ಪುತ್ತೂರು: ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಕೊಂಬೆಟ್ಟು ಬೋರ್ಡ್ ಹೈಸ್ಕೂಲ್ನಲ್ಲಿ ಪರೀಕ್ಷಾ ಕೇಂದ್ರದಲ್ಲಿ ಬರೆದ ಶಾಸಕ ಸಂಜೀವ ಮಠಂದೂರು ಜ.11ರಂದು ಶಾಲೆಯ ಕರಸೇವೆಯಲ್ಲಿ ಭಾಗವಹಿಸಿ ಹಿಂದಿನ ಪರೀಕ್ಷೆ ಬರೆದಿರುವುದನ್ನು ನೆನಪಿಸಿದರು.
ಪ್ರೌಢ ಮತ್ತು ಪಿಯುಸಿ ಶಿಕ್ಷಣವನ್ನು ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಡೆದ ಶಾಸಕ ಸಂಜೀವ ಮಠಂದೂರು ಅವರು ೧೯೭೮ರಲ್ಲಿ ಉಪ್ಪಿನಂಗಡಿಯಲ್ಲಿ ಪರೀಕ್ಷಾ ಕೇಂದ್ರ ಇಲ್ಲದ ಹಿನ್ನೆಲೆಯಲ್ಲಿ ಕೊಂಬೆಟ್ಟು ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ ಬರೆದಿದ್ದರು. ಅದನ್ನು ನೆನಪಿಸಿಕೊಂಡ ಶಾಸಕರು ಹಿರಿಯ ವಿದ್ಯಾರ್ಥಿಗಳ ಕರಸೇವೆಯಲ್ಲಿ ಭಾಗಿಯಾದರು.
ಇದೇ ಸಂದರ್ಭದಲ್ಲಿ ಸುದ್ದಿಯೊಂದಿಗೆ ಅವರು ಮಾತನಾಡಿ ಶಾಲಾ ಕಾಲೇಜು ಆಧುನಿಕರಣ ಆಗಬೇಕೆಂದು ಸರಕಾರ ಯೋಚನೆ ಮಾಡುವ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳು ಸೇರಿ ನಾವು ಕಲಿತ ಶಾಲೆ ಮತ್ತೊಮ್ಮೆ ಗತವೈಭವ ಕಾಣಬೇಕೆಂದು ತರಗತಿ ಕೊಠಡಿಗಳನ್ನು ಆಧುನಿಕರಣ ಗೊಳಿಸುತ್ತಿರುವುದು ಸಂತೋಷದ ವಿಚಾರ. ಈ ಕರಸೇವೆ ಇತರ ಶಾಲೆಗಳಿಗೆ ಮಾದರಿಯಾಗಲಿದೆ. ಶಾಲೆ ಸರಕಾರದ ಒಂದು ಭಾಗ ಎಂದು ತಿಳಿಯದೆ ಸಮಾಜದ ಒಂದು ಭಾಗ ಎಂದು ತಿಳಿದು ಕೊಳ್ಳುವ ಸಂಗತಿ ಮಾಡಬೇಕು ಅದಕ್ಕೆ ಊರಿನ ನಾಗರಿಕು ಹಿರಿಯ ವಿದ್ಯರ್ಥಿಗಳ ಮತ್ತು ಶಿಕ್ಷಕರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಕೊಂಬೆಟ್ಟು ಶಾಲಾ ಪಾರಂಪರಿಕ ಕಟ್ಟಡ ಮತ್ತೊಮ್ಮೆ ಪರಂಪರೆಯನ್ನು ನೆನೆಪಿಸಲಿದೆ ಎಂದರು. ಈ ಸಂದರ್ಭದಲ್ಲಿ ಶಾಲಾಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಎಸ್ಡಿಎಂಸಿ ಸದಸ್ಯ ನ್ಯಾಯವಾದಿ ಪಡ್ಡಂಬೈಲು ಸುರೇಶ್ ರೈ, ಉಪಪ್ರಾಂಶಪಾಲ ವಸಂತ, ಹಿರಿಯ ಶಿಕ್ಷಕಿ ಗೀತಾಮಣಿ, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.