ಪುತ್ತೂರು : ಅಗತ್ಯ ದಾಖಲೆಗಳನ್ನೊಳಗೊಂಡ ಬಿದ್ದು ಸಿಕ್ಕಿದ ಪರ್ಸ್ನ್ನು ಪಡೀಲ್ ಕೆ.ಎಂ.ಇಬ್ರಾಹಿಂ ರವರು ವಾರೀಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಬೆಟ್ಟಂಪಾಡಿ ಗ್ರಾಮದ ಕೋನಡ್ಕ ನಿವಾಸಿ ಛಾಯಾಗ್ರಾಹಕರಾದ ವೇಣುಗೋಪಾಲ್ ಭಟ್ ರವರು ಪುತ್ತೂರು ಶ್ರೀಧರ್ ಭಟ್ ಬ್ರದರ್ಸ್ ಮಳಿಗೆಯ ಎದುರುಗಡೆ ರಸ್ತೆಯಲ್ಲಿ ಪರ್ಸ್ನ್ನು ಕಳೆದುಕೊಂಡಿದ್ದರು.
ಪರ್ಸ್ನಲ್ಲಿ ಎಟಿಮ್, ಲೈಸೆನ್ಸ್ ಹಾಗೂ ನಗದು ಹಣ ಇತ್ತು. ಪಡೀಲು ವಿಜಯನಗರ ನಿವಾಸಿ ಕೆ.ಎಂ.ಇಬ್ರಾಹಿಂ ರವರಿಗೆ ಪರ್ಸ್ ಸಿಕ್ಕಿದ್ದು ಪರ್ಸ್ನ್ನು ವಾರೀಸುದಾರ ವೇಣುಗೋಪಾಲ್ ಭಟ್ರವರಿಗೆ ಸುದ್ದಿ ಬಿಡುಗಡೆ ಕಚೇರಿಯಲ್ಲಿ ಹಸ್ತಾಂತರಿಸಿದರು. ವೇಣುಗೋಪಾಲ್ ಭಟ್ ಮತ್ತು ಕೆ.ಎಂ.ಇಬ್ರಾಹಿಂ ರವರು ಬಾಲ್ಯದ ಗೆಳೆಯರಾಗಿದ್ದು ಸಹಪಾಠಿಯೂ ಆಗಿದ್ದರು. ಹಲವು ಸಮಯಗಳ ಬಳಿಕ ಬಾಲ್ಯದ ಗೆಳೆಯರು ಪರ್ಸ್ನ ಮೂಲಕ ಭೇಟಿಯಾಗುವಂತಾಯಿತು.