ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಗುಮ್ಮಟೆಗದ್ದೆ ಬಂಗೇರ ತರವಾಡು ಮನೆಯಲ್ಲಿ ಫೆ.16ರಿಂದ ಫೆ.18ರ ತನಕ ನಡೆಯಲಿರುವ, ದೈವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ತರವಾಡು ಮನೆಯ ಗೃಹ ಪ್ರವೇಶ ಹಾಗೂ ದೈವಗಳ ನೇಮೋತ್ಸವದ ಆಮಂತ್ರಣ ಪತ್ರ ಬಿಡುಗಡೆಯು ಜ.10ರಂದು ನಡೆಯಿತು.
ಬ್ರಹ್ಮಕಲಶೋತ್ಸವದ ಗೌರವಾಧ್ಯಕ್ಷರು, ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾಗಿರುವ ಜಯಂತ ನಡುಬೈಲು ಆಮಂತ್ರಣ ಪತ್ರ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು ತರವಾಡು ಮನೆ ಬೆಳಗಿದರೆ ನಮ್ಮ ಮನೆ ಬೆಳಗಿದಂತೆ. ಅದು ಕುಟುಂಬ ಸದಸ್ಯರ ಭವಿಷ್ಯದ ಬೆಳವಣಿಗೆಗೆ ಪೂರಕ. ಕುಟುಂಬ ಸದಸ್ಯರೆಲ್ಲರೂ ಸೇರಿಕೊಂಡು ಬಂಧುತ್ವ ವೃದ್ಧಿಯಾಗುತ್ತದೆ. ವೈಯಕ್ತಿಕ ಭಿನ್ನಾಭಿಪ್ರಾಯ, ವೈಮನಸ್ಸುಗಳನ್ನು ಬಿಟ್ಟು ನಮ್ಮ ಮನೆಯ ಕಾರ್ಯಕ್ರಮದಂತೆ ತರವಾಡು ಮನೆ ಪ್ರತಿಯೊಂದು ಕಾರ್ಯಕ್ರಮದಲ್ಲೂ ಕುಟುಂಬದ ಪ್ರತಿಯೊಬ್ಬ ಸದಸ್ಯರು ಭಾಗವಹಿಸಬೇಕು. ಕುಟುಂಬದ ಪ್ರತಿಯೊಬ್ಬ ಸದಸ್ಯರು ಭಾಗವಹಿಸಿ, ಬ್ರಹ್ಮಕಲಶೋತ್ಸವ ಕಾರ್ಯಕ್ರಮವನ್ನು ಉತ್ತಮ ಕಾರ್ಯಕ್ರಮವಾಗಿ ನಡೆಸುವ ಮೂಲಕ ಮಾದರಿ ಕಾರ್ಯಕ್ರಮವಾಗಿ ಮೂಡಿಬರಬೇಕು ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಬಾಲಕೃಷ್ಣ ಪೂಜಾರಿ ಶಕ್ತಿನಗರ, ಕಾರ್ಯದರ್ಶಿ ರಾಜು ಪೂಜಾರಿ ಬನ್ನೂರು, ಪ್ರಧಾನ ಸಂಘಟನಾ ಕಾರ್ಯದರ್ಶಿ ಹೊನ್ನಪ್ಪ ಕುಶಾಲನಗರ, ಸಂಘಟನಾ ಕಾರ್ಯದರ್ಶಿ ದಾಮೋದರ ಮಡಿಕೇರಿ, ಆಡಳಿತ ಸಮಿತಿ ಅಧ್ಯಕ್ಷ ಸಾಂತಪ್ಪ ಪೂಜಾರಿ ಕೆರೆಮೂಲೆ, ಉಪಾಧ್ಯಕ್ಷೆ ಚೆನ್ನಮ್ಮ ಕುದ್ಕಲ್, ಜತೆ ಕಾರ್ಯದರ್ಶಿ ಯಶೋಧ ವಿಜಯ ಕುಮಾರ್ ಮಾಡಾವು, ಕೋಶಾಧಿಕಾರಿ ವೇಣುಗೋಪಾಲ ಪತ್ತನಡ್ಕ, ಅನುವಂಶಿಕ ಮೊಕ್ತೇಸರ ಲಕ್ಷ್ಮೀ ಅರೆಹಳ್ಳಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಉದಯ ಕುಮಾರ್ ಪಕಳಕುಂಜ, ಶೇಷಪ್ಪ ಪೂಜಾರಿ ದಾಸನಮಜಲು, ಚಿತ್ರ ಪತ್ತನಡ್ಕ, ಮುತ್ತಪ್ಪ ಪೂಜಾರಿ ಪತ್ತನಡ್ಕ, ಸಂಜೀವ ಪೂಜಾರಿ ಬನ್ನೂರು, ಕಿಟ್ಟಣ್ಣ ಪೂಜಾರಿ, ಸಾಗರ್ ಬನ್ನೂರು, ಮೀನಾಕ್ಷಿ ಹರೀಶ್ ಹಳೆನೇರಂಕಿ, ಕೋಟಿ ಪೂಜಾರಿ ಪತ್ತನಡ್ಕ ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಿತಿ ಅಧ್ಯಕ್ಷ ಸಮಿತಿ ಅಧ್ಯಕ್ಷ ಶೇಷಪ್ಪ ಪೂಜಾರಿ ಬನ್ನೂರು ಸ್ವಾಗತಿಸಿ, ವಂದಿಸಿದರು.