HomePage_Banner
HomePage_Banner
HomePage_Banner
HomePage_Banner

ಕಾಂಗ್ರೆಸ್ ಕೊಳ್ತಿಗೆ ವಲಯದಿಂದ ಅಭಿನಂದನಾ ಸಮಾರಂಭ | ಗ್ರಾಪಂಗೆ ಸ್ಪರ್ಧಿಸಿದ, ಚುನಾಯಿತ ಅಭ್ಯರ್ಥಿಗಳಿಗೆ, ಮತದಾರರಿಗೆ ಅಭಿನಂದನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  •  ಸಂಘಟಿತ ಹೋರಾಟಕ್ಕೆ ಕೊಳ್ತಿಗೆಯಲ್ಲಿ ಜಯ ಸಿಕ್ಕಿದೆ: ಕಾವು ಹೇಮನಾಥ ಶೆಟ್ಟಿ
  • ಗ್ರಾಮದ ಅಭಿವೃದ್ಧಿಯೇ ದೇಶದ ಅಭಿವೃದ್ಧಿ: ಅನಿತಾ ಹೇಮನಾಥ ಶೆಟ್ಟಿ
  • ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ಅವಕಾಶ ಕೊಟ್ಟಿದ್ದು ಕಾಂಗ್ರೆಸ್: ಮಹಮ್ಮದ್ ಬಡಗನ್ನೂರು
  •  ಕೊಳ್ತಿಗೆಯಲ್ಲಿ ಸಂಘಟನಾತ್ಮಕ ಶಕ್ತಿ ಇದೆ: ಎಂ.ಬಿ.ವಿಶ್ವನಾಥ
  • ಕಾಂಗ್ರೆಸ್‌ನಿಂದ ಮಾತ್ರ ಗ್ರಾಮದಲ್ಲಿ ಅಭಿವೃದ್ಧಿ: ರಾಮ ಪಾಂಬಾರು
  • ಕೊಳ್ತಿಗೆ ಕಾಂಗ್ರೇಸ್‌ಮಯವಾಗಿದೆ: ಗಂಗಾಧರ ಗೌಡ ಕೆಮ್ಮಾರ
  • ಕಾಂಗ್ರೇಸ್ ಮುಕ್ತ ದೇಶ ಮಾಡುವುದು ಬಿಜೆಪಿಯವರ ಭ್ರಮೆ: ಎಸ್.ಪಿ.ಮುರಳೀಧರ

 
ಪುತ್ತೂರು: ಕಾಂಗ್ರೆಸ್‌ನ ಎಲ್ಲಾ ನಾಯಕರುಗಳು, ಕಾರ್ಯಕರ್ತರು ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಸಂಘಟಿತರಾಗಿ ಹೋರಾಟ ಮಾಡಿರುವುದೇ ಕೊಳ್ತಿಗೆಯಲ್ಲಿ ದೊರೆತ ಜಯಕ್ಕೆ ಮುಖ್ಯ ಕಾರಣವಾಗಿದೆ.ಕೊಳ್ತಿಗೆಯಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದರೆ ಅದು ಸಂಘಟತ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹೇಳಿದರು.

ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್  ಕೊಳ್ತಿಗೆ ವಲಯ ಇದರ ಆಶ್ರಯದಲ್ಲಿ ಜ.12 ರಂದು ಪೆರ್ಲಂಪಾಡಿ ಅಂಬೇಡ್ಕರ್ ಭವನದಲ್ಲಿ ನಡೆದ ಸ್ಥಳೀಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಭಾಗವಹಿಸಿದ ಮತದಾರ ಬಂಧುಗಳಿಗೆ, ಸ್ಪರ್ಧಿಸಿದ ಮತ್ತು ಚುನಾಯಿತರಾದ ಪಂಚಾಯತ್ ಅಭ್ಯರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಕೊಳ್ತಿಗೆಯಲ್ಲಿ ಬಹುತೇಕ ವಲಯವನ್ನು ಕಾಂಗ್ರೇಸ್ ಆವರಿಸಿಕೊಂಡು ಬಿಟ್ಟಿದೆ. ಇಲ್ಲಿನ ಸಿಎ ಬ್ಯಾಂಕ್ ಆಡಳಿತವಾಗಿರಬಹುದು, ಹಾಲು ಸೊಸೈಟಿಯ ಆಡಳಿತವಿರಬಹುದು ಹಾಗೇ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಈ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ನ ನಾಯಕರುಗಳೇ ತಮ್ಮ ಅಧಿಕಾರದಲ್ಲಿದ್ದಾರೆ. ಆದ್ದರಿಂದ ಸದ್ಯಕ್ಕೆ ಬಿಜೆಪಿಯವರಿಗೆ ಕೊಳ್ತಿಗೆಯಲ್ಲಿ ತಮ್ಮ ಇರುವಿಕೆ ತೋರಿಸಿಕೊಳ್ಳುವುದು ಸ್ವಲ್ಪ ಕಷ್ಟಸಾಧ್ಯ ಎಂದು ಹೇಳಿದ ಕಾವು ಹೇಮನಾಥ ಶೆಟ್ಟಿಯವರು, ಕೊಳ್ತಿಗೆ ಪಂಚಾಯತ್‌ಗೆ ಸಮರ್ಥ ನಾಯಕತ್ವದ ಗ್ರಾಮಾಭಿವೃದ್ಧಿ ಚಿಂತನೆಯುಳ್ಳ ೧೧ ಮಂದಿ ಅಭ್ಯರ್ಥಿಗಳ ಗೆಲವು ಇಡೀ ಗ್ರಾಮದ ಗೆಲುವು ಆಗಿದೆ ಎಂದರು. ಅಭಿವೃದ್ಧಿಯೇ ಕಾಂಗ್ರೆಸ್ ಪಕ್ಷದ ನಿಲುವು ಎಂಬುದನ್ನು ಕೊಳ್ತಿಗೆ ಜನರು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿ ಅಭಿನಂದನೆ ಸಲ್ಲಿಸಿದರು.

ಗ್ರಾಮದ ಅಭಿವೃದ್ಧಿಯೇ ದೇಶದ ಅಭಿವೃದ್ಧಿ: ಅನಿತಾ ಹೇಮನಾಥ ಶೆಟ್ಟಿ
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ, ಗ್ರಾಮದ ಅಭಿವೃದ್ಧಿಯೇ ದೇಶದ ಅಭಿವೃದ್ಧಿಯಾಗಿದೆ. ಯಾವುದೇ ಒಂದು ಗ್ರಾಮ ಅಭಿವೃದ್ಧಿಯಾದರೆ ಮಾತ್ರ ಭಾರತ ದೇಶ ಅಭಿವೃದ್ಧಿಯಾಗಲು ಸಾಧ್ಯ ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಗ್ರಾಮಾಭಿವೃದ್ಧಿಯ ಕಡೆಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದೆ. ಕೊಳ್ತಿಗೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರುಗಳು ಮಾಡಿರುವ ಒಳ್ಳೆಯ ಅಭಿವೃದ್ಧಿ ಕೆಲಸಗಳೇ ಇಂದು ಪಕ್ಷ ಆಡಳಿತವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು. ಗ್ರಾಮದ ಹಿರಿಯ,ಕಿರಿಯ ನಾಯಕರುಗಳು, ಕಾರ್ಯಕರ್ತರ ಮತ್ತು ಮತದಾರರ ಶ್ರಮದ ಫಲವಾಗಿ ಕೊಳ್ತಿಗೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದೆ. ಮುಂದಿನ ದಿನಗಳಲ್ಲಿ ಗ್ರಾಮದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಗೂ ಸ್ಪಂದಿಸುವ ಗುಣ ನಮ್ಮ ಕಾಂಗ್ರೆಸ್ ಸದಸ್ಯರಲ್ಲಿ ಬರಲಿ, ಗ್ರಾಮದ ಅಭಿವೃದ್ಧಿಗಾಗಿ ಶ್ರಮವಹಿಸಿ ಎಂದು ಹೇಳಿ ಶುಭ ಹಾರೈಸಿದರು.

ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ಅವಕಾಶ ಕೊಟ್ಟಿದ್ದು ಕಾಂಗ್ರೆಸ್: ಮಹಮ್ಮದ್ ಬಡಗನ್ನೂರು
ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ ಮಾತನಾಡಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ಅಧ್ಯಕ್ಷ ಮಹಮ್ಮದ್ ಬಡಗನ್ನೂರುರವರು, ರಾಜಕೀಯ ರಂಗದಲ್ಲಿ ಗ್ರಾಮದ ಕಟ್ಟ ಕಡೆಯ ವ್ಯಕ್ತಿಗೂ ಅವಕಾಶ ಕೊಟ್ಟಿದ್ದು ಕಾಂಗ್ರೆಸ್ ಪಕ್ಷವಾಗಿದೆ. ಅದೇ ರೀತಿಯಲ್ಲಿ ಅಭಿವೃದ್ಧಿಯಲ್ಲೂ ಕಟ್ಟಕಡೆಯ ವ್ಯಕ್ತಿಗೂ ಸವಲತ್ತು ನೀಡಿದ್ದೂ ಕೂಡ ಕಾಂಗ್ರೆಸ್ ಪಕ್ಷವಾಗಿದೆ. ಜನಮಾನಸದಲ್ಲಿ ಸದಾ ನೆನಪಲ್ಲಿ ಉಳಿಯುವಂತಹ ಬಹಳಷ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದ ಪಕ್ಷವಿದ್ದರೆ ಅದು ಕಾಂಗ್ರೆಸ್ ಎಂಬುದು ಎಲ್ಲರಿಗೂ ತಿಳಿದ ವಿಚಾರವಾಗಿದೆ ಎಂದರು. ಕೆಲವು ಕಡೆಗಳಲ್ಲಿ ಜಾತಿ,ಮತ,ಧರ್ಮದ ಆಧಾರದಲ್ಲಿ ಬಿಜೆಪಿಗೆ ಗೆಲುವು ಆಗಿರಬಹುದು ಆದರೆ ಇದು ಶಾಶ್ವತ ಗೆಲುವು ಅಲ್ಲ, ಆದರೆ ಕಾಂಗ್ರೇಸ್ ಜಾತ್ಯಾತೀತವಾಗಿ, ಧರ್ಮಾತೀತಾವಾಗಿ ಗೆಲುವು ಕಂಡಿದೆ ಎಂದು ಹೇಳಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಕೊಳ್ತಿಗೆಯಲ್ಲಿ ಸಂಘಟನಾತ್ಮಕ ಶಕ್ತಿ ಇದೆ: ಎಂ.ಬಿ.ವಿಶ್ವನಾಥ
ಕೆಪಿಸಿಸಿ ಸದಸ್ಯ ಎಂ.ಬಿ.ವಿಶ್ವನಾಥರವರು ಮಾತನಾಡಿ, ಕೊಳ್ತಿಗೆಯಲ್ಲಿ ಒಂದು ವಿಶೇಷತೆ ಇದೆ. ಇಲ್ಲಿ ನಾಯಕತ್ವ ಇದೆ. ಹಿರಿಯ,ಕಿರಿಯ ಬಹಳಷ್ಟು ದಿಗ್ಗಜ ನಾಯಕರುಗಳು ಇಲ್ಲಿದ್ದಾರೆ.ಒಂದು ಸಂಘಟನಾತ್ಮಕ ಶಕ್ತಿ ಕೊಳ್ತಿಗೆಯಲ್ಲಿದೆ. ಇದರ ಫಲವಾಗಿ ಮತ್ತು ಗ್ರಾಮದಲ್ಲಿ ನಡೆದ ಅಭಿವೃದ್ಧಿ ಕೆಲಸಗಳಿಂದ ಕೊಳ್ತಿಗೆಯ ಮತದಾರರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಚುನಾಯಿಸಿ ಆಶೀರ್ವದಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳು ಈ ಗ್ರಾಮದಲ್ಲಿ ಮೂಡಿಬರಲಿ ಎಂದು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಕಾಂಗ್ರೆಸ್‌ನಿಂದ ಮಾತ್ರ ಗ್ರಾಮದಲ್ಲಿ ಅಭಿವೃದ್ಧಿ: ರಾಮ ಪಾಂಬಾರು
