

ಪುತ್ತೂರು: ಕರ್ನಾಟಕ ರಾಜ್ಯದ ಉಪ ವಲಯ ಅರಣ್ಯಾಧಿಕಾರಿಗಳ ಸಂಘ ಮಂಗಳೂರು ವಿಭಾಗದ ಅಧ್ಯಕ್ಷರಾಗಿ ಪಂಜ ವಲಯದ ಸಂತೋಷ್ ರೈ ಕೆ., ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪುತ್ತೂರು ವಲಯದ ಪ್ರಕಾಶ್ ರೈ ಬಿ.ಟಿ ಪುನರಾಯ್ಕೆಯಾಗಿದ್ದಾರೆ.
ಜ.9ರಂದು ದರ್ಬೆ ಅಶ್ವಿನಿ ಹೋಟೇಲ್ನ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಉಪಾಧ್ಯಕ್ಷರಾಗಿ ಪುತ್ತೂರು ವಲಯದ ಕುಮಾರಸ್ವಾಮಿ, ಜತೆ ಕಾರ್ಯದರ್ಶಿಯಾಗಿ ಸುನಿಲ್ ಕುಮಾರ್, ಖಜಾಂಚಿಯಾಗಿ ಬೆಳ್ತಂಗಡಿ ವಲಯದ ಹರಿಪ್ರಸಾದ್, ಸಂಘಟನಾ ಕಾರ್ಯದರ್ಶಿಗಳಾಗಿ ಪುತ್ತೂರು ವಲಯದ ಲೋಕೇಶ್ ಎಸ್.ಎನ್., ಪಂಜ ವಲಯದ ಯಶೋಧರ, ಸುಳ್ಯ ವಲಯದ ಸೌಮ್ಯ ಪಿ.ಎನ್., ಸುಬ್ರಹ್ಮಣ್ಯ ವಲಯದ ಮನೋಜ್ ಪುನರಾಯ್ಕೆಯಾಗಿದ್ದಾರೆ. ವಲಯ ಪ್ರತಿನಿಧಿಗಳಾಗಿ ಮಂಗಳೂರು ವಲಯದ ಕೃಷ್ಣ, ಉಪ್ಪಿನಂಗಡಿ ವಲಯದ ಅಶೋಕ್ ಕೆ.ಆರ್., ಪುತ್ತೂರು ವಲಯದ ಪ್ರಸಾದ್, ಸುಳ್ಯ ವಲಯದ ಚಂದ್ರು, ಪಂಜ ವಲಯದ ರವಿಪ್ರಕಾಶ್, ಬೆಳ್ತಂಗಡಿ ವಲಯದ ರವೀಂದ್ರ ಅಂಕಲಗಿ, ಪ್ರೀತಂ ಬಂಟ್ವಾಳ ವಲಯ, ಮಂಗಳೂರು ಅರಣ್ಯ ಸಂಚಾರಿ ದಳದ ಪ್ರಕಾಶ್ ಶೆಟ್ಟಿ, ಬಂಟ್ವಾಳ ಸಾಮಾಜಿಕ ಅರಣ್ಯದ ರಂಜಿತಾ ಹಾಗೂ ಸುಬ್ರಹ್ಮಣ್ಯ ವಲಯ ಅಪೂರ್ವರವರನ್ನು ಆಯ್ಕೆ ಮಾಡಲಾಯಿತು.