ಪುತ್ತೂರು: ಸಂಪ್ಯದಲ್ಲಿ ಜ.11ರಂದು ನಡೆದ ಎಸ್ಕೆಎಸ್ಸೆಸ್ಸೆಫ್ ಮುನ್ನಡೆ ಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕ ವಿಧಾನ ಸಭೆಯ ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಅವರು ಅಲ್ಲಿಂದ ತೆರಳುವ ವೇಳೆ ಕುಂಬ್ರದ ಸನ್ ಶೈನ್ ಮೊಬೈಲ್ ಶಾಪ್ ಭೇಟಿ ನೀಡಿದರು.
ಸನ್ಶೈನ್ ಮೊಬೈಲ್ಸ್ನ ಮಾಲಕ ಅಶ್ರಫ್ ಸನ್ಶೈನ್ ಅವರು ರಮೇಶ್ ಕುಮಾರ್ ಅವರನ್ನು ಸ್ವಾಗತಿಸಿ ಸತ್ಕರಿಸಿದರು. ಕೆಲಕಾಲ ಮೊಬೈಲ್ ಮಳಿಗೆಯಲ್ಲಿ ಕಳೆದ ರಮೇಶ್ ಕುಮಾರ್ ಅವರು ಕುಶಲೋಪರಿ ನಡೆಸಿ ಅಲ್ಲಿಂದ ತೆರಳಿದರು.