ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ರೋಟರಿ ಕ್ಲಬ್ ಪುತ್ತೂರು ಎಲೈಟ್ ಇದರ ಜಂಟಿ ಆಶ್ರಯದಲ್ಲಿ ಚೇತನಾ ಆಸ್ಪತ್ರೆ, ಪುತ್ತೂರು ಡಯಾಗ್ನಾಸ್ಟಿಕ್ ಲ್ಯಾಬೋರೇಟರಿ ಸಹಯೋಗದಲ್ಲಿ ಪುತ್ತೂರು ಮಿನಿ ವಿಧಾನಸೌಧದ ಎಲ್ಲಾ ಸರಕಾರಿ ಕಛೇರಿಗಳ ಸಹಕಾರದಲ್ಲಿ ಪ್ರಾಜೆಕ್ಟ್ ಪಾಸಿಟಿವ್ ಹೆಲ್ತ್ ಅಂಗವಾಗಿ ಉಚಿತ ಮಧುಮೇಹ, ಲಿಪಿಡ್ ಪ್ರೊಫೈಲ್(ರಕ್ತದಲ್ಲಿರುವ ಸಕ್ಕರೆ, ಕೊಲೆಸ್ಟ್ರಾಲ್), HBA1c, ರಕ್ತದೊತ್ತಡ, ಬಿಎಂಡಿ(ಎಲುಬು ಸಾಂದ್ರತೆ), ಬಿಎಂಐ(ಬಾಡಿ ಮಾಸ್ ಇಂಡೆಕ್ಸ್) ತಪಾಸಣಾ ಶಿಬಿರವು ಜ.೧೨ ರಂದು ಬೆಳಿಗ್ಗೆ ಪುತ್ತೂರು ಮಿನಿ ವಿಧಾನಸೌಧದ ಆವರಣದಲ್ಲಿ ಜರಗಲಿದೆ.
ರೋಟರಿ ಜಿಲ್ಲೆ ೩೧೮೧ ಇದರ ಜಿಲ್ಲಾ ಗವರ್ನರ್ ರಂಗನಾಥ್ ಭಟ್ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಸಹಾಯಕ ಆಯುಕ್ತರಾದ ಡಾ.ಯತೀಶ್ ಉಳ್ಳಾಲ್, ತಹಶೀಲ್ದಾರ್ ರಮೇಶ್ಬಾಬು ಟಿ, ಚೇತನಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜೆ.ಸಿ ಅಡಿಗ, ರೋಟರಿ ಜಿಲ್ಲೆ ೩೧೮೧ ಇದರ ಸಹಾಯಕ ಗವರ್ನರ್ ಸಚ್ಚಿದಾನಂದರವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಆಗಮಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಕಾರ್ಯಕ್ರಮದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಿಪಿಡ್ ಪ್ರೊಫೈಲ್ ಮಾಡಿಸಿಕೊಳ್ಳುವವರು ಆಹಾರ ಸೇವಿಸದೆ ಖಾಲಿ ಹೊಟ್ಟೆಯಲ್ಲಿ ಬಂದು ಪರೀಕ್ಷೆ ಮಾಡಿಕೊಳ್ಳಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.