HomePage_Banner
HomePage_Banner
HomePage_Banner
HomePage_Banner

ಪುತ್ತೂರು ಬ್ಲಾಕ್‌ ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷತೆಗೆ ಜ.೧೧ರಂದು ಆನ್‌ಲೈನ್ ಮೂಲಕ ಚುನಾವಣೆ ನಡೆಯುತ್ತಿದೆ. ಪುತ್ತೂರು ಬ್ಲಾಕ್‌ಗೆ ಸಂಬಂಧಿಸಿದಂತೆ ನೋಂದಾಯಿತ ೧೯೭೮ ಯುವ ಕಾಂಗ್ರೆಸ್ ಮತದಾರರು ಆನ್‌ಲೈನ್ ಮೂಲಕ ಮತ ಚಲಾಯಿಸಲು ಅರ್ಹತೆ ಪಡೆದಿದ್ದಾರೆ.

ಈ ಹಿಂದೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯುವ ಕಾಂಗ್ರೆಸ್ ಅಧ್ಯಕ್ಷತೆಗೆ ಚುನಾವಣೆ ನಡೆಯುತಿತ್ತು. ಆದರೆ ಈ ಬಾರಿ ಪುತ್ತೂರು ಬ್ಲಾಕ್ ಹಾಗೂ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ವಿಂಗಡಿಸಿ ಕ್ಷೇತ್ರಕ್ಕೆ 2 ಯುವ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಿಸಲಾಗುತ್ತದೆ. ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷತೆಗೆ ಕೂರ್ನಡ್ಕದ ಸನದ್, ಕೆಮ್ಮಾರ ಬಾಲಕೃಷ್ಣ ಗೌಡ, ಪಾಣಾಜೆಯ ಶ್ರೀಪ್ರಸಾದ್‌ ಕಣದಲ್ಲಿದ್ದಾರೆ. ಬೆಳ್ಳಿಪ್ಪಾಡಿಯ ಅಭಿಷೇಕ್ ಹಾಗೂ ಕೊಡಿಪ್ಪಾಡಿಯ ರಿಯಾಝ್ ರವರು ಚುನಾವಣಾ ಕಣಕ್ಕೆ ನಿವೃತ್ತಿ ಘೋಷಿಸಿದ್ದಾರೆ. ವಿಟ್ಲ – ಉಪ್ಪಿನಂಗಡಿ ಬ್ಲಾಕ್‌ಗೆ ಸಿದ್ಧೀಕ್ ಉಪ್ಪಿನಂಗಡಿ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪುತ್ತೂರು ಬ್ಲಾಕ್ ನಿಂದ ಮತದಾರರು ಏಕಕಾಲದಲ್ಲಿ ನಾಲ್ಕು ಮತಗಳನ್ನು ಚಲಾಯಿಸಲಿದ್ದು, ಬ್ಲಾಕ್ ಮಟ್ಟದ ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ಹಾಗೂ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ಮತ್ತು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ಮತ ಚಲಾಯಿಸಲಿದ್ದಾರೆ. ಪುತ್ತೂರು ಬ್ಲಾಕ್‌ನ ೫ ಮಂದಿ ಅಭ್ಯರ್ಥಿಗಳಲ್ಲಿ ಅತೀ ಹೆಚ್ಚು ಮತ ಪಡೆದವರು ಅಧ್ಯಕ್ಷರಾಗಿಯೂ, ಅದಕ್ಕಿಂತ ಕಡಿಮೆ ಮತ ಪಡೆದವರು ಪ್ರಥಮ ಉಪಾಧ್ಯಕ್ಷರಾಗಿಯೂ, ಅದಕ್ಕಿಂತ ಕಡಿಮೆ ಮತ ಪಡೆದವರು ಎರಡನೇ ಉಪಾಧ್ಯಕ್ಷರಾಗಿಯೂ ಆಯ್ಕೆ ಯಾಗಲಿದ್ದಾರೆ. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.