೇ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷತೆಗೆ ಹಾಗೂ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಹುದ್ದೆಗೂ ಚುನಾವಣೆ ನಡೆಯಲಿದ್ದು, ಜಿಲ್ಲಾಧ್ಯಕ್ಷತೆಗೆ ಲುಕ್ಮಾನ್ ಬಂಟ್ವಾಳ, ಗಿರೀಶ್ ಆಳ್ವ ಮಂಗಳೂರು, ಸುಹೈಲ್ ಸುರತ್ಕಲ್ ರವರು ಸ್ಪರ್ಧಿಸಲಿದ್ದಾರೆ. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷತೆಗೆ ಹಾಲಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹಾಗೂ ಮುಹಮ್ಮದ್ ನಲಪ್ಪಾಡ್ ಸೇರಿದಂತೆ ಏಳು ಮಂದಿ ಕಣದಲ್ಲಿದ್ದರು. ಈ ಪೈಕಿ ಮಿಥುನ್ ರೈಯವರು ಕಣದಿಂದ ಹಿಂದೆ ಸರಿದಿದ್ದಾರೆ. ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಪುತ್ತೂರು ಬ್ಲಾಕ್ ನಿಂದ ಮತದಾರರು ಏಕಕಾಲದಲ್ಲಿ ನಾಲ್ಕು ಮತಗಳನ್ನು ಚಲಾಯಿಸಲಿದ್ದು, ಬ್ಲಾಕ್ ಮಟ್ಟದ ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ಹಾಗೂ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ಮತ್ತು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ಮತ ಚಲಾಯಿಸಲಿದ್ದಾರೆ. ಪುತ್ತೂರು ಬ್ಲಾಕ್ನ ೫ ಮಂದಿ ಅಭ್ಯರ್ಥಿಗಳಲ್ಲಿ ಅತೀ ಹೆಚ್ಚು ಮತ ಪಡೆದವರು ಅಧ್ಯಕ್ಷರಾಗಿಯೂ, ಅದಕ್ಕಿಂತ ಕಡಿಮೆ ಮತ ಪಡೆದವರು ಪ್ರಥಮ ಉಪಾಧ್ಯಕ್ಷರಾಗಿಯೂ, ಅದಕ್ಕಿಂತ ಕಡಿಮೆ ಮತ ಪಡೆದವರು ಎರಡನೇ ಉಪಾಧ್ಯಕ್ಷರಾಗಿಯೂ ಆಯ್ಕೆ ಯಾಗಲಿದ್ದಾರೆ. ಆದರೆ ಅಭಿಷೇಕ್ ಬೆಳ್ಳಿಪ್ಪಾಡಿ ಮತ್ತು ರಿಯಾರh ಕಣದಿಂದ ನಿವೃತ್ತಿ ಘೋಷಿಸಿರುವುದಾಗಿ ತಿಳಿದು ಬಂದಿದೆ.
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿದ ಮಿಥುನ್ ರೈ
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಸ್ಪರ್ಧಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಯವರು ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿದ್ದಾರೆ ಎಂದು ವರದಿಯಾಗಿದೆ. ಜ.೧೦,೧೨ ಹಾಗೂ ೧೩ ರಂದು ನಡೆಯಲಿರುವ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ದಕ್ಷಿಣ ಕನ್ನಡದಿಂದ ಅಭ್ಯರ್ಥಿಯಾಗಿ ಸ್ಪರ್ಧೆಗೆ ಉಮೇದುವಾರಿಕೆ ಸಲ್ಲಿಸಿದ್ದ ಮಿಥುನ್ ರೈಯವರು, ತಾನು ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರ ಅಪ್ತನಾಗಿರುವ ಕಾರಣ, ಕೆಪಿಸಿಸಿ ಅಧ್ಯಕ್ಷರ ನಿರ್ದೇಶನದಂತೆ ನಾನು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಉಮೇದುವಾರಿಕೆಯಿಂದ ಹಿಂದೆ ಸರಿಯುತ್ತಿzನೆ ಎಂದು ಹೇಳಿದ್ದು ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಲು ವಿನಂತಿ ಮಾಡಿಕೊಂಡಿದ್ದಾರೆ. ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವ ಕುರಿತು ಮಿಥುನ್ ರೈ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದನ್ನು ಹಾಕಿ ಮಾಹಿತಿಯನ್ನು ಖಚಿತಪಡಿಸಿದ್ದಾರೆ.