ತಾಲೂಕು ಪಂಚಾಯತ್ ಸದಸ್ಯ ರಾಮ ಪಾಂಬಾರು ಮಾತನಾಡಿ, ಕೊಳ್ತಿಗೆ ಗ್ರಾಮದಲ್ಲಿ ನಡೆದ ಅಭಿವೃದ್ಧಿ ಕೆಲಸಗಳನ್ನು ಅವಲೋಕನ ಮಾಡಿದರೆ ಬಹುತೇಕ ಅಭಿವೃದ್ಧಿ ಕೆಲಸಗಳು ಕಾಂಗ್ರೆಸ್ ಪಕ್ಷದಿಂದ ಮಾತ್ರವೇ ಆಗಿದೆ ಎಂಬುದು ಸ್ಪಷ್ಟವಾಗುತ್ತದೆ. ಕೇಂದ್ರ ಸರಕಾರದ ಪೊಳ್ಳು ಭರವಸೆಗಳು ಜನರಿಗೆ ಅರ್ಥವಾಗುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳು ಮೂಡಿಬರಲಿ, ತಾಲೂಕು ಪಂಚಾಯತ್‌ನಿಂದ ಸಾಧ್ಯವಾಗುವ ಎಲ್ಲಾ ರೀತಿಯ ಸಹಕಾರ ಕೊಡಲು ಸಿದ್ಧ ಎಂದು ಹೇಳಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಕೊಳ್ತಿಗೆ ಕಾಂಗ್ರೆಸ್ ‌ಮಯವಾಗಿದೆ: ಗಂಗಾಧರ ಗೌಡ ಕೆಮ್ಮಾರ
ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ, ಹಿರಿಯ ಕಾಂಗ್ರೇಸ್ಸಿಗ ಕೆಮ್ಮಾರ ಗಂಗಾಧರ ಗೌಡರವರು ಮಾತನಾಡಿ, ಕೊಳ್ತಿಗೆಯಲ್ಲಿ ಕಾಂಗ್ರೇಸ್‌ನಿಂದ ನಡೆದ ಅಭಿವೃದ್ಧಿ ಕೆಲಸಗಳೇ ಇಂದು ಕಾಂಗ್ರೇಸ್ ಆಡಳಿತಕ್ಕೆ ಬರಲು ಸಾಧ್ಯವಾಗಿದೆ. ಸಮರ್ಥ ನಾಯಕತ್ವ ಇರುವ ಅಭ್ಯರ್ಥಿಗಳೇ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಮುಂದಿನ ದಿನಗಳಲ್ಲಿ ಗ್ರಾಮ ಇನ್ನಷ್ಟು ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈಗಾಗಲೇ ಕೊಳ್ತಿಗೆ ಕಾಂಗ್ರೇಸ್‌ಮಯವಾಗಿದೆ. ಇಲ್ಲಿ ಪ್ರಾಥಮಿಕ ಕೃಷಿಪತ್ತಿನ ಸಂಘ, ಹಾಲು ಸೊಸೈಟಿ, ತಾಪಂ, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಎಲ್ಲವೂ ಕಾಂಗ್ರೆಸ್ ಬೆಂಬಲಿತರ ಕೈಯಲ್ಲಿದೆ. ಮುಂದಿನ ದಿನಗಳಲ್ಲಿ ಎಂಎಲ್‌ಎ ಮತ್ತು ಎಂಪಿ ಕಾಂಗ್ರೆಸ್ ಪಾಲಾದರೆ ಕೊಳ್ತಿಗೆ ಸಂಪೂರ್ಣ ಕಾಂಗ್ರೇಸ್‌ಮಯವಾಗಲಿದೆ ಎಂದರು.

