ಪುತ್ತೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಸಂಪ್ಯ ಶಾಖೆಯ ವಾರ್ಷಿಕ ಮಹಾಸಭೆ ಜ.5ರಂದು ಎಸ್ಸೆಸ್ಸೆಫ್ ಶಾಖಾ ಕಛೇರಿಯಲ್ಲಿ ನಡೆಯಿತು. ಶಾಖಾಧ್ಯಕ್ಷ ಅಬ್ದುಲ್ ಹಮೀದ್ ರವರ ಸಭಾಧ್ಯಕ್ಷತೆ ವಹಿಸಿದ್ದರು. ಎಸ್.ವೈ.ಎಸ್. ಬ್ರಾಂಚ್ ಕಾರ್ಯದರ್ಶಿ ಹಂಝ ಸಂಪ್ಯ ಉದ್ಘಾಟಿಸಿ ಶುಭ ಹಾರೈಸಿದರು. ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡನೆ ಮಾಡಿದ ಬಳಿಕ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ಹಮೀದ್ (ಅಮ್ಮಿ), ಪ್ರಧಾನ ಕಾರ್ಯದರ್ಶಿಯಾಗಿ ರಾಝಿಕ್ ಕಲ್ಲರ್ಪೆ, ಕೋಶಾಧಿಕಾರಿಯಾಗಿ ಶರೀಫ್ ಎಸ್.ಎಂ, ಉಪಾಧ್ಯಕ್ಷರುಗಳಾಗಿ ಯಾಸೀನ್ ಅಹ್ಸನಿ ಬಿ.ಕೆ ಹಾಗೂ ನೌಷಾದ್ ಮರಿಕೆ, ಕಾರ್ಯದರ್ಶಿಗಳಾಗಿ ಸ್ವಾದಿಕ್ ಬಿ.ಕೆ. ಹಾಗೂ ಸಫ್ರಾನ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾಮಿಲ್ ಮದನಿ ಬಿ.ಕೆ, ಜಮಾಲ್ ಝುಹ್ರಿ ಕೆ. ಎಂ., ನಾಸಿರ್, ಆಶಿಕ್ ವಾಗ್ಲೆ, ಮುಸ್ತಫ ವಾಗ್ಲೆ, ರಶೀದ್ ಕಲ್ಲರ್ಪೆ, ಸುಹಾನ್, ಶದೀದ್, ಅಬ್ದುಲ್ ರಹೀಂ, ಉದೈಫ್, ಮುಹಮ್ಮದ್ ಆಶಿಕ್ ರವರನ್ನು ಆಯ್ಕೆ ಮಾಡಲಾಯಿತು.
ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಸಮಿತಿಯಿಂದ ಚುನಾವಣೆ ವೀಕ್ಷಕರಾಗಿ ಬಾತೀಷ್ ಬನ್ನೂರು, ಹನೀಫ್ ಬನ್ನೂರು ರವರು ಭಾಗವಹಿಸಿದ್ದರು. ಉಪಾಧ್ಯಕ್ಷ ಯಾಸೀನ್ ಅಹ್ಸನಿ ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ರಾಝಿಕ್ ಕಲ್ಲರ್ಪೆ ವಂದಿಸಿದರು.