HomePage_Banner
HomePage_Banner
HomePage_Banner
HomePage_Banner

ಮಿನಿ ವಿಧಾನಸೌಧದ ಆವರಣದಲ್ಲಿ ಉಚಿತ ಮಧುಮೇಹ, ಲಿಪಿಡ್ ಪ್ರೊಫೈಲ್, HBA1c, ರಕ್ತದೊತ್ತಡ, ಬಿಎಂಡಿ, ಬಿಎಂಐ ತಪಾಸಣಾ ಶಿಬಿರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸದೃಢ ಆರೋಗ್ಯಕ್ಕೆ ವ್ಯಾಯಾಮ ಅತ್ಯಗತ್ಯ-ಡಿಜಿ ರಂಗನಾಥ್ ಭಟ್

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ರೋಟರಿ ಸಂಸ್ಥೆಯ ಏಕ್ ಚಮಚ್ ಕಮ್, ಚಾರ್ ಕದಂ ಆಗೇ ಎಂಬ ಧ್ಯೇಯವಾಕ್ಯದಂತೆ ಒಂದು ಚಮಚ ಉಪ್ಪು, ಸಕ್ಕರೆ, ಎಣ್ಣೆಯನ್ನು ಕಡಿಮೆಗೊಳಿಸಿ, ನಾಲ್ಕು ಹೆಜ್ಜೆ ನಡೆಯುವ ಮೂಲಕ ವ್ಯಾಯಾಮವನ್ನು ಜೀವನದಲ್ಲಿ ರೂಢಿಸಿಕೊಂಡಾಗ ಮನುಷ್ಯನ ಸದೃಢ ಆರೋಗ್ಯಕ್ಕೆ ಪೂರಕವಾಗಲಿದೆ ಎಂದು ರೋಟರಿ ಜಿಲ್ಲೆ ೩೧೮೧ ಇದರ ಜಿಲ್ಲಾ ಗವರ್ನರ್ ರಂಗನಾಥ್ ಭಟ್‌ರವರು ಹೇಳಿದರು. ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ರೋಟರಿ ಕ್ಲಬ್ ಪುತ್ತೂರು ಎಲೈಟ್ ಇದರ ಜಂಟಿ ಆಶ್ರಯದಲ್ಲಿ ಚೇತನಾ ಆಸ್ಪತ್ರೆ, ಪುತ್ತೂರು ಡಯಾಗ್ನಾಸ್ಟಿಕ್ ಲ್ಯಾಬೋರೇಟರಿ ಸಹಯೋಗದಲ್ಲಿ ಪುತ್ತೂರು ಮಿನಿ ವಿಧಾನಸೌಧದ ಎಲ್ಲಾ ಸರಕಾರಿ ಕಛೇರಿಗಳ ಸಹಕಾರದಲ್ಲಿ ಪ್ರಾಜೆಕ್ಟ್ ಪಾಸಿಟಿವ್ ಹೆಲ್ತ್ ಅಂಗವಾಗಿ ಜ.12 ರಂದು ಬೆಳಿಗ್ಗೆ ಪುತ್ತೂರು ಮಿನಿ ವಿಧಾನಸೌಧದ ಆವರಣದಲ್ಲಿ ಜರಗಿದ ಉಚಿತ ಮಧುಮೇಹ, ಲಿಪಿಡ್ ಪ್ರೊಫೈಲ್(ರಕ್ತದಲ್ಲಿರುವ ಸಕ್ಕರೆ, ಕೊಲೆಸ್ಟ್ರಾಲ್), HBA1c, ರಕ್ತದೊತ್ತಡ, ಬಿಎಂಡಿ, ಬಿಎಂಐ ತಪಾಸಣಾ ಶಿಬಿರ, ರಕ್ತದೊತ್ತಡ, ಬಿಎಂಡಿ(ಎಲುಬು ಸಾಂದ್ರತೆ), ಬಿಎಂಐ(ಬಾಡಿ ಮಾಸ್ ಇಂಡೆಕ್ಸ್) ತಪಾಸಣಾ ಶಿಬಿರದಲ್ಲಿ ಅವರು ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ವಿಶ್ವದಾದ್ಯಂತ ರೋಟರಿ ಸಂಸ್ಥೆಯು ಸಮಾಜದ ಜನರಿಗೆ ಉಪಯುಕ್ತವಾಗುವ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಮನೆಮಾತಾಗಿದೆ. ರೋಟರಿ ಸಂಸ್ಥೆಯು ಇದೀಗ ಆರೋಗ್ಯದ ವಿಷಯದಲ್ಲಿ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಮತ್ತೂ ಹತ್ತಿರವಾಗಿದೆ. ಯಾವುದೇ ಲಾಭದ ಅಂಶವನ್ನು ನೋಡದೆ ಸಾರ್ವಜನಿಕರ ಆರೋಗ್ಯದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಉದ್ಧೇಶದಿಂದ ರೋಟರಿ ಸಂಸ್ಥೆಯು ಚೇತನಾ ಆಸ್ಪತ್ರೆ, ಪುತ್ತೂರು ಡಯಾಗ್ನಾಸ್ಟಿಕ್ ಲ್ಯಾಬೋರೇಟರಿಯೊಂದಿಗೆ ಸೇವೆಗೈಯುವ ಅವಕಾಶ ಇದಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಚೇತನಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜೆ.ಸಿ ಅಡಿಗರವರು ಮಾತನಾಡಿ, ಕೋವಿಡ್ ಬಂದ ನಂತರ ಇಂತಹ ಮೆಡಿಕಲ್ ಕ್ಯಾಂಪ್‌ಗಳು ಕಡಿಮೆಯಾಗಿದೆ. ಇದೀಗ ಕೋವಿಡ್ ರೋಗದ ಲಕ್ಷಣಗಳು ಕಡಿಮೆಯಾದ ಸಂದರ್ಭದಲ್ಲಿ ಮತ್ತೇ ಕ್ಯಾಂಪ್‌ಗಳು ಆರಂಭವಾಗಿದೆ. ಸಾಂಕ್ರಾಮಿಕವಲ್ಲದ ರೋಗಗಳಾದ ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್, ಬೊಜ್ಜು, ಪಕ್ಷಪಾತ, ಹೃದಯಾಘಾತ, ಲಿವರ್ ಸಮಸ್ಯೆಗಳು ಉದ್ಭವವಾಗುವುದು ಮಾನವನ ಅತಿಯಾದ ನಿರ್ಲಕ್ಷ್ಯತನದಿಂದಾಗಿದೆ. ಜಾಸ್ತಿ ಕೊಬ್ಬಿನ ಆಹಾರ, ಬೇಕರಿ ಐಟಂಗಳು, ಫಾಸ್ಟ್‌ಫುಡ್ ಸೇವಿಸುವುದನ್ನು ನಿಲ್ಲಿಸಿದಾಗ ಆರೋಗ್ಯವು ಹಿತಮಿತದಲ್ಲಿರಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೋರ್ವರೂ ಕ್ಲಪ್ತ ಸಮಯದಲ್ಲಿ ತಜ್ಞ ವೈದ್ಯರುಗಳಲ್ಲಿ ಪರೀಕ್ಷೆಯನ್ನು ಮಾಡಿಸುವಂತಾಗಲಿ ಎಂದರು.

