HomePage_Banner
HomePage_Banner
HomePage_Banner
HomePage_Banner

ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ  ಗೊನೆಮುಹೂರ್ತ | ಜ.17- ಜ.19 ವರ್ಷಾವಧಿ ಜಾತ್ರೋತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ವಿಟ್ಲ: ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮ ಶ್ರೀ ಕೆಮ್ಮಿಂಜೆ  ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಜ.17ರಿಂದ ಜ.19ರ ವರೆಗೆ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ಜ.10ರಂದು  ದೇವಾಲಯದ ವಠಾರದಲ್ಲಿ ಗೊನೆಮುಹೂರ್ತ ನಡೆಯಿತು. ದೇವಾಲಯದ ಪ್ರಧಾನ ಅರ್ಚಕರಾದ ಕೆ. ಗೋವಿಂದ ಜೋಯಿಸರವರು ವಿಧಿವಿಧಾನ ನೆರವೇರಿಸಿದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ  ಸುರೇಶ್ ಕೆ.ಎಸ್. ಮುಕ್ಕುಡ, ಸದಸ್ಯರಾದ  ಪ್ರಕಾಶ್ ಕೆ.ಎಸ್ ಉರಿಮಜಲು, ವಿಜಯ ಕುಮಾರ್ ಗೌಡ ಸೂರ್ಯ, ಚಂದ್ರಶೇಖರ ಕಂಬಳಿ ಅರ್ಕೆಚ್ಚಾರು, ದೇಜಪ್ಪ ಕೋಲ್ಪೆ,  ವಿ.ಕೆ ಕುಟ್ಟಿ ಉರಿಮಜಲು,  ಶಶಿಪ್ರಭಾ ಮಿತ್ತೂರು, ಉಷಾ ಕೆ., ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ  ವ್ಯವಸ್ಥಾಪನಾ‌ ಸಮಿತಿ ಮಾಜಿ ಸದಸ್ಯ  ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಇಡ್ಕಿದು ಗ್ರಾ.ಪಂ ಸದಸ್ಯರಾಗಿರುವ ಎಂ.ಸುಧೀರ್ ಕುಮಾರ್ ಶೆಟ್ಟಿ,  ಪುರುಷೋತ್ತಮ ಕೋಲ್ಪೆ,  ಪುತ್ತೂರು ಅಸೋಸಿಯೇಶನ್ ಸಿವಿಲ್ ಎಂಜಿನಿಯರ್ಸ್ ನ ಅಧ್ಯಕ್ಷರಾದ ರಮೇಶ್ ಭಟ್ ಮಿತ್ತೂರು, ಕ್ಯಾಂಪ್ಕೋದ ಮಾಜಿ ಅಧ್ಯಕ್ಷರಾದ ಕೊಂಕೋಡಿ ಪದ್ಮನಾಭ, ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ‌ ಸಮಿತಿ ಮಾಜಿ ಸದಸ್ಯರಾದ ಪ್ರಪುಲ್ಲ ಚಂದ್ರ ಪಿ.ಜಿ,  ಜಗದೀಶ್ ದೇವಸ್ಯ, ಇಡ್ಕಿದು ಗ್ರಾ.ಪಂ ಮಾಜಿ ಸದಸ್ಯ  ಸತೀಶ್ ಕೆರ್ದೆಲು  ಸಹಿತ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.