ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಉಪ್ಪಳಿಗೆ-ಬಾರ್ತಕುಮೇರು ಪರಿಶಿಷ್ಟ ಜಾತಿ ಕಾಲನಿ ರಸ್ತೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರುಗೊಂಡ ರೂ.10ಲಕ್ಷ ಅನುದಾದ ಕಾಂಕ್ರಿಟೀಕರಣಕ್ಕೆ ಜ.9ರಂದು ಗುದ್ದಲಿ ಪೂಜೆ ನಡೆಯಿತು.
ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ನಾನು ಶಾಸಕನಾದ ಬಳಿಕ ಸದ್ರಿ ರಸ್ತೆ ಕಾಂಕ್ರೀಟಿಕರಣಕ್ಕೆ ಪ್ರಥಮ ಬಾರಿಗೆ ರೂ.೭ಲಕ್ಷ, ಎರಡನೇ ಬಾರಿಗೆ ರೂ.೧೦ಲಕ್ಷ ಅನುದಾನ ನೀಡುತ್ತಿದ್ದು ಮುಂದಿನ ದಿನಗಳಲ್ಲಿ ರಸ್ತೆಯನ್ನು ಶೇ.೧೦೦ ಕಾಂಕ್ರಿಟೀಕರಣವನ್ನು ಪೂರ್ಣಗೊಳಿಸಲಾಗುವುದು ಎಂದರು. ಈ ವರ್ಷ ಪ.ಜಾತಿ ಮತ್ತು ಪ.ಪಂಗಡ ಕಾಲನಿ ರಸ್ತೆಗಳ ಅಭಿವೃದ್ಧಿಗೆ ಒಟ್ಟು ರೂ.೩ಕೋಟಿ ಅನುದಾನ ಮಾತ್ರವಲ್ಲದೆ ಶಾಸಕರು, ಸಂಸದರ ಹಾಗೂ ಇತರ ಅನುದಾನದಲ್ಲೂ ಶೇ.೨೫ರಷ್ಟು ಪ.ಜಾತಿ, ಪ.ಪಂಗಡದ ಕಾಲನಿ ರಸ್ತೆ ಅಭಿವೃದ್ಧಿಗೆ ಮೀಸಲಿಡಲಾಗಿದ್ದು ಪ.ಜಾತಿ, ಪಂಗಡದ ಅಭಿವೃದ್ಧಿ ಸರಕಾರ ಯೋಜನೆಗಳನ್ನು ಜಾರಿಗೊಳಿಸಿ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡುತ್ತಿದೆ ಎಂದು ಹೇಳಿದ ಶಾಸಕರು ಉಪ್ಪಳಿಗೆ ದರ್ಬೆತ್ತಡ್ಕ ರಸ್ತೆ ಲೋಕೋಪಯೋಗಿ ಇಲಾಖೆಯ ರಸ್ತೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದ್ದು ಮುಂದಿನ ದಿನಗಳಲ್ಲಿ ರಸ್ತೆಯೂ ಅಭಿವೃದ್ಧಿಗೊಂಡು ಸದ್ರಿ ರಸ್ತೆಯಲ್ಲಿ ಬಸ್ಗಳ ಓಡಾಟವೂ ನಡೆಯಲಿದೆ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರತ್ನಾಕರ ಹೆಗ್ಡೆ ಮಟ್ಟಾರು, ಕಾರ್ಯದರ್ಶಿ ಪ್ರದೀಪ್ ಡಿ.ಸೋಜ, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಸದಸ್ಯ ಮೀನಾಕ್ಷಿ ಮಂಜುನಾಥ, ಟೌನ್ಬ್ಯಾಂಕ್ ನಿರ್ದೇಶಕ ಚಂದ್ರಶೇಖರ ರಾವ್ ಬಪ್ಪಳಿಗೆ, ಬೆಟ್ಟಂಪಾಡಿ ಗ್ರಾ.ಪಂ ಸದಸ್ಯರಾದ ಪ್ರಕಾಶ್ ರೈ ಬೈಲಾಡಿ, ಉಮಾವತಿ ಸುಬ್ಬಪ್ಪ ಮಣಿಯಾಣಿ, ವಿದ್ಯಾಶ್ರೀ, ಗೋಪಾಲ, ಮಾಜಿ ಸದಸ್ಯರಾದ ದಿನೇಶ್ ಕಲ್ಪಣೆ, ಪುಷ್ಪಲತಾ ಚೆಲ್ಯಡ್ಕ, ಬೆಟ್ಟಂಪಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಹರೀಶ್ ಎಂ.ಜಿ ಗುಮ್ಮಟೆಗದ್ದೆ ಸ್ಥಳಿಯರಾದ ವರದರಾಜ್, ಸ್ಟ್ಯಾನ್ಲಿ ಡಿ.ಸೋಜ, ರಾಮಣ್ಣ ಗೌಡ ಬಾರ್ತಕುಮೇರು, ರುಕ್ಮಯ್ಯ ಗೌಡ ಬಾರ್ತಕುಮೇರು, ಚರಣ್ ಉಪ್ಪಳಿಗೆ, ಕಿಟ್ಟು ನಲಿಕೆ, ನೀಲಯ್ಯ ಪೂಜಾರಿ ಕುದ್ಕಲ್, ಖಾಸಿಂ ಬಾರ್ತಕುಮೇರು, ಸುರೇಶ್ ಸರಳಿಕಾನ, ಹೊನ್ನಪ್ಪ ಗೌಡ ಗುಮ್ಮಟೆಗದ್ದೆ, ಪ್ರಮೋದ್ ರೈ ಕುದ್ಕಲ್, ಗಂಗಾಧರ ನಾಯ್ಕ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎಪಿಎಂಸಿ ಉಪಾಧ್ಯಕ್ಷ, ನ್ಯಾಯವಾದಿ ಮಂಜುನಾಥ ಎನ್.ಎಸ್ ಸ್ವಾಗತಿಸಿ, ವಂದಿಸಿದರು.