HomePage_Banner
HomePage_Banner
HomePage_Banner
HomePage_Banner

ಮೀನಾಡಿ ಯುವ ಬ್ರೀಗೇಡ್‌ನಿಂದ ಸ್ವಚ್ಚತಾ ಕಾರ್ಯ | ನೂತನ ವಧು, ವರರು ಸ್ವಚ್ಚತಾ ಕಾರ್ಯದಲ್ಲಿ ಭಾಗಿ!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಕಲ್ಲುಗುಡ್ಡೆ: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಮೀನಾಡಿ ಶಾಲೆಯಲ್ಲಿ ಯುವ ಬ್ರೀಗೇಡ್ ಕಡಬ ವತಿಯಿಂದ ಸ್ವಚ್ಚತೆ ಹಾಗೂ ಶ್ರಮದಾನ ನಡೆಯಿತು. ಶಾಲಾ ವಠಾರ ಸ್ವಚ್ಚತೆ, ಹುಲ್ಲು ಕತ್ತರಿಸುವುದು ಹಾಗೂ ಶೌಚಾಲಯದ ಗೋಡೆಗೆ ಬಣ್ಣ ಬಳಿಯಲಾಯಿತು. ವಿಶೇಷ ಎಂದರೆ ಮಂಗಳವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವ ಬ್ರೀಗೇಡ್ ಸದಸ್ಯ ನೂಜಿಬಾಳ್ತಿಲ ಗ್ರಾಮದ ನೀರಾರಿ ಕಿಶೋರ್ ಹಾಗೂ ಭವ್ಯಾ ದಂಪತಿ ಮದುವೆಯಾದ ಮರುದಿನವೇ ವಧೂವರರು ಕೂಡ ವಾರದ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಕಳೆದ ಕೆಲ ವರ್ಷಗಳಿಂದ ಸ್ವಚ್ಚತಾ ಹಾಗೂ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಯುವ ಬ್ರೀಗೇಡ್ ತಂಡ ಎರಡು ರವಿವಾರದಂದು ವಜ್ರ ಮಹೋತ್ಸವ ಸಂಭ್ರಮದಲ್ಲಿರುವ ಮೀನಾಡಿ ಶಾಲೆಯಲ್ಲಿ ಸ್ವಚ್ಚತಾ ಹಾಗೂ ಇತರೆ ಕೆಲಸಗಳನ್ನು ನಿರ್ವಹಿಸಿದರು. ಶಾಲಾ ಮುಖ್ಯ ಶಿಕ್ಷಕ ಗೋವಿಂದ ನಾಯಕ್ ಹಾಗೂ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಪುತ್ತು ಕುಂಞಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.