ಪುತ್ತೂರು: ಪುತ್ತೂರು ತಾಲೂಕು ಪಂಚಾಯತಿಯ ಸಾಮರ್ಥ್ಯ ಸೌಧದಲ್ಲಿರುವ ವಿಕಲಚೇತನರ ಸೇವಾ ಕೇಂದ್ರ ವಿಭಾಗಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಹರೀಶ್ರವರು ಭೇಟಿ ನೀಡಿದರು. ವಿಕಲಚೇತನ ಇಲಾಖೆಯ ಪುತ್ತೂರು ಹಾಗೂ ಕಡಬ ತಾಲೂಕಿನ ನೋಡೆಲ್ ಅಧಿಕಾರಿ ಭಾರತಿ ಜೆ.ಎ., ಪುತ್ತೂರು ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್, ಕಡಬ ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ಅಕ್ಷತಾ ಎ., ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ೩೪ನೆಕ್ಕಿಲಾಡಿ ಗ್ರಾಮ ಪಂಚಾಯತಿಯ ಸೇಸಪ್ಪ ಶಾಂತಿನಗರ, ಕುಡಿಪ್ಪಾಡಿ ಗ್ರಾಮ ಪಂಚಾಯತಿಯ ರವೀಂದ್ರ ಆಚಾರ್ಯ, ನಗರ ಪುನರ್ವಸತಿ ಕಾರ್ಯಕರ್ತರಾದ ಕಾರ್ತಿಕ್, ಸುಜೇತ, ಉಮಾವತಿಯವರು ಉಪಸ್ಥಿತರಿದ್ದರು.