ಪುತ್ತೂರು: ಕೆಯ್ಯೂರು ಗ್ರಾಮದ ದೇರ್ಲಕ್ಕೆ ಕೆಎಸ್ಆರ್ಟಿಸಿ ಬಸ್ಸು ತನ್ನ ಸಂಚಾರವನ್ನು ಆರಂಭ ಮಾಡಿದೆ. ದೇರ್ಲಕ್ಕೆ ಈ ಹಿಂದೆ ಬಸ್ಸು ಸಂಚಾರ ಇತ್ತು ಆದರೆ ಕೆಲವು ತಿಂಗಳಿನಿಂದ ಬಸ್ಸು ಸಂಚಾರ ನಿಂತಿತ್ತು. ಕೆಯ್ಯೂರು ಗ್ರಾಪಂ ಸದಸ್ಯ ಬಟ್ಯಪ್ಪ ರೈಯವರು ಈ ಬಗ್ಗೆ ಡಿಫೋ ಮ್ಯಾನೇಜರ್ರವರಲ್ಲಿ ಮಾತುಕತೆ ನಡೆಸಿ ಮತ್ತೆ ಬಸ್ಸು ಸಂಚಾರ ಆರಂಭಿಸಬೇಕು ಎಂದು ವಿನಂತಿಸಿಕೊಂಡಿದ್ದರೆ. ಅದರಂತೆ ಇದೀಗ ಪ್ರತಿ ದಿನ ಬೆಳಿಗ್ಗೆ 8 ಗಂಟೆಗೆ ದೇರ್ಲಕ್ಕೆ ಬಸ್ಸು ಸಂಚಾರ ಆರಂಭಗೊಂಡಿದೆ. ಪುತ್ತೂರಿನಿಂದ 7.30ಕ್ಕೆ ಬಿಟ್ಟು ಕುಂಬ್ರ-ಕೌಡಿಚ್ಚಾರು ಮೂಲಕ ದೇರ್ಲಕ್ಕೆ ಬಂದು ಅಲ್ಲಿಂದ ಶೇಖಮಲೆ ಮಾರ್ಗವಾಗಿ ಪುತ್ತೂರಿಗೆ ಸಂಚರಿಸುತ್ತಿದೆ. ಪ್ರಯಾಣಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.