ಪುತ್ತೂರು: ಮಸೀದಿಗೆ ತೆರಳುತ್ತಿದ್ದ ವಿದ್ಯಾರ್ಥಿಯೊಬ್ಬರಿಗೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಕೂರ್ನಡ್ಕ ಮಸೀದಿ ಬಳಿ ಜ.12ರಂದು ನಡೆದ ಬಗ್ಗೆ ವರದಿಯಾಗಿದ್ದು, ಹಲ್ಲೆಗೊಳಗಾದ ವ್ಯಕ್ತಿ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಬೆಳ್ಳಾರೆ ಪಾಲ್ತಾಡು ಸಮೀಪದ ನಿವಾಸಿ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಅಂತಿಮ ಬಿಬಿಎಮ್ ವಿದ್ಯಾರ್ಥಿ ಅಝ್ಜದ್(20ವ)ರವರು ಗಾಯಗೊಂಡವರು. ಅವರು ಕೂರ್ನಡ್ಕ ಮಸೀದಿಗೆ ಹೋಗುತ್ತಿದ್ದ ವೇಳೆ ಕೂರ್ನಡ್ಕದ ಬದ್ರುದ್ದೀನ್, ಪರ್ಪುಂಜದ ಅಮನ್ ಮತ್ತು ಇತರರು ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಗಾಯಾಳು ಪುತ್ತೂರು ಹಿತ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಜ.11ರಂದು ನನ್ನ ಅಣ್ಣ ಸಂತ ಪಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಬದ್ರುದ್ದಿನ್ ಅವರು ಕಾಲೇಜಿಗೆ ಬಂದಿದ್ದರು. ಇದೇ ವಿಚಾರವಾಗಿ ಕಾಲೇಜಿಗೆ ಸಂಬಂಧ ಪಡದ ಹೊರಗಿನ ಕೆಲವರು ಅಣ್ಣನೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಇದನ್ನೆ ನೆಪವಾಗಿಟ್ಟು ಕೊಂಡು ನನಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಗಾಯಾಳುವಿನ ಹೇಳಿಕೆ ಪಡೆದು ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.