`ಕೃಷಿತೋ ನಾಸ್ತಿ ದುರ್ಭಿಕ್ಷಂ’ ನಾಣ್ಣುಡಿ ಸಾವಯವ ಕೃಷಿ ಉತ್ಪನ್ನಗಳ ಬಳಕೆಯಿಂದ ಸಾಕಾರಗೊಳ್ಳಲಿ –ಮಠಂದೂರು
ಪುತ್ತೂರು: ವಿಷ ಮುಕ್ತ ಕೃಷಿ, ವಿಷ ಮುಕ್ತ ಆಹಾರ, ವಿಷ ಮುಕ್ತ ಭಾರತ ಎಂಬ ಘೋಷವಾಕ್ಯದಡಿಯಲ್ಲಿ ಕಾರ್ಯಾಚರಿಸುತ್ತಿರುವ ಗ್ರೀನ್ ಪ್ಲಾನೆಟ್ ಸಾವಯವ ಕೃಷಿ ಉತ್ಪನ್ನಗಳ ಸೇವಾ ಕೇಂದ್ರ ‘ಸೃಷ್ಠಿ ಇಕಾಲಾಜಿಕಲ್ ಆಗ್ರೋ ಟೆಕ್ನಾಲಾಜಿಸ್’ ದರ್ಬೆ ಬೈಪಾಸ್ ರಸ್ತೆಯ ಸಮೀಪವಿರುವ ಆರಾಧ್ಯ ಆರ್ಕೇಡ್ನಲ್ಲಿ ಜ. ೧೦ರಂದು ಶುಭಾರಂಭಗೊಂಡಿದೆ.
ಶಾಸಕ ಸಂಜೀವ ಮಠಂದೂರು ಅವರು ನೂತನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಾ, ‘ರೈತರು ಅಧಿಕ ಇಳುವರಿಗಾಗಿ ಹೆಚ್ಚೆಚ್ಚು ಗೊಬ್ಬರಗಳನ್ನು ಬಳಕೆ ಮಾಡುತ್ತಾರೆ. ಆದರೆ ತಮ್ಮ ಕೃಷಿ ಭೂಮಿಯ ಮಣ್ಣಿನ ಗುಣಮಟ್ಟ ಎಷ್ಟಿದೆ? ಹೇಗಿದೆ? ಎಂಬ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದೇ ಕೃಷಿ ವೆಚ್ಚ ಹೆಚ್ಚಾಗಿ ಕೃಷಿಕರಿಗೆ ಆದಾಯ ಮತ್ತು ಲಾಭ ಕಡಿಮೆಯಾಗಲು ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ರೈತರು ತಮ್ಮ ಮಣ್ಣಿನ ಗುಣಮಟ್ಟವನ್ನು ತಿಳಿದುಕೊಂಡಾಗ ಮಾತ್ರ ಕಡಿಮೆ ವೆಚ್ಚದಲ್ಲಿ ಅಧಿಕ ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ಹಾಗೆಯೇ ನಾವು ಪ್ರತೀದಿನ ಸೇವಿಸುವ ಆಹಾರದಲ್ಲಿ ಎಷ್ಟು ಪ್ರಮಾಣದ ಪೌಷ್ಠಿಕಾಂಶ ಇರಬೇಕೆಂಬ ಲೆಕ್ಕಾಚಾರ ಇದೆಯೋ ಅದೇ ರೀತಿಯಲ್ಲಿ ಗಿಡಗಳಿಗೂ ಇಷ್ಟೇ ಪ್ರಮಾಣದಲ್ಲಿ ಗೊಬ್ಬರ ನೀಡಬೇಕೆಂಬ ಲೆಕ್ಕಾಚಾರ ಇರುತ್ತದೆ, ಇದಕ್ಕೆ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಗತ್ಯ ಮತ್ತು ‘ಸೃಷ್ಟಿ ಇಕಾಲಾಜಿಕಲ್ ಆಗ್ರೋ ಟೆಕ್ನಾಲಜಿಸ್’ ಮಣ್ಣು ಪರೀಕ್ಷೆ ಹಾಗೂ ಸಾವಯವ ಕೃಷಿ ಉತ್ಪನ್ನಗಳನ್ನು ಪೂರೈಸುವ ಮೂಲಕ ಈ ಭಾಗದ ರೈತರಿಗೆ ಉತ್ತಮ ಸೇವೆಯನ್ನು ನೀಡಲು ಮುಂದಾಗಿರುವುದು ಶ್ಲಾಘನೀಯ ಹಾಗೂ ಇದರಿಂದಾಗಿ ‘ಕೃಷಿತೋ ನಾಸ್ತಿ ದುರ್ಭಿಕ್ಷಂ’ ಎಂಬ ನಾಣ್ಣುಡಿ ಸಾಕಾರಗೊಂಡು ಕೃಷಿ ಲಾಭದಾಯಕವಾಗುವಲ್ಲಿ ಸಂಸ್ಥೆಯ ಉತ್ಪನ್ನಗಳು ಕೃಷಿಕರ ಪಾಲಿಗೆ ವರದಾನವಾಗಲಿ’ ಎಂದು ಶಾಸಕರು ಇದೇ ಸಂದರ್ಭದಲ್ಲಿ ನೂತನ ಸಂಸ್ಥೆಯ ಬಗ್ಗೆ ತಮ್ಮ ಪ್ರಶಂಸೆಯನ್ನು ವ್ಯಕ್ತಪಡಿಸಿದರು.
