ಉಪ್ಪಿನಂಗಡಿ: ಇಲ್ಲಿನ ಗ್ರಾಮ ಪಂಚಾಯಿತಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2020-21ನೇ ಸಾಲಿನ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆಯು ಜ.12ರಂದು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜರಗಿತು.
ಸಭೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ತಾಲೂಕು ಸಂಯೋಜಕ ಚಂದ್ರಶೇಖರ ಯೋಜನೆಯನ್ನು ಉಪಯೋಗಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.
ಉಪ್ಪಿನಂಗಡಿ ಕೃಷಿ ಅಧಿಕಾರಿ ಕೆ.ಎನ್. ಭರಮಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ ಕೃಷಿಕರಿಗೆ ಬಹಳ ಉಪಯುಕ್ತವಾದ ಯೋಜನೆ ಇದಾಗಿದ್ದು, ಸರಿಯಾದ ಮಾಹಿತಿ ಪಡೆದುಕಂಡು ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಯು.ಟಿ. ತೌಶೀಫ್, ವಿನಾಯಕ ಪೈ, ಲೊಕೇಶ್ ಬೆತ್ತೋಡಿ, ಧನಂಜಯ, ಅಬ್ದುಲ್ ರಶೀದ್ ಮಠ, ಮೈಸಿದಿ ಇಬ್ರಾಹಿಂ, ವಿಜಯಲಕ್ಷ್ಮೀ ಪ್ರಭು, ಶೋಭಾ ದಯನಂದ, ಉಷಾ, ಜಯಂತಿ ಕೆ., ವನಿತಾ, ಉಷಾ ಚಂದ್ರ ಮುಳಿಯ, ಬಿ. ನೆಬಿಸ, ಲಲಿತಾ, ಸೌಧ, ಗ್ರಾಮಸ್ಥರಾದ ಶ್ರೀರಾಮ, ಅಜೀಜ್ ನಿನ್ನಿಕಲ್, ಲಕ್ಷ್ಮಣ ಗೌಡ, ಚಂದ್ರ ಮತ್ತಿತರರು ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಲ್ಪ್ರೇಡ್ ಲಾರೆನ್ಸ್ ರೋಡ್ರಿಗಸ್ ಸ್ವಾಗತಿಸಿ, ಲೆಕ್ಕ ಸಹಾಯಕ ಎಚ್. ರವಿಚಂದ್ರ ವಂದಿಸಿದರು.