HomePage_Banner
HomePage_Banner
HomePage_Banner
HomePage_Banner

ಕೆ.ಎಸ್.ಆರ್.ಟಿ.ಸಿ ಮೇಲಾಧಿಕಾರಿಗಳ ಕಿರುಕುಳ-ಡಿ.ಸಿ ಕಚೇರಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ನಿರ್ವಾಹಕ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು;ತನ್ನ ಇಲಾಖೆಯ ಮೇಲಾಧಿಕಾರಿಗಳಿಂದ ಆಗುತ್ತಿರುವ ಕಿರುಕುಳದ ಬಗ್ಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ದೂರು ನೀಡಲು ಬಂದ ಕೆ.ಎಸ್.ಆರ್.ಟಿ.ಸಿ ಹಿರಿಯ ನಿರ್ವಾಹಕನೇ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜ.11ರಂದು ಮುಕ್ರಂಪಾಡಿಯಲ್ಲಿರುವ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ಕಚೇರಿಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕು ಉಜಿರೆ ಮಾಯಿಲಪ್ಪರವರ ಪುತ್ರ ನಾಗೇಶ(೫೭.ವ) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವರು. ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗ ವ್ಯಾಪ್ತಿಯ ಬಿ.ಸಿ ರೋಡ್ ಘಟಕದಲ್ಲಿ ಎಕ್ಸ್‌ಪ್ರೆಸ್ ಬಸ್‌ನಲ್ಲಿ ನಿರ್ವಾಹಕರಾಗಿರುವ ನಾಗೇಶ್‌ರವರು, ಕೋವಿಡ್ ಲಾಕ್‌ಡೌನ್ ಬಳಿಕ ಕರ್ತವ್ಯ ಮಾರ್ಗವನ್ನು ಬದಲಾಯಿಸಲಾಗಿತ್ತು. ಇದೀಗ ಮತ್ತೆ ಎಕ್ಸ್‌ಪ್ರೆಸ್ ಬಸ್ ಸಂಚಾರ ಪ್ರಾರಂಭಗೊಂಡಿದ್ದು ಹಿಂದಿನ ಮಾರ್ಗದಲ್ಲಿಯೇ ಕೆಲಸ ನೀಡುವಂತೆ ಬಿ.ಸಿ ರೋಡ್ ಘಟಕದ ಸಂಚಾರಿ ನಿರೀಕ್ಷಕರಲ್ಲಿ ಮನವಿ ಮಾಡಿzನೆ. ಆದರೆ ಅವರು ಮನವಿಗೆ ಸ್ಪಂದನೆ ನೀಡದೆ ನಾವು ಸೂಚಿಸುವ ಮಾರ್ಗದಲ್ಲಿ ಕೆಲಸ ಮಾಡುವಂತೆ ತಿಳಿಸಿದ್ದರು. ದಿನಕ್ಕೊಂದು ಮಾರ್ಗದಲ್ಲಿ ಕೆಲಸ ನೀಡುತ್ತಿದ್ದರು. ಸಿಎಲ್ ಸಹಿತ ಇತರ ರಜೆಗಳನ್ನು ಸರಿಯಾಗಿ ನೀಡದೇ ಕಚೇರಿಯ ಇತರ ಕೆಲಸಗಳಲ್ಲಿಯೂ ಮೇಲಾಧಿಕಾರಿಗಳು ಕಿರುಕುಳ ನೀಡುತ್ತಿದ್ದರು. ಕಳೆದ ೨೯ ವರ್ಷಗಳಿಂದ ನಿರ್ವಾಹಕನಾಗಿ ದುಡಿಯುತ್ತಿದ್ದು ನನಗಾಗಿರುವ ತೊಂದರೆಯ ಬಗ್ಗೆ ಜ.೧೧ರಂದು ಮುಕ್ರಂಪಾಡಿಯಲ್ಲಿರುವ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಗೆ ಮೇಲಾಧಿಕಾರಗಳ ವಿರುದ್ಧ ದೂರು ನೀಡಲು ಬಂದಿzನೆ. ಕೀಟ ನಾಶಕ ವಿಷ ಸೇವಿಸಿಯೇ ನಾನು ನಿಯಂತ್ರಣಾಧಿಕಾರಿಗಳ ಕಚೇರಿಗೆ ಹೋಗಿzನೆ. ಕಚೇರಿಯಲ್ಲಿ ನಿಯಂತ್ರಣಾಧಿಕಾರಿಗಳಲ್ಲಿ ಮಾತನಾಡುತ್ತಿರುವಾಗಲೇ ಕುಸಿದು ಬಿದ್ದಿದ್ದು ಅಲ್ಲಿನ ಅಧಿಕಾರಿ ಹಾಗೂ ಸಿಬಂದಿಗಳು ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಪುತ್ತೂರು ಸಿ.ಟಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಆಸ್ಪತ್ರೆಯಲ್ಲಿ ದಾಖಲಾಗಿರುವ ನಿರ್ವಾಹಕ ನಾಗೇಶ ಹೇಳಿದ್ದಾರೆ.

