ಕಡಬ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಎಸ್ಎಫ್ ಕುಂತೂರು ಯುನಿಟ್ನ ನೂತನ ಪದಾಧಿಕಾರಿಗಳ ನೇಮಕ ಸಭೆಯು ಎಸ್ಎಸ್ಎಫ್ ಕುಂತೂರು ಯುನಿಟ್ ಅಧ್ಯಕ್ಷ ಅಬ್ದುಲ್ ಲತೀಫ್ ಸುರುಳಿಯವರ ಅಧ್ಯಕ್ಷತೆಯಲ್ಲಿ ಕುಂತೂರು ಯುನಿಟ್ ಕಛೇರಿಯಲ್ಲಿ ನಡೆಯಿತು.
ಎಸ್ಜೆಎಂ ಉಪ್ಪಿನಂಗಡಿ ಇದರ ಪ್ರಧಾನ ಕಾರ್ಯದರ್ಶಿ ಅಬ್ದುರ್ರಝಾಖ್ ಲತೀಫಿ ಕುಂತೂರು ಉದ್ಘಾಟಿಸಿರು. ಎಲೆಕ್ಷನ್ ಆಫಿಸರ್ ಹಾರೀಸ್ ಸಖಾಫಿ ಕೆಮ್ಮಾರರವರ ನೇತೃತ್ವದಲ್ಲಿ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಮುಹಮ್ಮದ್ ಹನೀಫ್ ಝೈನಿ ಕುಂತೂರು, ಪ್ರಧಾನ ಕಾರ್ಯದರ್ಶಿಯಾಗಿ ಉನೈಸ್ ಅಹ್ಮದ್ ಕುಂತೂರು, ಕೋಶಾಧಿಕಾರಿಯಾಗಿ ಸಾಬಿತ್ ಕೆ.ಆರ್.ಕುಂತೂರು, ಕ್ಯಾಂಪಸ್ ಕಾರ್ಯದರ್ಶಿಯಾಗಿ ತೌಜೀದ್ ಕುಂತೂರು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಬಾರಿ ಕುಂತೂರು, ತಂಜೀದ್ ಕುಂತೂರು, ಕಾರ್ಯದರ್ಶಿಗಳಾಗಿ ಝಾಕಿರ್ ಸಾಲೆತಡ್ಕ, ತಮೀಮ್ ಚಾಲ್ಕರೆ, ಸಿಬಾತ್ ಕೆ.ಎಸ್.ನೆಕ್ಕರೆ, ಬಾಶಿತ್ ಕುಂತೂರು, ನೌಶಾದ್ ಕೋಚಕಟ್ಟೆ ಮತ್ತು ಸದಸ್ಯರುಗಳಾಗಿ ಸಂಶು ಗಾಂಜಾಲ್, ಇಕ್ಬಾಲ್ ಪೂಂಜಾ, ಬಶೀರ್ ಪೂಂಜ, ಅಬ್ದುಲ್ ಜಲೀಲ್ ಕುಂತೂರು, ಮುಹಮ್ಮದ್ ಶರೀಫ್ ಪೂಂಜ, ಫಾರೂಕ್ ಕೋಚಕಟ್ಟೆ, ಫಾಯಿಝ್ ಕೋಚಕಟ್ಟೆ, ಝುಬೈರ್ ಸಾಲೆತಡ್ಕ, ನಾಸಿರ್ ಕೋಚಕಟ್ಟೆ, ಶಮೀರ್ ಆಲಂಕಾರು, ನಾಸಿರ್ ಪಳ್ಳತಡ್ಕ, ಶಾಮಿಲ್ ನೆಕ್ಕರೆ, ಅಫ್ಝಲ್ ನೆಕ್ಕರೆಯವರನ್ನು ಆಯ್ಕೆ ಮಾಡಲಾಯಿತು. ನಂತರ ನೂತನ ಸಮಿತಿಗೆ ತೀವರ್ಣ ಧ್ವಜ ಹಸ್ತಾಂತರ ಮಾಡುವ ಮೂಲಕ ಅಧಿಕಾರ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್ವೈಎಸ್ ಕುಂತೂರು ಬ್ರಾಂಚ್ ಕೋಶಾಧಿಕಾರಿ ಅಬ್ದುಲ್ ಹಮೀದ್ ಕೆ.ಆರ್, ಸದಸ್ಯರಾದ ಅಬ್ದುಲ್ ಶುಖೂರ್ ಸಅದಿ, ಬಶೀರ್ ಚಾಲ್ಕರೆ, ಅಶ್ರಫ್ ಬೇಳ್ಪಾಡಿ ಹಾಗೂ ಎಸ್ಎಸ್ಎಫ್ ಸದಸ್ಯರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಉನೈಸ್ ಅಹ್ಮದ್ ಸ್ವಾಗತಿಸಿ ವಂದಿಸಿದರು.