ಬಡಗನ್ನೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಜ.12 ರಂದು ಆರಂಭಗೊಂಡು 14 ರ ತನಕ ಕ್ಷೇತ್ರ ತಂತ್ತಿವರ್ಯರಾದ ಬ್ರಹ್ಮಶ್ರೀ ಕುಂಟಾರು ಶ್ರೀ ವಾಸುದೇವ ತಂತ್ರಿಯವರ ನೇತ್ರತ್ವದಲ್ಲಿ ನಡೆಯಲಿರುವುದು.
ಕಾರ್ಯಕ್ರಮಗಳು: ಜ.12ರಂದು ಬಲಿವಾಡು ಶೇಖರಣೆ, ಹಸಿರುವಾಣಿ ಹೊರೆಕಾಣಿಕೆ ಸಂಗ್ರಹಿಸುವುದು. ಸಂಜೆ ಗಂ 6 ರಿಂದ ಉಗ್ರಾಣ ತುಂಬಿಸುವುದು ಮಹಾಪೂಜೆ, ಮಹಾಗಣಪತಿ ಪೂಜೆ, ಪ್ರಾರ್ಥನೆ, ಪ್ರಸಾದ ವಿತರಣೆ ನಡೆಯಲಿದೆ.
ಜ.13 ರಂದು ಬೆಳಗ್ಗೆ ಗಂ. 8 ರಿಂದ ಮಹಾಗಣಪತಿ ಹವನ, ನವಕಾಭಿಷೇಕ ಬಳಿಕ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ಸಾಂಸ್ಕೃತಿಕ ಸೇವಾ ಸಮಿತಿ ಪಡುಮಲೆ ಹಾಗೂ ಸರ್ವಶಕ್ತಿ ಮಹಿಳಾ ಭಜನಾ ತಂಡದ ಸದಸ್ಯರಿಂದ ಭಜನಾ ಕಾರ್ಯಕ್ರಮ. 11 ರಿಂದ ತುಲಾಭಾರ ಸೇವೆ, ಮಹಾಪೂಜೆ, ಬಲಿ ಹೊರಡುವುದು,ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಗಂ 6 ರಿಂದ ನೀಲೇಶ್ವರ ಗಂಗಾಧರ ಮಾರಾರ್ ಮತ್ತು ಬಳಗದವರಿಂದ ‘ತಾಯಂಬಕ. ರಾತ್ರಿ ‘7 ರಿಂದ ಶ್ರೀ ದೇವರ ಉತ್ಸವ ಬಲಿ,ನೃತ್ಯ ಬಲಿ,ಕಟ್ಟೆ ಪೂಜೆ, ಸುಡುಮದ್ದು ಪ್ರದರ್ಶನ, ಶ್ರೀ ಭೂತ ಬಲಿ ನಡೆಯಲಿದೆ. ಜ.14 ರಂದು ಬೆಳಗ್ಗೆ ಗಂ 9 ರಿಂದ ಶ್ರೀ ದೇವರ ಬಲಿ ಹೊರಡುವುದು, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಂತ್ರಾಕ್ಷತೆ,ಮಹಾಪೂಜೆ, ಪ್ರಸಾದ ವಿತರಣೆ, ಬಳಿಕ ಅನ್ನ ಸಂತರ್ಪಣೆ . ರಾತ್ರಿ ಗಂ 8 ರಿಂದ ಶ್ರೀ ದೇವರಿಗೆ ರಂಗಪೂಜೆ, ನಡೆಯಲಿರುವುದು. ಸಂಜೆ ಗಂ 6 ರಿಂದ ನುರಿತ ಕಲಾವಿದರ ಕುಡುವಿಕೆಯಿಂದ ” ದುಶ್ಯಾಸನ ವಧೆ,ಗಜೇಂದ್ರ ಮೊಕ್ಷ- ರಕ್ತ ರಾತ್ರಿ ” ಯಕ್ಷಗಾನ ಬಯಲಾಟ ನಡೆಯುವುದು.
ಆ ಪ್ರಯುಕ್ತ ಈ ಪುಣ್ಯ ಕಾರ್ಯಕ್ರಮದಲ್ಲಿ ಊರ ಪರಪೂರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ದೇವರ ಗಂಧ ಪ್ರಸಾದ ಸ್ವೀಕರಿಸಿ, ತನು ಮನ ಧನಗಳಿಂದ ಸಹಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತ ಅಧ್ಯಕ್ಷ ಮನೋಜ್ ರೈ ಪೇರಾಲು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.