ಕಾಂಗ್ರೇಸ್ ಉಸ್ತುವಾರಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲ ರಾಮಚಂದ್ರರವರು ಸ್ವಾಗತದೊಂದಿಗೆ ಮಾತನಾಡಿ, ಕೊಳ್ತಿಗೆಯಲ್ಲಿ ಅಭ್ಯರ್ಥಿಗಳ ವ್ಯಕ್ತಿತ್ವ ಮತ್ತು ಪ್ರತಿನಿಧಿಸುವ ಪಕ್ಷ ಗಣನೆಗೆ ಬಂದಿದೆ. ಜನ ಮೆಚ್ಚಿ,ನಂಬಿ ಓಟು ಕೊಟ್ಟು ಗೆಲ್ಲಿಸಿದ್ದಾರೆ. ಇದರ ಹಿಂದೆ ಗ್ರಾಮದ ಹಿರಿಯ ಕಿರಿಯ ನಾಯಕರುಗಳ, ಕಾರ್ಯಕರ್ತರ ಅಪಾರ ಶ್ರಮ ಇದೆ. ಮತದಾರರು ಕಾಂಗ್ರೇಸ್ ಪಕ್ಷದ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವಲ್ಲಿ ಎಲ್ಲಾ ಸದಸ್ಯರು ಮತ್ತು ನಾಯಕರುಗಳು ಒಗ್ಗಟ್ಟಿನಿಂದ ದುಡಿಯುತ್ತೇವೆ ಎಂದು ಹೇಳಿದರು. ಶಾಹುಲ್ ಅಮಲ ವಂದಿಸಿದರು. ಹಲವು ಮಂದಿ ಗಣ್ಯರು, ಪಕ್ಷದ ಹಿರಿಯರು, ಕಾರ್ಯಕರ್ತರು, ಮತದಾರರು ಉಪಸ್ಥಿತರಿದ್ದರು.

ಗೆದ್ದ ನಂತ ಮನೇಲಿ ಕೂರಲು ನಾವೇನು ಬಿಜೆಪಿ ಸದಸ್ಯರಲ್ಲ: ಪ್ರಮೋದ್ ಕೆ.ಎಸ್
ಅಭಿನಂದನೆ ಸ್ವೀಕರಿಸಿದ ಎಲ್ಲಾ ಸದಸ್ಯರುಗಳ ಪೈಕಿ ಧನ್ಯವಾದಗಳೊಂದಿಗೆ ಮಾತನಾಡಿದ ಸದಸ್ಯ ಪ್ರಮೋದ್ ಕೆ.ಎಸ್‌ರವರು, ಗ್ರಾಮದ ಅಭಿವೃದ್ಧಿಯ ಚಿಂತನೆಯೊಂದೇ ನಮ್ಮೆಲ್ಲರ ಧ್ಯೇಯವಾಗಿದೆ. ಈ ಹಿಂದಿನ ಪಂಚಾಯತ್‌ನವರದ್ದು ಗ್ರಾಮ ಸಭೆಗಳಲ್ಲಿ ಚಹಾ ಕುಡಿದು ಮನೆಗೆ ಹೋಗುವ ಕೆಲಸ ಮಾತ್ರ ಆಗುತ್ತಿತ್ತು ಆದರೆ ಇನ್ನು ಮುಂದೆ ಈ ರೀತಿ ಆಗಲ್ಲ. ಬಡವರ, ಗ್ರಾಮದ ಕಟ್ಟ ಕಡೆಯ ವ್ಯಕ್ತಿಯ ಸೇವೆಯೇ ನಮ್ಮ ಗುರಿಯಾಗಿದೆ. ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸವಲತ್ತು ದೊರೆಯಬೇಕು ಎಂಬುದು ನಮ್ಮ ನಿಲುವು ಇದಕ್ಕಾಗಿ ಪ್ರಯತ್ನ ಪಡುತ್ತೇವೆ ಎಂದ ಪ್ರಮೋದ್‌ರವರು, ಗೆದ್ದ ನಂತರ ಮನೇಲಿ ಕುಳಿತುಕೊಳ್ಳಲು ನಾವೇನು ಬಿಜೆಪಿಯವರಲ್ಲ, ನಾವು ಕಾಂಗ್ರೇಸ್ಸಿಗರು. ಬಡವರ ಸೇವೆ ಮಾಡುವುದೇ ನಮ್ಮ ಗುರಿ ಎಂದರು. ನಮ್ಮನ್ನು ಆಶೀರ್ವದಿಸಿ ಕಳುಹಿಸಿದ ಗ್ರಾಮದ ಸಮಸ್ತ ಮತದಾರರಿಗೂ ಕೃತಜ್ಞತೆ ಸಲ್ಲಿಸಿದರು.