ಪುತ್ತೂರು ತಹಶೀಲ್ದಾರ್ ಟಿ.ರಮೇಶ್‌ಬಾಬುರವರು ಮಾತನಾಡಿ, ದೈನಂದಿನ ಕೆಲಸದ ಒತ್ತಡದಿಂದಾಗಿ ತನ್ನ ಆರೋಗ್ಯವನ್ನು ಕಾಪಾಡುವಲ್ಲಿ ಮನುಷ್ಯ ಎಡಹುತ್ತಾನೆ. ಆರೋಗ್ಯವರ್ಧಿತ ಜೀವನ ನಮ್ಮದಾಗಬೇಕಾದರೆ ಕೊಬ್ಬರಹಿತ ಆಹಾರದ ಸೇವನೆ ಮಾಡಬೇಕು. ರಾತ್ರಿಯ ಆಹಾರ ಸೇವನೆಯು ಮಿತವಾಗಿರಲಿ. ರೋಟರಿ ಸಂಸ್ಥೆಗಳು ಹಮ್ಮಿಕೊಂಡ ಉಚಿತ ಆರೋಗ್ಯ ಶಿಬಿರದ ಪ್ರಯೋಜನವನ್ನು ಪ್ರತಿಯೋರ್ವರೂ ಪಡೆದುಕೊಳ್ಳುವಂತಾಗಲಿ ಎಂದರು.

