
ಪುತ್ತೂರು: ಉಜಿರೆಯಲ್ಲಿ ಗ್ರಾ.ಪಂ.ಚುನಾವಣೆಯ ಮತ ಎಣಿಕೆಯ ಬಳಿಕ ವಿಜಯೋತ್ಸವದ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಸಂಘಟನೆಯವರು ಪಾಕಿಸ್ತಾನದ ಪರ ಘೋಷಣೆ ಕೂಗಿ ಜೈ ಕಾರ ಹಾಕಿದವರನ್ನು ಬಂಧಿಸಿ ಜೈಲಿಗೆ ಹಾಕಿದ ಬೆಳ್ತಂಗಡಿ ಪೊಲೀಸರ ಕೆಲಸ ಶ್ಲಾಘನೀಯ. ನಮ್ಮ ದೇಶದಲ್ಲಿ ದ್ರೋಹ ಬಗೆಯುವ ಇಂಥ ಸಂಘಟನೆಯನ್ನು ನಿಷೇಧಿಸಿ. ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕೆಂದು ಸವಣೂರು ಹಿಂದು ಜಾಗರಣ ವೇದಿಕೆಯು ಸವಣೂರು ಪಂಚಾಯತ್ ಪಿ.ಡಿ.ಒ, ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸವಣೂರು ಹಿಂ.ಜಾ.ವೇ. ಅಧ್ಯಕ್ಷ ಶ್ರೀಧರ ಇಡ್ಯಾಡಿ, ಕಾರ್ಯದರ್ಶಿ ನಿಶಾಂತ್ ಪರಣೆ ಹಿಂ.ಜಾ.ವೇದಿಕೆಯ ತಾಲೂಕು ಕಾರ್ಯದರ್ಶಿ ಪುಷ್ಪರಾಜ್ಅರಲ್ತಡಿ, ಸಚಿನ್ ಕೊಟ್ಯಾನ್, ಕುಲದೀಪ್ ಅಮೈ, ಹರಿಪ್ರಸಾದ್ಅಂಗಡಿ ಮೂಲೆ ಉಪಸ್ಥಿತರಿದ್ದರು.