HomePage_Banner
HomePage_Banner
HomePage_Banner
HomePage_Banner
Breaking News

ಜ.17: ರೋಟರಿ ಯುವದಿಂದ ಭಾಷಣ ಕಲೆಯ ಬಗ್ಗೆ ಒಂದು ದಿನದ ಕಾರ್ಯಾಗಾರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ರೋಟರಿ ಕ್ಲಬ್ ಪುತ್ತೂರು ಯುವ ಇದರ ವತಿಯಿಂದ ಜ.17ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಭಾಷಣ ಕಲೆಯ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಸೈನಿಕ ಭವನ ರಸ್ತೆಯಲ್ಲಿರುವ ರೋಟರಿ ಮನಿಶಾ ಸಭಾಂಗಣದಲ್ಲಿ ಸಾರ್ವಜನಿಕರಿಗಾಗಿ ಹಮ್ಮಿಕೊಳ್ಳಲಾಗಿದೆ.

ಕಣ್ಣೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ನಿರ್ದೇಶಕರಾಗಿರುವ ಡಾ. ರಾಜೇಶ್ ಬೆಜ್ಜಂಗಳರವರು ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಕಾರ್ಯಾಗಾರದಲ್ಲಿ ಉತ್ತಮ ಭಾಷಣ ಮಾಡುವುದು ಹೇಗೆ? ಸ್ವಾಗತ ಭಾಷಣ, ಪ್ರಾಸ್ತಾವಿಕ ಭಾಷಣ, ಧನ್ಯವಾದ ಸಮರ್ಪಣೆ, ಅಧ್ಯಕ್ಷೀಯ ಭಾಷಣ, ಅತಿಥಿಗಳ ಪರಿಚಯ, ವಿಷಯಾಧಾರಿತ ಮಾಹಿತಿ ನೀಡುವುದು, ಭಾಷಣದ ಸಮಯದಲ್ಲಿ ನಮ್ಮ ಹಾವಭಾವ, ಮೈಕ್ರೋ ಫೋನನ್ನು ಹಿಡಿಯುವ ಬಗ್ಗೆ, ಪೋಡಿಯಂ ಮುಂದೆ ನಿಲ್ಲುವ ಬಗ್ಗೆ, ಸಭಿಕರನ್ನು ಆಕರ್ಷಿಸುವುದು ಹೇಗೆ? ಭಾಷಣವನ್ನು ಯಾವಾಗ ನಿಲ್ಲಿಸಬೇಕು? ಮತ್ತೆ ಹೇಗೆ ಮುಕ್ತಾಯ ಮಾಡಬೇಕು, ಕಾರ್ಯಕ್ರಮದ ನಿರೂಪಣೆ ಇತ್ಯಾದಿ ವಿಷಯಗಳ ಬಗ್ಗೆ ತಿಳಿಸಿಕೊಡಲಾಗುವುದು. ಮೊದಲು ನೋಂದಣಿ ಮಾಡಿದ ೫೦ ಜನರಿಗೆ ಮಾತ್ರ ಅವಕಾಶವಿರುವುದು. ಊಟೋಪಚಾರ ಸೇರಿ ನೊಂದಾವಣೆ ಶುಲ್ಕ ರೂ 250. ಆಸಕ್ತರು 9844401295 ಸಂಪರ್ಕಿಸಬಹುದು ಎಂದು ಕಾರ್ಯಕ್ರಮ ಸಂಯೋಜಕಿ ಸೌಮ್ಯ ಎಂ.ಯು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.