ರೋಟರಿ ಜಿಲ್ಲೆ ೩೧೮೧ ಇದರ ಸಹಾಯಕ ಗವರ್ನರ್ ಸಚ್ಚಿದಾನಂದ ಡಿ.ರವರು ಮಾತನಾಡಿ, ಪ್ರತೀ ರೋಟರಿ ಸಂಸ್ಥೆಗೆ ಜಿಲ್ಲಾ ಗವರ್ನರ್ ಭೇಟಿ ಹಬ್ಬದ ವಾತಾವರಣವಿದ್ದಾಗೆ.ಈ ಸಂದರ್ಭದಲ್ಲಿ ರೋಟರಿ ಸೆಂಟ್ರಲ್, ಸ್ವರ್ಣ, ಎಲೈಟ್ ಸಂಸ್ಥೆಯು ಆರೋಗ್ಯ ಸಂಬಂಧಿತ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್‌ನ ಅಧ್ಯಕ್ಷ ವೆಂಕಟ್ರಾಜ್ ಪಿ.ಜಿ ಸ್ವಾಗತಿಸಿ, ಕಾರ್ಯದರ್ಶಿ ಅಶೋಕ್ ನಾಕ್ ವಂದಿಸಿದರು. ಮಾಜಿ ಅಧ್ಯಕ್ಷ ಸಂತೋಷ್ ಶೆಟ್ಟಿ, ರೋಟರಿ ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಕಾರ್ಯದರ್ಶಿ ಆಸ್ಕರ್ ಆನಂದ್, ರೊಟೇರಿಯನ್ಸ್‌ಗಳಾದ ಪುರುಷೋತ್ತಮ್, ವಿಷ್ಣು ಭಟ್, ಅಮಿತಾ ಶೆಟ್ಟಿ, ಡಾ|ರಾಜೇಶ್ ಬೆಜ್ಜಂಗಳರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಮಾಜಿ ಕಾರ್ಯದರ್ಶಿ ರಫೀಕ್ ರೋಯಲ್ ಕಾರ್ಯಕ್ರಮ ನಿರೂಪಿಸಿದರು.

ಮಿನಿ ವಿಧಾನಸೌಧದ ಆವರಣದಲ್ಲಿ ಪ್ರಥಮವಾಗಿದೆ…
ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್ ಇದ್ದವರು ಈ ಕೋವಿಡ್ ಸಮಯದಲ್ಲಿ ಬಹಳಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ಕೆಲಸದ ಒತ್ತಡದ ನಡುವೆ ತಮ್ಮ ಆರೋಗ್ಯದ ತಪಾಸಣೆಯನ್ನು ಮಾಡಿಸುವಲ್ಲಿ ಮನುಷ್ಯ ವಿಳಂಬ ಧೋರಣೆ ಮಾಡುತ್ತಿದ್ದಾನೆ. ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕೆಂದರೆ ನಿರಂತರ ವ್ಯಾಯಾಮ, ಆರೋಗ್ಯ ಪೂರಕ ಚಟುವಟಿಕೆಗಳು, ಆಹಾರಕ್ರಮದಲ್ಲಿ ಬದಲಾವಣೆ ಮಾಡಿಕೊಂಡಾಗ ನಾವು ನಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದಾಗಿದೆ. ಈ ಮಿನಿ ವಿಧಾನಸೌಧದ ಆವರಣದಲ್ಲಿ ಇಲ್ಲಿನ ಅಧಿಕಾರಿ ವರ್ಗದವರಿಗೆ ಹಾಗೂ ಸಿಬ್ಬಂದಿಗಳಿಗೆ ಮತ್ತು ಸಾರ್ವಜನಿಕರಿಗೆ ರೋಟರಿ ಸಂಸ್ಥೆಯವರು ಉಚಿತವಾಗಿ ಆರೋಗ್ಯ ಸಂಬಂಧಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದಾಗ ಬಹಳ ಖುಶಿಯಾಯಿತು ಮಾತ್ರವಲ್ಲದೆ ಈ ಆವರಣದಲ್ಲಿ ಇಂತಹ ಕಾರ್ಯಕ್ರಮಗಳು ಇದೇ ಪ್ರಥಮವಾಗಿದೆ.
-ಡಾ.ಯತೀಶ್ ಉಳ್ಳಾಲ್, ಸಹಾಯಕ ಆಯುಕ್ತರು, ಪುತ್ತೂರು

ಚೇತನಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜೆ.ಸಿ ಆಡಿಗರವರ ನೇತೃತ್ವದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು, ನೋಯಲ್ ಡಿ’ಸೋಜರವರ ನೇತೃತ್ವದ ಪುತ್ತೂರು ಡಯಾಗ್ನಾಸ್ಟಿಕ್ ಲ್ಯಾಬೋರೇಟರಿಯ ಸಿಬ್ಬಂದಿಗಳು, ಗ್ಲೆನ್‌ಮಾರ್ಕ್ ಹಾಗೂ ಸನ್‌ಫಾರ್ಮಾ ಕಂಪೆನಿಯ ಸಿಬ್ಬಂದಿಗಳು ಮಧುಮೇಹ, ಲಿಪಿಡ್ ಪ್ರೊಫೈಲ್, HBA1c, ರಕ್ತದೊತ್ತಡ, ಬಿಎಂಡಿ, ಬಿಎಂಐ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.