HomePage_Banner
HomePage_Banner
HomePage_Banner
HomePage_Banner

ಜ.12: ರೋಟರಿ ಸೆಂಟ್ರಲ್‌ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರೋಟರಿ ಜಿಲ್ಲೆ ೩೧೮೧, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್‌ಗೆ ರೋಟರಿ ಜಿಲ್ಲಾ ಗವರ್ನರ್ ಎಂ.ರಂಗನಾಥ್ ಭಟ್‌ರವರು ಜ.12ರಂದು ಭೇಟಿ ನಿಡಲಿದ್ದಾರೆ.

ಬೆಳಿಗ್ಗೆ ಜಿಲ್ಲಾ ಗವರ್ನರ್ ರಂಗನಾಥ್ ಭಟ್‌ರವರನ್ನು ರೋಟರಿ ಸೆಂಟ್ರಲ್‌ನ ಪದಾಧಿಕಾರಿಗಳು ಸ್ವಾಗತಿಸಲಿದ್ದು, ಬಳಿಕ ಮಿನಿ ವಿಧಾನಸೌಧದ ಆವರಣದಲ್ಲಿ ನಡೆಯುವ ಉಚಿತ ಮಧುಮೇಹ, ಲಿಪಿಡ್ ಪ್ರೊಫೈಲ್, ಊಃಂ೧ಛಿ, ರಕ್ತದೊತ್ತಡ, ಬಿಎಂಡಿ, ಬಿಎಂಐ ತಪಾಸಣಾ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಬಳಿಕ ನಿಮ್ಮ ಭೂಮಿ, ನಮ್ಮ ಕೃಷಿ ಯೋಜನೆಯ ಕಂಬಳದಡ್ಡ ಗದ್ದೆಯನ್ನು ಹಾಗೂ ಬಾಲವನಕ್ಕೆ ಭೇಟಿ ನೀಡಿ ಔಷಧಿಯ ಸಸ್ಯ ಕುಂಡಗಳನ್ನು ವೀಕ್ಷಣೆ ಮಾಡಲಿದ್ದಾರೆ. ಅಪರಾಹ್ನ ಪ್ರಜ್ಞಾ ಕೇಂದ್ರಕ್ಕೆ ಭೇಟಿ ನೀಡಿ ಒಂದು ದಿನದ ಖರ್ಚನ್ನು ನೀಡಲಾಗುವುದು. ಬಳಿಕ ಕ್ಲಬ್ ಸದಸ್ಯರೊಂದಿಗೆ ಕ್ಲಬ್ ಅಸೆಂಬ್ಲಿಯಲ್ಲಿ ಭಾಗವಹಿಸಲಿರುವ ಜಿಲ್ಲಾ ಗವರ್ನರ್ ರಂಗನಾಥ್ ಭಟ್‌ರವರು, ಸಂಜೆ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆಕ್ಸಿಜನರೇಟರ್‌ನ್ನು ಕೊಡುಗೆಯಾಗಿ ರೆಡ್‌ಕ್ರಾಸ್ ಜನೌಷಧಿ ಕೇಂದ್ರಕ್ಕೆ ಹಸ್ತಾಂತರ ಮಾಡಲಿದ್ದಾರೆ.
ಸಂಜೆ ಬಪ್ಪಳಿಗೆ-ಬೈಪಾಸ್‌ನಲ್ಲಿನ ಆಶ್ಮಿ ಕಂಫರ್ಟ್‌ನಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ರಂಗನಾಥ್ ಭಟ್‌ರವರು ಭಾಗವಹಿಸಲಿದ್ದು, ಅಸಿಸ್ಟೆಂಟ್ ಗವರ್ನರ್ ಸಚ್ಚಿದಾನಂದ ಡಿ, ವಲಯ ಐದರ ವಲಯ ಸೇನಾನಿ ಮನೋಹರ್ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತಲಿರುವರು ಎಂದು ರೋಟರಿ ಕ್ಲಬ್ ಸೆಂಟ್ರಲ್‌ನ ಅಧ್ಯಕ್ಷ ವೆಂಕಟ್ರಾಜ್ ಪಿ.ಜಿ, ಕಾರ್ಯದರ್ಶಿ ಅಶೋಕ್ ನಾಕ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.