HomePage_Banner
HomePage_Banner
HomePage_Banner
HomePage_Banner

ಸರಕಾರದ ಯೋಜನೆಗಳ ನೆನಪಿಸುವ ಕ್ಯಾಲೆಂಡರ್ ಶಾಸಕರ ಕಚೇರಿಯಲ್ಲಿ ಶಾಸಕರಿಂದ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತು ಮತ್ತು ಯೋಜನೆ ತಲುಪಬೇಕಂದು ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ನೆನಪಿಸುವ ೨೦೨೧ನೇ ಕ್ಯಾಲೆಂಡರ್ ಅನ್ನು ಶಾಸಕರ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು.

ಶಾಸಕ ಸಂಜೀವ ಮಠಂದೂರು ಅವರು ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರಕಾರದಿಂದ ಏನೆನು ಸವಲತ್ತು ಯೋಜನೆಗಳನ್ನು ಕೊಡಬೇಕೋ ಆ ಎಲ್ಲಾ ಯೋಜನೆಗಳು ಸಾಮಾನ್ಯರಿಗೆ ತಲುಪಬೇಕು ಮತ್ತು ಅದರ ಮಾಹಿತಿ ಕೂಡಾ ಇರಬೇಕೆಂಬ ನಿಟ್ಟಿನಲ್ಲಿ ಶಾಸಕರ ಕಚೇರಿಯಿಂದ ಬಿಡುಗಡೆ ಮಾಡಿದ ಕ್ಯಾಲೇಂಡರ್ ಪ್ರತಿ ಪುಟದಲ್ಲಿ ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ನೆನಪಿಸಲಾಗಿದೆ. ಇದನ್ನು ಆಗಾಗ ನೆನಪು ಮಾಡುತ್ತಾ ಕಾರ್ಯಗತಗೊಳಿಸುವ ಕೆಲಸ ಆಗಬೇಕೆಂದರು. ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕಾರ್ಯದರ್ಶಿ ಹರಿಪ್ರಸಾದ್ ಯಾದವ್, ಜಯರಾಮ ಪೂಜಾರಿ, ವಿಶ್ವನಾಥ ಕುಲಾಲ್, ಯತೀಂದ್ರ ಕೊಚ್ಚಿ, ಸತೀಶ್ ಪಾಂಬಾರು, ಜೀವನ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.