HomePage_Banner
HomePage_Banner
HomePage_Banner
HomePage_Banner
Breaking News

ಕೆ.ಎಸ್.ಆರ್.ಟಿ.ಸಿ ಮೇಲಾಧಿಕಾರಿಗಳ ಕಿರುಕುಳ-ದೂರು ನೀಡಲು ಡಿ.ಸಿ ಕಚೇರಿಗೆ ಬಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ನಿರ್ವಾಹಕ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು;ತನ್ನ‌ ಇಲಾಖೆಯ ಮೇಲಾಧಿಕಾರಿಗಳಿಂದ ಆಗುತ್ತಿರುವ ಕಿರುಕುಳದ ಬಗ್ಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ದೂರು‌ ನೀಡಲು‌ ಬಂದ ಹಿರಿಯ ನಿರ್ವಾಹಕನೇ‌ ವಿಷ‌ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜ.11ರಂದು ಮುಕ್ರಂಪಾಡಿಯಲ್ಲಿರುವ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ಕಚೇರಿಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕು ಉಜಿರೆ ಮಾಯಿಲಪ್ಪರವರ ಪುತ್ರ ನಾಗೇಶ(57.ವ) ವಿಷ ಸೇವಿಸಿದವರು. ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗದ ಬಿ.ಸಿ ರೋಡ್ ಘಟಕದಲ್ಲಿ ನಿರ್ವಾಹಕರಾಗಿರುವ ನಾಗೇಶ್ ಎಕ್ಸ್‌ಪ್ರೆಸ್ ಬಸ್ ನಲ್ಲಿ‌ ನಿರ್ವಾಹಕರಾಗಿದ್ದರು. ಕೋವಿಡ್ ಲಾಕ್ ಡೌನ್ ಬಳಿಕ ಕರ್ತವ್ಯ ಮಾರ್ಗವನ್ನು ಬದಲಾಯಿಸಿದ್ದರು. ಇದೀಗ ಮತ್ತೆ ಎಕ್ಸ್‌ಪ್ರೆಸ್ ಬಸ್ ಸಂಚಾರ ಪ್ರಾರಂಭಗೊಂಡಿದ್ದು ಹಿಂದಿನ ಮಾರ್ಗದಲ್ಲಿಯೇ ಕೆಲಸ‌ ನೀಡುವಂತೆ ಬಿ.ಸಿ ರೋಡ್ ಘಟಕದ ಸಂಚಾರಿ ನಿಯಂತ್ರಕರಲ್ಲಿ ಮನವಿ ಮಾಡಿದ್ದರು. ಆದರೆ ಅವರ ಮನವಿಗೆ ಬೆಲೆ ಕೊಡದೆ ನಾವು ಸೂಚಿಸುವ ಮಾರ್ಗದಲ್ಲಿ ಕೆಲಸ‌ ಮಾಡುವಂತೆ ಸಂಚಾರ ನಿಯಂತ್ರಕರು ತಿಳಿಸಿದ್ದರು. ಅಲ್ಲದೆ‌ ಕಚೇರಿಯ ಇತರ‌ ಕೆಲಸಗಳಲ್ಲಿಯೂ ಮೇಲಾಧಿಕಾರಿಗಳು ಕಿರುಕುಳ ನೀಡುತ್ತಿದ್ದರು. ಹೀಗಾಗಿ ಜ.11ರಂದು ಮುಕ್ರಂಪಾಡಿಯಲ್ಲಿರುವ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಗೆ ಮೇಲಾಧಿಕಾರಗಳ ವಿರುದ್ಧ ದೂರು ನೀಡಲು ಬಂದಿದ್ದರು. ಅವರು ಬರುವಾಗಲೇ ವಿಷ ಸೇವಿಸಿ ನಿಯಂತ್ರಣಾಧಿಕಾರಿಗಳ ಕಚೇರಿಗೆ ಬಂದಿದ್ದರು ಎನ್ನಲಾಗಿದೆ. ಕಚೇರಿಯಲ್ಲಿ ನಿಯಂತ್ರಣಾಧಿಕಾರಿಗಳಲ್ಲಿ ಮಾತನಾಡುತ್ತಿರುವಾಗಲೇ ಕುಸಿದು‌ ಬಿದ್ದಿದ್ದು ಅಲ್ಲಿನ ಅಧಿಕಾರಿ ಹಾಗೂ ಸಿಬಂದಿಗಳು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಬಳಿಕ ಅವರನ್ನು‌ ಪುತ್ತೂರು ಸಿ.ಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.