ಕಾಣಿಯೂರು: ಕಾಣಿಯೂರು ಗ್ರಾಮದ ಏಲಡ್ಕ ಎಂಬಲ್ಲಿರುವ ಶ್ರೀ ಶಿರಾಡಿ ರಾಜನ್ ದೈವ ಮತ್ತು ಶ್ರೀ ಚಾಮುಂಡಿ ದೈವ ಹಾಗೂ ಶ್ರೀ ಪರಿವಾರ ದೈವಗಳ ಪ್ರತಿಷ್ಠಾ 13ನೇ ವಾರ್ಷಿಕೋತ್ಸವ ಹಾಗೂ ೪೮ ಕಾಯಿಯ ಶ್ರೀ ಗಣಪತಿ ಹೋಮವು ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ಅರ್ಚಕರಾದ ಬ್ರಹ್ಮಶ್ರೀ ಬಿ. ಕೇಶವ ಜೋಗಿತ್ತಾಯ ಇವರ ನೇತೃತ್ವದಲ್ಲಿ ಜ.12ರಂದು ನಡೆಯಿತು.
ಬೆಳಿಗ್ಗೆ ಸ್ವಸ್ತಿ ಪುಣ್ಯಾಹ ವಾಚನ, ದೈವತಾ ಪ್ರಾರ್ಥನೆ, ಕಲಶಾಭಿಷೇಕ, ೪೮ ಕಾಯಿಯ ಗಣಪತಿ ಹೋಮ, ಪೂರ್ಣಾಹುತಿ, ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಏಲಡ್ಕ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಮಾಧವ ಗೌಡ ಕಟ್ಟತ್ತಾರು, ಕಾರ್ಯದರ್ಶಿ ಸುಂದರ ಬೆದ್ರಾಜೆ, ಆಡಳಿತ ಮೊಕ್ತೇಸರಾದ ರೋಹಿತ್ ಅನಿಲ, ವಸಂತ ಗೌಡ ಕಂಪ, ಜಿರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ, ಕಾರ್ಯದರ್ಶಿ ಲಕ್ಷ್ಮಣ ಗೌಡ ಮುಗರಂಜ ಸೇರಿದಂತೆ ಸಮಿತಿಗಳ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.