- ಪ್ರಶ್ನೆ, ಮನಸ್ಸಿನ ನಿರ್ಧಾರಕ್ಕಿಂತ ಮುಂಚಿತವಾಗಿ ದೇವರ ಪ್ರತಿಷ್ಠಾ ಯೋಗ – ರವೀಶ ತಂತ್ರಿ
ಪುತ್ತೂರು: ಪ್ರಶ್ನೆಯಲ್ಲಿ ನಿರ್ದೇಶಿಸಿದ ಸಮಯ ಅಥವಾ ನೀವು ನಿಮ್ಮ ಮನಸ್ಸಿನಲ್ಲಿ ನಿರ್ಧಾರ ಮಾಡಿದ ಸಮಯ ಯಾವುದುಂಟೋ ಅದಕ್ಕಿಂತ ಒಂದು ತಿಂಗಳಾದರೂ ಮುಂಚಿತವಾಗಿ ಇಲ್ಲಿ ದೇವರ ಪ್ರತಿಷ್ಠೆ ಮಾಡುವ ಯೋಗ ಬರುತ್ತದೆ. ಇದಕ್ಕೆ ಯಾವುದೇ ರೀತಿಯ ಸಂಶಯ ಬೇಡ ಎಂದು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರು ನುಡಿದರು.
ಸಂತಾನ ಭಾಗ್ಯ, ಕಂಕಣ ಭಾಗ್ಯ, ಆರೋಗ್ಯ ಸಮೃದ್ಧಿ, ಕೌಟುಂಬಿಕ ನೆಮ್ಮದಿ, ಯೋಗ್ಯ ಕೃಷಿ ಸೇರಿದಂತೆ ಬೇಡಿದ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದ ಸುಮಾರು ೮೦೦ ವರ್ಷಗಳ ಇತಿಹಾಸ ಇರುವ ಬನ್ನೂರು ಗ್ರಾಮದ ನಡಿಮಾರು ಎಂಬಲ್ಲಿನ ‘ದ್ಯೆಯ್ಯೆರೆ ಮಾಡ’ ಕಾರಣಿಕ ಕ್ಷೇತ್ರದ ಜೀರ್ಣೋದ್ಧಾರದ ಅಂಗವಾಗಿ ನಡೆದ ಪೂರ್ವ ಪ್ರಾಯಶ್ಚಿತ ಕಾರ್ಯಕ್ರಮಕ್ಕೆ ಸಂಬಂಧಿಸಿ ಜ.೧೦ರಂದು ರಾತ್ರಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ನುಡಿದರುz. ಈ ಪ್ರದೇಶದಲ್ಲಿ ನಡೆದಿರುವ ದೇವಿ ಸಂಬಂಧ ಕೋಪಕ್ಕೆ ಕಾರಣವಾಗಿರುವ ಹಲವಾರು ಘಟನೆಗಳನ್ನು ಅರ್ಥ ಮಾಡಿಕೊಂಡು ಎಲ್ಲರು ಒಗ್ಗಟ್ಟಿನಿಂದ ಮುಂದಿನ ಕಾರ್ಯ ಮಾಡಬೇಕು ಎಂದ ಅವರು ಸುದರ್ಶನ ಹೋಮದ ಸಮಯ ಅವರು ದೈವಜ್ಞ ಕೇಕನಾಜೆ ಗಣೇಶ್ ಭಟ್ ಅವರ ಸಮ್ಮುಖದಲ್ಲಿ ಮಾಡಿದ ಪೂಜಾ ಕಾರ್ಯಕಗಳ ಕುರಿತು ಅವಲೋಕಿಸಿದರು. ನಿಷ್ಕಲ್ಮಶವಾದ ಭಕ್ತಿ ಮತ್ತು ಶ್ರದ್ಧೆಗೆ ದೇವರೇ ವೇದಿಕೆ ನಿರ್ಮಾಣ ಮಾಡಿಕೊಡುತ್ತಾರೆ ಎಂಬುದಕ್ಕೆ ದೈಯ್ಯೆರೆ ಮಾಡ ಕ್ಷೇತ್ರವೇ ಸಾಕ್ಷಿಯಾಗಿದೆ. ಕಳೆದ ಮೂರು ದಿನ ಸಂಜೆ ವೇಳೆ ಬಿಡದೆ ಬರುತ್ತಿರುವ ಮಳೆ ದೇವರ ಪೂಜಾ ಕಾರ್ಯಕ್ಕೆ ಅಡ್ಡಿಯಾಗದಂತೆ ಮಳೆಯು ಸಹಕಾರ ನೀಡಿದೆ ಎಂದರು. ಬೆಳಿಗ್ಗೆ ಕುಂಟಾರು ಶ್ರೀಧರ್ ತಂತ್ರಿಗಳ ನೇತೃತ್ವದಲ್ಲಿ ತಂಬಿಲಾದಿಗಳು ನಡೆದು, ರಾತ್ರಿ ಶೂಲಿನಿ ಹವನ, ಸುದರ್ಶನ ಹೋಮ, ನಿಧಿಕುಂಭ ಪೂಜೆ, ದುರ್ಗಾಪೂಜೆ ಸಹಿತ ವಾಗ್ದೇವಿ ಪೂಜೆ, ಗೋಪಾಲಕೃಷ್ಣ ಪೂಜೆ, ವಿಷ್ಣುಪೂಜೆ ನಡೆಯಿತು. ಜ.೧೧ರಂದು ಬೆಳಿಗ್ಗೆ ನಸುಕಿನ ಜಾವ ತಿಲಹವನ, ಚಕ್ರಬ್ದ ಪೂಜೆ ನಡೆಯಿತು. ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಶಾಸಕ ಸಂಜೀವ ಮಠಂದೂರು, ಅಧ್ಯಕ್ಷ ಎ.ವಿ.ನಾರಾಯಣ, ಕಾರ್ಯದರ್ಶಿ ಮೌನೀಶ್ ಆನೆಮಜಲು, ಖಜಾಂಚಿ ಬಿ.ಸತೀಶ್ ಕುಮಾರ್ ಆನೆಮಜಲು, ಪಡೀಲು ಗುತ್ತುವಿನ ಆನಂದ್ ಪೂಜಾರಿ, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಸದಸ್ಯರಾದ ಗೌರಿ ಬನ್ನೂರು, ಬನ್ನೂರು ಶ್ರೀ ಶಿವಪಾರ್ವತಿ ಮಂದಿರದ ಅಧ್ಯಕ್ಷ ವಿಶ್ವನಾಥ ಗೌಡ, ನಗರಸಭೆ ಮಾಜಿ ಸದಸ್ಯ ರಾಮಣ್ಣ ಗೌಡ ಹಲಂಗ, ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ನಿಕಟಪೂರ್ವ ಆಡಳಿತ ಮೊಕ್ತೇಸರ ಧರ್ಣಪ್ಪ ಮೂಲ್ಯ, ರಾಜೇಶೇಖರ್ ಜೈನ್, ಜಯರಾಜ್ ಜೈನ್, ಮತ್ತು ಕ್ಷೇತ್ರದ ಇತಿಹಾಸದ ಕುರಿತು ಮಾಹಿತಿಯುಳ್ಳ ಊರ ಗೌಡ ಸುಮಾರು ೯೯ ವರ್ಷದ ಗುಡ್ಡಪ್ಪ ಗೌಡ ಸೇರದಿಂತೆ ಹಲವಾರು ಮಂದಿ ಉಪಸ್ಥಿತರಿದ್ದರು.