- ಉಪ್ಪಿನಂಗಡಿ ಠಾಣೆ ಪಿಎಸ್ಐ ಈರಯ್ಯ ಡಿ.ಎನ್., ನಾಲ್ವರು ಸಿಬ್ಬಂದಿಗಳ ಸಹಿತ 26ಪೊಲೀಸರಿಗೆ ನಗದುಬಹುಮಾನ, ಪ್ರಶಂಸನಾ ಪತ್ರ
ಪುತ್ತೂರು: ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಡಿ.೧೭ರಂದು ನಡೆದಿದ್ದ ಬಾಲಕನ ಅಪಹರಣ ಪ್ರಕರಣದ ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ ಬಾಲಕನ ರಕ್ಷಣೆ ಮಾಡುವಲ್ಲಿ ಶ್ರಮಿಸಿದ ಉಪ್ಪಿನಂಗಡಿ ಠಾಣೆಯ ಆಗಿನ ಎಸ್ಐ ಹಾಗೂ ನಾಲ್ವರು ಸಿಬ್ಬಂದಿಗಳು ಸೇರಿದಂತೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿನ ಒಟ್ಟು ೨೬ ಪೊಲೀಸರಿಗೆ ಮಂಗಳೂರು ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕ ದೇವಜ್ಯೋತಿ ರೇ.,ರವರು ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿದ್ದಾರೆ.
ಡಿ.೧೭ರಂದು ಉಜಿರೆಯ ರಥಬೀದಿ ಬಳಿ ಇವರು ತನ್ನ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ೮ ವರ್ಷದ ಬಾಲಕನನ್ನು ಅಪರಿಚಿತರ ತಂಡವೊಂದು ಕಾರೊಂದರಲ್ಲಿ ಅಪಹರಿಸಿ ೧೭ ಕೋಟಿ ರೂ.,ಬೇಡಿಕೆ ಇರಿಸಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬೆಳ್ತಂಗಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಕೋಲಾರದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿ ಬಾಲಕನನ್ನು ಸುರಕ್ಷಿತವಾಗಿ ಕರೆತಂದಿದ್ದರು. ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ ಬಾಲಕನನ್ನು ರಕ್ಷಿಸುವಲ್ಲಿ ಶ್ರಮ ವಹಿಸಿದ ಪೊಲೀಸ್ ತಂಡಕ್ಕೆ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರವನ್ನು ನೀಡಿ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ದೇವಜ್ಯೋತಿ ರೇ.,ರವರು ಗೌರವಿಸಿದ್ದಾರೆ.
ಬೆಳ್ತಂಗಡಿ ವೃತ್ತ ಸಿಪಿಐ ಸಂದೇಶ್ ಪಿ.ಜಿ., ಡಿಎಸ್ಬಿ ಪಿಐಗಳಾದ ರವಿ ಬಿ.ಎಸ್., ಚೆಲುವರಾಜು,ಬೆಳ್ತಂಗಡಿ ಠಾಣೆ ಪಿಎಸ್ಐ ನಂದಕುಮಾರ್ ಎಂ.ಎಂ., ಉಪ್ಪಿನಂಗಡಿ ಠಾಣೆಯ ಪಿಎಸ್ಐ ಈರಯ್ಯ ಡಿ.ಎನ್., ಬೆಳ್ತಂಗಡಿ ಟ್ರಾಫಿಕ್ ಠಾಣೆಯ ಪಿಎಸ್ಐ ಕುಮಾರ್ ಕಾಂಬ್ಲೆ, ಧರ್ಮಸ್ಥಳ ಠಾಣೆ ಪಿಎಸ್ಐ ಪವನ್ ನಾಯಕ್, ಬೆಳ್ತಂಗಡಿ ವೃತ್ತ ಹೆಚ್ಸಿಗಳಾದ ವೆಂಕಟೇಶ್, ಇಬ್ರಾಹಿಂ, ಬೆಳ್ತಂಗಡಿ ಟ್ರಾಫಿಕ್ ಠಾಣೆಯ ಹೆಚ್ಸಿಗಳಾದ ಪ್ರಮೋದ್, ಲತೀಫ್, ಬೆಳ್ತಂಗಡಿ ಠಾಣೆ ಪಿಸಿ ಚರಣ್ರಾಜ್, ಉಪ್ಪಿನಂಗಡಿ ಠಾಣೆಯ ಹೆಚ್ಸಿಗಳಾದ ಉದಯ ರೈ, ಪ್ರಶಾಂತ್, ಪಿಸಿ ಪ್ರವೀಣ್ ರೈ,ಎಹೆಚ್ಸಿ ಸುರೇಶ್, ಧರ್ಮಸ್ಥಳ ಠಾಣೆಯ ಹೆಚ್ಸಿಗಳಾದ ಬೆನ್ನಿ, ರಾಹುಲ್ ರಾವ್, ಬೆಳ್ತಂಗಡಿ ಟ್ರಾಫಿಕ್ ಠಾಣೆಯ ಪಿಸಿಗಳಾದ ಕೃಷ್ಣ ಕೆ.ಬಿ., ಶಾಂತಕುಮಾರ್ ಎಂ.ಎಸ್., ಡಿಸಿಐಬಿ ಹೆಚ್ಸಿಗಳಾದ ತಾರನಾಥ ಎಸ್., ಲಕ್ಷ್ಮಣ ಕೆ.ಜಿ., ಪಿಸಿ ಕುಮಾರ್ ಹೆಚ್.ಕೆ., ವಾಹನ ಚಾಲಕ ಎಹೆಚ್ಸಿ ಸೋನ್ಸ್, ಜಿಲ್ಲಾ ಪೊಲೀಸ್ ಕಚೇರಿ ಗಣಕ ಯಂತ್ರ ವಿಭಾಗದ ಎಪಿಸಿ ಸಂಪತ್ಕುಮಾರ್, ಸಿಪಿಸಿ ದಿವಾಕರರವರಿಗೆ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.