ಉಪ್ಪಿನಂಗಡಿ: 34-ನೆಕ್ಕಿಲಾಡಿ ಗ್ರಾಮದ ಬೊಳಂತಿಲ ಎಂಬಲ್ಲಿ ಕುಮಾರಾಧಾರ ನದಿಯಿಂದ ಪುತ್ತೂರು ನಗರಸಭೆಯ ಗ್ರಾಹಕರಿಗೆ ಪೂರೈಸಬೇಕಾದ ಕುಡಿಯುವ ನೀರಿನ ಪೈಪು ಒಡೆದು ರಸ್ತೆ ಚರಂಡಿ ಹಾಗೂ ಹಲವು ಮನೆ ಅಂಗಳದಲ್ಲಿ ಹರಿಯುತ್ತಾ ಪೋಲಾಗುತ್ತಿದ್ದ ನೀರಿನ ಪೈಪ್ನ ದುರಸ್ಥಿ ಕಾರ್ಯ ನಡೆದು ಹಲವು ದಿನಗಳಿಂದ ಎದುರಾಗಿದ್ದ ಸಮಸ್ಯೆ ಪರಿಹಾರವಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಕುಡಿಯುವ ನೀರು ಕಳೆದೊಂದು ತಿಂಗಳಿಂದ ನಿರಂತರ ದಿನದ 24ಗಂಟೆ ಪೋಲು ಆಗುತ್ತಿದ್ದರೂ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಬಗ್ಗೆ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಸಮಗ್ರ ವರದಿ ಪ್ರಕಟವಾದ ದಿನದಿಂದಲೇ ಪುತ್ತೂರು ಪುರಸಭೆಯ ಮೂಲಕ ಪೈಪ್ನ ದುರಸ್ಥಿ ಕಾರ್ಯ ನಡೆಸಲಾಗಿದ್ದು, ಇದೀಗ ನೀರು ಪೋಲು ಆಗುವುದು ನಿಲುಗಡೆ ಆಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.