ಕಾಂಗ್ರೆಸ್ ಮುಕ್ತ ದೇಶ ಮಾಡುವುದು ಬಿಜೆಪಿಯವರ ಭ್ರಮೆ: ಎಸ್.ಪಿ.ಮುರಳೀಧರ
ಸಭಾಧ್ಯಕ್ಷತೆ ವಹಿಸಿದ್ದ ಕೊಳ್ತಿಗೆ ಕಾಂಗ್ರೆಸ್ ಗ್ರಾಮ ಸಮಿತಿಯ ಅಧ್ಯಕ್ಷ ಎಸ್.ಪಿ ಮುರಳೀಧರ ಕೆಮ್ಮಾರರವರು ಮಾತನಾಡಿ, ಕಾಂಗ್ರೇಸ್ ಮುಕ್ತ ದೇಶವನ್ನಾಗಿ ಮಾಡುತ್ತೇವೆ ಎಂದೇಳುವ ಬಿಜೆಪಿಯವರಿಗೆ ಇದೊಂದು ಭ್ರಮೆ ಎಂದು ಗೊತ್ತಿಲ್ಲ. ನೂರು ಜನ್ಮ ಎತ್ತಿ ಬಂದರೂ ಭಾರತವನ್ನು ಕಾಂಗ್ರೆಸ್ ಮುಕ್ತ ದೇಶವನ್ನಾಗಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಇದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು ಎಂದರು. ಪಂಚಾಯತ್ ಚುನಾವಣೆಯಲ್ಲಿ ಹಳ್ಳಿಯ ಜನ ಕಾಂಗ್ರೆಸ್‌ಗೆ ಮಣ್ಣು ಮುಕ್ಕಿಸಿದ್ದಾರೆ ಎಂದೇಳುವ ಕೆ.ಎಸ್.ಈಶ್ವರಪ್ಪ ತಾನು ಎಷ್ಟು ಸಲ ಸೋತಿದ್ದೇನೆ ಎಂಬುದನ್ನು ನೆನಪಿಸಿಕೊಳ್ಳಬೇಕಾಗಿದೆ. ೨ ಸಾವಿರಕ್ಕೆ ಮರಳು ಕೊಡುತ್ತೇನೆ ಎಂದೇಳುವ ಎಂ.ಪಿ ನಳೀನ್ ಕುಮಾರ್‌ರವರು ಬಿಜೆಪಿ ಪಕ್ಷವನ್ನು ನಡೆಸುತ್ತಿದ್ದಾರೆ ಎಂದಾದರೆ ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ ಸರಕಾರ ಸುಳ್ಳು, ಪೊಳ್ಳು ಭರವಸೆಗಳನ್ನು ಕೊಡುವ ಮೂಲಕ ಜನರ ದಾರಿ ತಪ್ಪಿಸುತ್ತಿದೆ ಎಂಬುದನ್ನು. ಕಾಂಗ್ರೇಸ್ ಪಕ್ಷಕ್ಕೆ ಅಭಿವೃದ್ಧಿ ಮುಖ್ಯ ಆದರೆ ಇಂದಿನ ದಿನಗಳಲ್ಲಿ ಗೆಲ್ಲಲು ಅಭಿವೃದ್ಧಿಯೊಂದೇ ಸಾಕಾಗುವುದಿಲ್ಲ ಇದು ದುರಂತ.ಕೊಳ್ತಿಗೆ ಗ್ರಾಮದ ಅಭಿವೃದ್ಧಿಗೆ ಬಂದಿರುವ ಅದೆಷ್ಟೋ ಅನುದಾನಗಳು ಲ್ಯಾಪ್ಸ್ ಆಗಿ ಹೋಗಿವೆ. ಮುಂದಿನ ದಿನಗಳಲ್ಲಿ ಇದೆಲ್ಲಾ ಆಗದ ರೀತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರುಗಳು ಗ್ರಾಮದ ಅಭಿವೃದ್ಧಿ ಕಡೆಗೆ ಹೆಚ್ಚಿನ ಒತ್ತು ನೀಡುತ್ತಾರೆ ಎಂಬ ಭರವಸೆಯನ್ನು ನೀಡುತ್ತಿದ್ದೇನೆ ಎಂದು ಹೇಳಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಪಟಾಕಿ ಸಿಡಿಸಿ ಸಂಭ್ರಮಾಚರಣೆ
ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಬೆಳಿಗ್ಗೆ ಎಲ್ಲರಿಗೂ ಲಾಡು ಮತ್ತು ಶರಬತ್ತು ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಚಿಕನ್ ಸುಕ್ಕ, ಕಬಾಬ್‌ನೊಂದಿಗೆ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.