ಕ್ರಮಕೈಗೊಳ್ಳದಿದ್ದರೆ ಹೋರಾಟ;
ಮೇಲಾಧಿಕಾರಿಗಳ ಕಿರುಕುಳದಿಂದ ಬೇಸತ್ತು ವಿಷ ಸೇವಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ. ಇಂತಹ ಘಟನೆಗಳು ಪ್ರತಿ ಇಲಾಖೆಗಳಲ್ಲಿಯೂ ನಡೆಯುತ್ತಿದೆ. ಇದರ ಬಗ್ಗೆ ಎಚ್ಚೆತ್ತುಕೊಂಡು ಮಾನಸಿಕ, ಕಿರುಕುಳ ನೀಡುವ ಅಧಿಕಾರಿಗಳ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು. ಈಗಾಗಲೇ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಮೇಲಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ, ಪರಿಶಿಷ್ಠ ಜಾತಿ ಕೆ.ಎಸ್.ಆರ್.ಟಿ.ಸಿ ನೌಕರರ ಸಂಘದಿಂದ ಪ್ರತಿಭಟನೆ ನಡೆಸುವುದಾಗಿ ದಲಿತ್ ಸೇವಾ ಸಮಿತಿ ಕೆ.ಎಸ್.ಆರ್.ಟಿ.ಸಿ ಪುತ್ತೂರು ಘಟಕದ ಪರಿಶಿಷ್ಠ ಜಾತಿ ನೌಕರರ ಸಂಘದ ಗೌರವಾಧ್ಯಕ್ಷ ಸೇಸಪ್ಪ ಬೆದ್ರುಕಾಡುರವರು, ಎಚ್ಚರಿಸಿದ್ದಾರೆ.

ಕೂಲಂಕುಷವಾಗಿ ಪರಿಶೀಲಿಸಿ ಕ್ರಮ; ಬಿ.ಸಿ ರೋಡ್ ಘಟಕದಲ್ಲಿ ಸಂಚಾರ ನಿರೀಕ್ಷಕರು ಕೆಲಸ ಕೊಡುವ ವಿಚಾರದಲ್ಲಿ ಉಂಟಾದ ಸಮಸ್ಯೆಯ ಕುರಿತು ದೂರು ನೀಡಲು ನಿರ್ವಾಹಕ ನಾಗೇಶರವರು ಕಚೇರಿಗೆ ಬಂದಿದ್ದಾರೆ. ಅವರು ಬರುವಾಗಲೇ ಕೀಟನಾಶಕ ಸೇವನೆ ಮಾಡಿ ಬಂದಿದ್ದು ಕೀಟ ನಾಶಕದ ವಾಸನೆ ಹಾಗೂ ಬಾಯಿಯಲ್ಲಿ ನೊರೆ ಬರುತ್ತಿರುವುದನ್ನು ಗಮನಿಸಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿzವೆ. ಕೆಲಸದಲ್ಲಿ ಉಂಟಾಗಿರುವ ಸಮಸ್ಯೆಯ ಕುರಿತು ಈ ತನಕ ನಮಗೆ ಯಾವುದೇ ದೂರು ನೀಡಿಲ್ಲ. ಪ್ರಥಮ ಬಾರಿಗೆ ದೂರು ನೀಡಲು ಬಂದಿದ್ದಾರೆ. ಘಟನೆಯ ಕುರಿತು ಕೂಲಂಕುಷವಾಗಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ತಿಳಿಸಿದ್ದಾರೆ.

ಕಿರುಕುಳ ನೀಡುತ್ತಿದ್ದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಿ: ಕೆಎಸ್‌ಆರ್‌ಟಿಸಿಯಲ್ಲಿ ಕಳೆದ ೨೯ ವರ್ಷದಲ್ಲಿ ನಿರ್ವಾಹಕನಾಗಿರುವ ನನ್ನ ಸಹೋದರ ನಾಗೇಶ ಪ್ರಸ್ತುವ ಬಿ.ಸಿ ರೋಡ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಅಲ್ಲಿನ ಅಧಿಕಾರಿಗಳು ಬಹಳಷ್ಟು ಕಿರುಕುಳ ನೀಡುತ್ತಿದ್ದರು. ಮಾನಸಿಕವಾಗಿ, ಶಾರೀರಿಕವಾಗಿ ತೊಂದರೆಗಳಿದ್ದು ಅವರು ಕಚೇರಿಗೆ ಬರುವಾಗ ಐದು ನಿಮಿಷ ತಡವಾಡದರೂ ಕರ್ತವ್ಯಕ್ಕೆ ಹಾಜರಾಗಲು ಅವಕಾಶ ನೀಡುತ್ತಿರಲಿಲ್ಲ. ಈ ಬಗ್ಗೆ ಕಿರುಕುಳ ನೀಡುವ ಅಧಿಕಾರಿಗಳ ವಿರುದ್ಧ ನಿಗಮ ಸೂಕ್ತ ಕ್ರಮಕೈಗೊಳ್ಳುವಂತೆ ನಾಗೇಶರವರ ಸಹೋದರ ರಮೇಶ ಆಗ್ರಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.