ಪುತ್ತೂರು: ಡಾ. ಗಣೇಶ್ ನಾಯಕ್.ಎಸ್ M.B.B.S. MD. (ಜನರಲ್ ಮೆಡಿಸಿನ್ . ಇವರು ಪ್ರಸ್ತುತ ಮಂಗಳೂರಿನ ಪ್ರತಿಷ್ಠಿತ ಫಾದರ್ ಮುಲ್ಲರ್ಸ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಪುತ್ತೂರಿನ ಸೈಂಟ್ ವಿಕ್ಟರ್ ಶಾಲೆ ಹಾಗೂ ಸಂತ ಫಿಲೋಮಿನಾ ಪ್ರೌಢಶಾಲೆ ಹಾಗೂ ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿದ ಇವರು ತಮ್ಮ ವೈದ್ಯಕೀಯ ಶಿಕ್ಷಣವನ್ನು ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜು ಮಂಗಳೂರು ಮತ್ತು ಉನ್ನತ ಎಂ.ಡಿ ಶಿಕ್ಷಣವನ್ನು ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಪಡೆದಿರುತ್ತಾರೆ.
ಕೊರೋನಾದ ತುರ್ತು ಸಂದರ್ಭದಲ್ಲಿ ಸುಮಾರು 9 ತಿಂಗಳುಗಳ ಕಾಲ ತಮ್ಮ ಜೀವವನ್ನೇ ಪಣವಾಗಿಟ್ಟು ಸುಮಾರು 500ಕ್ಕೂ ಅಧಿಕ ಕೊರೋನಾ ರೋಗಿಗಳಿಗೆ ಸೇವೆಯನ್ನು ನೀಡಿ ಅವರನ್ನು ಗುಣಪಡಿಸಿದ ಗೌರವ ಇವರಿಗೆ ಸಲ್ಲುತ್ತದೆ.
ಡಾ. ಗಣೇಶ್ ನಾಯಕ್ ಇವರು ಪರ್ಲಡ್ಕ ನಿವಾಸಿ ಉದ್ಯಮಿ ಶ್ರೀ ಸುಳ್ಯಪದವು ವೈಕುಂಠ ನಾಯಕ್ ಹಾಗೂ ಶ್ರೀಮತಿ ಗಾಯತ್ರಿ ನಾಯಕ್ ಇವರ ಸುಪುತ್ರ ರಾಗಿರುತ್ತಾರೆ.
ಮಧುಮೇಹ ಕುರಿತಾಗಿ ವಿಶೇಷ ಅಧ್ಯಯನ ಮಾಡಿರುವ ಇವರು ಮಧುಮೇಹ ಅಲ್ಲದೆ ಬಿಪಿ, ಕೊಲೆಸ್ಟರಾಲ್, ಥೈರಾಯ್ಡ್, ಡೆಂಗ್ಯೂ, ಮಲೇರಿಯಾ ಹಾಗೂ ವೈರಲ್ ಇನ್ಫೆಕ್ಷನ್ ನಿಂದ ಉಂಟಾಗುವ ರೋಗಗಳಿಗೆ ಹಾಗೂ ಇತರ ಯಾವುದೇ ರೀತಿಯ ವೈದ್ಯಕೀಯ ತೊಂದರೆಗಳಿಗೆ ಸಮಾಲೋಚನೆ ಮತ್ತು ಸೇವೆಗೆ ಜನವರಿ 13ರಿಂದ ಪ್ರತಿ ಬುಧವಾರ ಹಾಗೂ ಗುರುವಾರ ಸಂಜೆ 6.30 ರಿಂದ 8 ರವರೆಗೆ ದರ್ಬೆ ಉಷಾ ಪಾಲಿಕ್ಲಿನಿಕ್ಕಿನಲ್ಲಿ ಲಭ್ಯರಿರುತ್ತಾರೆ. ಅಪ್ಪೋಯಿಂಟ್ಮೆಂಟ್ ಪಡೆಯಲು 9008256005 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.