ಕನ್ನಡಿಗರೇ ಆವಿಷ್ಕಾರ ಮಾಡಿರುವಂತಹ ‘ಕೃಷಿ ತಂತ್ರ’ ತಂತ್ರಜ್ಞಾನದ ಸಹಾಯದಿಂದ ನಡೆಸಲಾಗುವ ಗುಣಮಟ್ಟದ ಮಣ್ಣು ಪರೀಕ್ಷಾ ಕೇಂದ್ರವನ್ನೂ ಸಹ ಶಾಸಕರು ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಿದರು.
ಗ್ರೀನ್ ಪ್ಲಾನೆಟ್ ಸಂಸ್ಥೆಯ ವಿಷಮುಕ್ತ ಕೃಷಿ ಸಲಹೆಗಾರರಾಗಿರುವ ಮದೆತೀರ ತಿಮ್ಮಯ್ಯ ಹಾಗೂ ಕೃಷಿ ತಂತ್ರ ಸಂಸ್ಥೆಯ ತಂತ್ರಜ್ಞ ನಯೀಮ್ ಅವರು ಮಣ್ಣು ಪರೀಕ್ಷಾ ವಿಧಾನಗಳ ಕುರಿತಾಗಿ ಶಾಸಕರ ಸಮ್ಮುಖದಲ್ಲೇ ವಿಶೇಷ ಮಾಹಿತಿ ನೀಡಿದರು.
ಎಪಿಎಂಸಿ ಅಧ್ಯಕ್ಷರಾಗಿರುವ ದಿನೇಶ್ ಮೆದು, ಸಾಜ ರಾಧಾಕೃಷ್ಣ ಆಳ್ವ, ಕಟ್ಟಡದ ಮಾಲಕರಾಗಿರುವ ಕರುಣಾಕರ ರೈ ದೇರ್ಲ ಸೇರಿದಂತೆ ವಿವಿಧ ಗಣ್ಯರು ಸಮಾರಂಭದಲ್ಲಿ ಹಾಜರಿದ್ದು ಸಂಸ್ಥೆಗೆ ಶುಭ ಕೋರಿದರು. ಜನಾರ್ದನ್ ನಾಯಕ್ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು.
ಸೃಷ್ಠಿ ಇಕಾಲಾಜಿಕಲ್ ಆಗ್ರೋ ಟೆಕ್ನಾಲಾಜಿಸ್ ಸಂಸ್ಥೆಯ ಮಾಲಕರಾದ ರವೀಂದ್ರ ಪ್ರಭು, ರೇಣುಕಾ ಪ್ರಭು, ರಾಘವೇಂದ್ರ ಪ್ರಭು, ದೀಪಾ ಪ್ರಭು ಮತ್ತು ಮಾಲಕರ ತಂದೆ ವಾಮನ ಪ್ರಭು ಅತಿಥಿ ಗಣ್ಯರನ್ನು ಸ್ವಾಗತಿಸಿ ಬರಮಾಡಿಕೊಂಡರು.
ಈ ಕೇಂದ್ರದಲ್ಲಿ ಸಾವಯವ ಕೃಷಿ ಉತ್ಪನ್ನಗಳು, ಹೈನುಗಾರಿಕಾ ಉತ್ಪನ್ನಗಳು ಲಭ್ಯವಿದ್ದು ಇಲ್ಲಿ ೧೧ ರೀತಿಯ ಮಣ್ಣು ಪರೀಕ್ಷೆಗಳನ್ನು ೩೫ ನಿಮಿಷಗಳೊಳಗೆ ನಿಖರ ಫಲಿತಾಂಶದೊಂದಿಗೆ ನಡೆಸಿಕೊಡುವ ವ್ಯವಸ್ಥೆ ಈ ನೂತನ ಕೇಂದ್ರದಲ್ಲಿದೆ.
