ಪುತ್ತೂರು: ಪ್ರಾಮಾಣಿಕ, ವಿಶ್ವಾಸಾರ್ಹ ಹಾಗೂ ಅತ್ಯುತ್ತಮ ಸೇವೆಯೊಂದಿಗೆ, ಗುಣಮಟ್ಟದಲ್ಲೂ ಹೆಸರುಗಳಿಸಿಕೊಂಡಿರುವ, ಕಳೆದ 14 ವರುಷಗಳಿಂದ ದರ್ಬೆ ಮೊಹಿದ್ದಿನ್ ಬಿಲ್ಡಿಂಗ್ನಲ್ಲಿ ವ್ಯವಹರಿಸುತ್ತಾ ಗ್ರಾಹಕರ ಪ್ರೀತಿ, ವಿಶ್ವಾಸ ಹಾಗೂ ನಂಬಲರ್ಹ ಸಂಸ್ಥೆಯಾಗಿ, ಬೆಳ್ತಂಗಡಿಯ ಉಜಿರೆಯಲ್ಲಿ ಸಹಸಂಸ್ಥೆಯನ್ನು ಹೊಂದಿರುವ ಎಸ್.ಎಸ್.ಸ್ಕೇಲ್ ಬಜ್ಹಾರ್ನ ಎರಡನೇ ಶಾಖೆ ಕಡಬದಲ್ಲಿ ಜ.11ರಂದು ಶುಭಾರಂಭಗೊಳ್ಳಲಿದೆ.
ದುವಾಃ ಆಶೀರ್ವಚನವನ್ನು ಪಿ.ಎಂ ಇಬ್ರಾಹಿಂ ದಾರಿಮಿ- ಇಮಾಮ್ ಆರ್ಟಿ ಜೆ ಎಂ ಕಡಬ ಇವರು ನೆರವೇರಿಸಲಿದ್ದು, ಅಸಿಸ್ಟೆಂಟ್, ಕಂಟ್ರೋಲರ್ ಆಫ್ ಲೀಗಲ್ ಮೆಟ್ರೋಲೊಜಿ ಮಂಗಳೂರು ಇದರ ಕೆ.ಜಿ. ಕುಲಕರ್ಣಿ ಯವರು ಉದ್ಘಾಟನೆ ಮಾಡಲಿದ್ದಾರೆ. ಗೌರವ ಅತಿಥಿಯಾಗಿ ಕಡಬ ಠಾಣಾ ಸಬ್ ಇನ್ಸ್ಪೆಕ್ಟರ್ ರುಕ್ಮ ನಾಯ್ಕ ಎ. ಹಾಗೂ ಇನ್ಸ್ಪೆಕ್ಟರ್ ಆಫ್ ಲೀಗಲ್ ಮೆಟ್ರೋಲಜಿ ಪುತ್ತೂರು ಸಬ್ ಡಿವಿಷನ್ ಇದರ ನರೇಂದ್ರ ಸಿ. ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ಎ. ಸಿರಾಜುದ್ದೀನ್ ಫೈಝಿ ಇಮಾಮ್ ಮಾಡನ್ನೂರು ಕಾವು ಪುತ್ತೂರು, ಫಾರೂಕ್ ಸಖಾಫೀ ಇಮಾಮಿ ಇಮಾಮ್ ಕೇಂದ್ರ ಜುಮ್ಮಾ ಮಸೀದಿ ಕಡಬ, ಅಹ್ಮದ್ ನಯೀಮ್ ಫೈಝೀ ಇಮಾಮ್ ಮಸ್ಜಿದ್ನೂರ್ ಬಪ್ಪಳಿಗೆ, ಕೆ.