ಪುತ್ತೂರು: ಸಮಯ ಪಾಲನೆಗೆ ಮೊದಲ ಆದ್ಯತೆ, ಅನಿವಾರ್ಯ ಕಾರಣ ಇದ್ದರೆ ಮೊದಲೇ ತಿಳಿಸಿ, ಇಲ್ಲಂತಾದರೆ ನಮ್ಮಲ್ಲಿ ಯಾವುದೇ ರೀಯಾಯಿತಿ ಇಲ್ಲ. ಸಭೆಗೆ ಭಾರದ ಅಧಿಕಾರಿಗಳ ಕುರಿತು ಮೇಲಾಧಿಕಾರಿಗಳಿಗೆ ನೋಟೀಸ್ ಮಾಡುವಂತೆ ಶಾಸಕ ಸಂಜೀವ ಮಠಂದೂರು ಅವರು ತಾ.ಪಂ ಒ.ಒ ಅವರಿಗೆ ಸೂಚನೆ ನೀಡಿದರು.
ತಾ.ಪಂ ತ್ರೈಮಾಸಿಕ ಕೆಡಿಪಿ ಸಭೆಯು ಶಾಸಕ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ಜ.೧೨ ರಂದು ತಾ.ಪಂ ಸಭಾಂಗಣದಲ್ಲಿ ನಡೆಯಿತು.
ತಾ.ಪಂ ಅಧ್ಯಕ್ಷ ರಾಧಾಕ್ರಷ್ಣ ಬೋರ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕ್ರಷ್ಣ ಆಳ್ವ, ತಹಸೀಲ್ದಾರ್ ರಮೇಶ್ ಬಾಬು, ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆಡಿಪಿ ನಾಮನಿರ್ದೇಶಿತ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.