ಭೂಮಿ ಪವರ್, ನೈಟ್ರೋ ಕಿಂಗ್, ಗ್ರೋ, ಫ್ರೂಟರ್, ಬೇವಿನ ಉತ್ಪನ್ನ, ಪೆಸ್ಟೋ ಹಿಟ್, ಫಂಗೋ ಹಿಟ್, ವೈರೋ ಹಿಟ್, ರೂಟ್ ಗಾರ್ಡ್, ಎಫ್.ಸಿ. ಪೌಡರ್, ಪವರ್ ಮಿಲ್ಕ್, ಚಿಕ್ ಟು ಹೆನ್, ಸೀಡ್ ಟ್ರೀಟ್ಮೆಂಟ್ ಸೇರಿದಂತೆ ಹತ್ತು ಹಲವು ಸಾವಯವ ಉತ್ಪನ್ನಗಳು ರೈತರ ಉಪಯೋಗಕ್ಕಾಗಿ ಕೇಂದ್ರದಲ್ಲಿ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.
ಮಣ್ಣು ಪರೀಕ್ಷೆ ಯಾಕೆ ಬೇಕು?: ನಮ್ಮ ಕೃಷಿ ಭೂಮಿಯ ಮಣ್ಣಿನ ಗುಣಮಟ್ಟವನ್ನು ತಿಳಿದುಕೊಂಡು ಅದಕ್ಕೆ ಅನುಗುಣವಾಗಿ ಬೆಳೆಗಳಿಗೆ ಪೌಷ್ಠಿಕಾಂಶಗಳನ್ನು ಒದಗಿಸುವುದು ಅತೀ ಮುಖ್ಯ. ಮಣ್ಣಿನ ಗುಣಮಟ್ಟದ ಅರಿವಿಲ್ಲದೇ ತೋಟಕ್ಕೆ ನಾವು ಹಾಕುವ ಗೊಬ್ಬರಗಳು ನಮ್ಮ ಕೃಷಿ ಉತ್ಪಾದನಾ ವೆಚ್ಚನ್ನು ಹೆಚ್ಚಿಸುತ್ತದೆಯೇ ಹೊರತು ಇಳುವರಿಯನ್ನಲ್ಲ ಹಾಗಾಗಿ ಎಲ್ಲಾ ಕೃಷಿಕರು ತಮ್ಮ ಮಣ್ಣಿನ ಗುಣಮಟ್ಟ ಪರೀಕ್ಷೆಯನ್ನು ನಡೆಸುವುದು ಅತೀ ಅಗತ್ಯ ಎಂದು ಕೃಷಿ ತಂತ್ರ ಸಂಸ್ಥೆಯ ತಂತ್ರಜ್ಞ ನಯೀಮ್ ಅವರು ಹೇಳಿದರು.
ಯಾವೆಲ್ಲಾ ಪರೀಕ್ಷೆಗಳನ್ನು ನಡೆಸಲಾಗುತ್ತದೆ?: ಪರೀಕ್ಷೆಗಾಗಿ ತಂದ ಮಣ್ಣಿನಲ್ಲಿ ಒಟ್ಟು ೧೧ ಅಂಶಗಳನ್ನು ಪರೀಕ್ಷೆ ನಡೆಸಲಾಗುತ್ತದೆ. ಇಸಿ, ಪಿ.ಹೆಚ್, ಎನ್.ಪಿ.ಕೆ., ಝಿಂಕ್ ಪರೀಕ್ಷೆ, ಕ್ಯಾಲ್ಷಿಯಂ ಪರೀಕ್ಷೆ, ಸಲ್ಫರ್ ಪರೀಕ್ಷೆ, ಬೋರಾನ್, ಐರಾನ್ ಮತ್ತು ಮುಖ್ಯವಾಗಿ ಆರ್ಗಾನಿಕ್ ಕಾರ್ಬನ್ (ಸಾವಯವ ಇಂಗಾಲ) ಪರೀಕ್ಷೆಯನ್ನು ನಡೆಸಲಾಗುತ್ತದೆ. ಮತ್ತು ಕೇವಲ ೩೫ ನಿಮಿಷಗಳಲ್ಲಿ ಈ ಎಲ್ಲಾ ಪರೀಕ್ಷೆಗಳ ವರದಿ ರೈತರ ಕೈಸೇರುವುದು ವಿಶೇಷವಾಗಿದೆ ಮತ್ತು ಮಣ್ಣು ಪರೀಕ್ಷೆಯ ಫಲಿತಾಂಶ ನೇರವಾಗಿ ರೈತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವುದು ಇನ್ನೊಂದು ವಿಶೇಷವಾಗಿ