ಮೊಹಮ್ಮದ್ ಮುಸ್ಲಿಯಾರ್ ವೈಸ್ ಪ್ರೆಸಿಡೆಂಟ್ ಆರ್ಟಿಜೆಎಂ ಕಡಬ, ಚಿದಾನಂದ ಗೌಡ ಬಿಲ್ಡಿಂಗ್ ಮಾಲಕರು ಮಧುರಾ ಕಾಂಪ್ಲೆಕ್ಸ್ ಕಡಬ, ಹಾಜಿ ಕೆ ಎಂ ಹನೀಫ್ ಮಾಜಿ ಅಧ್ಯಕ್ಷರು ಕಡಬ ಗ್ರಾ. ಪಂಚಾಯತ್, ಕೃಷ್ಣ ಶೆಟ್ಟಿ ಮಾಜಿ ಜಿ. ಪಂ. ಸದಸ್ಯರು ಕಡಬ, ವಿಕ್ಟರ್ ಮಾರ್ಟಿಸ್ ಅಧ್ಯಕ್ಷರು, ಹಸಿರುಸೇನೆ ರೈತ ಸಂಘ ಕಡಬ ತಾಲೂಕು, ರಮುಲ್ಲಾ ಸನ್ರೈಸ್ ಕಲರ ತಾ. ಅಧ್ಯಕ್ಷರು ಎಸ್ಡಿಪಿಐ ಕಡಬ, ಆದಂ ಕುಂಡೋಳಿ ಪಂಚಾಯತ್ ಸದಸ್ಯರು ಕಡಬ, ಪುತ್ತು ಮೇಸ್ತ್ರೀ ಸೀಮಾ ಕನ್ಸ್ಸ್ಟ್ರಕ್ಷನ್ ಕೋಡಿಂಬಾಳ, ಸಯ್ಯದ್ ಮಿರನ್ ಸಾಹೇಬ್ ತಾ. ಅಧ್ಯಕ್ಷರು ಜೆಡಿಎಸ್ ಕಡಬ, ಶಿವರಾಮ್ ಎಂಎಸ್ ತಾ. ವರ್ತಕರ ಸಂಘದ ಅಧ್ಯಕ್ಷರು ಕಡಬ, ಕಲಂದರ್ ಎ.ಕೆ ಎಕೆ ಗ್ರೂಪ್ಸ್ ಆಂಡ್ ಸ್ಪೈಸಸ್ ಕೋಡಿಂಬಾಳ, ರಫೀಕ್ ಅಲೆಕ್ಕಾಡಿ ಮಂಗಳೂರು ಟ್ರೇಡರ್ಸ್, ಮಧುರ ಕಾಂಪ್ಲೆಕ್ಸ್ ಕಡಬ ಭಾಗವಹಿಸಲಿದ್ದಾರೆ.
ಎಲ್ಲಾ ಪ್ರಸಿದ್ದ ಕಂಪನಿಯ ತೂಕದ ಯಂತ್ರಗಳು,ಕರೆನ್ಸಿ ಕೌಂಟಿಂಗ್ ಮೆಷಿನ್ಗಳು, ಜ್ಯುವೆಲರ್ಸ್ ಮಳಿಗೆಗೆ ಬೇಕಾದ 1 ಮಿಲಿಗ್ರಾಂ ಸ್ಕೇಲ್ ಗಳು, ಹಳೇಯ ಮಾದರಿಯ ತೂಕದ ಯಂತ್ರಗಳು ಜೊತೆಗೆ ಯಾವುದೇ ಕಂಪೆನಿಯ ತೂಕದ ಯಂತ್ರಗಳನ್ನು ದುರಸ್ತಿಗೊಳಿಸಿ ಅಥವಾ ನೂತನ ಸ್ಕೇಲ್ನೊಂದಿಗೆ ಬದಲಾಯಿಸಿ ಕೊಡುವ ಎಲ್ಲಾ ಸೇವೆಗಳು ನಮ್ಮಲ್ಲಿ ಇದೆ ಯೆಂದು ಮಾಲಕ ಬಿ.ಎಂ. ಶಮೀರ್ ತಿಳಿಸಿದ್ದಾರೆ.