ಪುತ್ತೂರು;ಬೆಳೆಯೂರುಕಟ್ಟೆ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಹಿಂದಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಬಾಲಕೃಷ್ಣ ನಾಯಕ್ರವರಿಗೆ ಬೀಳ್ಕೊಡುಗೆಯು ಜ.12ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ನಿವೃತ್ತರನ್ನು ಸನ್ಮಾನಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಅಧ್ಯಾಪಕರು ತರಗತಿಯಲ್ಲಿ ಪಾಠ ಮಾಡುವುದಾರೆ, ಗುರುವಾದವರು ಪಾಠದ ಜೊತೆಗೆ ವಿದ್ಯಾರ್ಥಿಯ ಮುಂದಿನ ಜೀವನದ ದಾರಿಯನ್ನು ತೋರಿಸುವವರಾಗಿದ್ದಾರೆ. ಹೀಗಾಗಿ ಎಲ್ಲಾ ಅಧ್ಯಾಪಕರು ಗುರುಗಳಾಗಬೇಕು. ಅಧ್ಯಾಪಕರಾದವರು ಇಂದು ವೃತ್ತಿ ಧರ್ಮವನ್ನು ಪಾಲನೆ ಮಾಡುತ್ತಿತ್ತು ರಾಜ್ಯ, ರಾಷ್ಟ್ರ ಪುರಸ್ಕಾರಗಳಿಗೆ ಪಾತ್ರರಾಗುತ್ತಿದ್ದಾರೆ. ಹಿಂದಿ ಶಿಕ್ಷಕರಾಗಿ ಮಕ್ಕಳಿಗೆ ಉತ್ತಮ ವಿದ್ಯಾದಾನದ ಜೊತೆಗೆ ಶಾಲೆಯ ಅಭಿವೃದ್ಧಿಗೂ ಕೊಡುಗೆ ನೀಡಿರುವ ಬಾಲಕೃಷ್ಣ ನಾಯಕ್ರವರು ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ ಎಂದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಮಾತನಾಡಿ, ಬಾಲಕೃಷ್ಣ ನಾಯಕ್ರವರು ಮಾದರಿ ಶಿಕ್ಷಕರಾಗಿ ಬೆಳೆದವರು. ಕ್ರಿಯಾ ಶೀಲ ವ್ಯಕ್ತಿತ್ವ ಹೊಂದಿದ ಅವರು ಸಂಸ್ಥೆಯ ಕಣ್ಮನಿಯಾಗಿ ಬೆಳೆದು ಜನತೆಯೊಂದಿಗೆ ಒಡನಾಟ, ಇಲಾಖೆಯ ಕೆಲಸಗಳಲ್ಲಿಯೂ ಉತ್ತಮ ನಿರ್ವಹಣೆ ಮಾಡುತ್ತಿದ್ದರು. .
ಸ್ಥಾಪಕಾಧ್ಯಕ್ಷ ಮುಗೆರೋಡಿ ಬಾಲಕೃಷ್ಣ ರೈ ಮಾತನಾಡಿ, ಹಿತ, ಮಿತ ಭಾಷಿಯಾಗಿದ್ದ ಬಾಲಕೃಷ್ಣ ನಾಯಕ್ಎಲ್ಲರೊಂದಿಗೆ ಒಡನಾಡಿಯಾಗಿದ್ದರು. ವೃತ್ತಿಯೊಂದಿಗೆ ಉತ್ತಮ ಪ್ರವೃತ್ತಿಯನ್ನು ಹೊಂದಿದವರು. ಸಂಸ್ಥೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಿಮ್ಮ ಸೇವೆ ಬಹಳಷ್ಟು ಆವಶ್ಯಕತೆಯಿದ್ದು ಕೆಲ ಸಮಯಗಳ ತನಕ ಮುಂದುವರಿಸುವಂತೆ ಮನವಿ ಮಾಡಿದರು.
ಮಾಜಿ ಕಾರ್ಯಾಧ್ಯಕ್ಷ ಪ್ರವೀಣ್ ಚಂದ್ರ ಆಳ್ವ ಮಾತನಾಡಿ, ನಿಸ್ವಾರ್ಥ ಭಾವನೆಯಿಂದ ಸೇವೆ ಸಲ್ಲಿಸಿ ಬೆಳೆಸಿದ ಬಾಲಕೃಷ್ಣ ನಾಯಕ್ರವರು ನಿವೃತ್ತಿಯೂ ಸಂಸ್ಥೆಗೆ ತುಂಬಲಾರದ ನಷ್ಟವಾಗಿದೆ ಎಂದರು.
ಜಿ.ಪಂ ಸದಸ್ಯೆ ಶಯನಾ ಜಯಾನಂದ, ತಾ.ಪಂ ಸದಸ್ಯೆ ದಿವ್ಯ ಪುರುಷೋತ್ತಮ, ತಾ.ಪಂ ಸದಸ್ಯರು, ಕಾಲೇಜಿನ ಕಾರ್ಯಧ್ಯಕ್ಷರಾಗಿರುವ ಸಾಜ ರಾಧಾಕೃಷ್ಣ ಆಳ್ವ, ಬಲ್ನಾಡು ಗ್ರಾ.ಪಂ ಸದಸ್ಯರಾದ ಅಂಬ್ರೋಸ್ ಡಿ.ಸೋಜ, ಇಂದಿರಾ ಎಸ್.ರೈ, ಶಿಕ್ಷಣ ಸಂಯೋಜಕ ಹರಿಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ನಿವೃತ ಶಿಕ್ಷಕ ಬಾಲಕೃಷ್ಣ ನಾಯಕ್ ಹಾಗೂ ವೇದಾವತಿ ದಂಪತಿಯನ್ನು ಶಾಸಕ ಸಂಜೀವ ಮಠಂದೂರು ಸನ್ಮಾನಿಸಿ ಗೌರವಿಸಿದರು. ಪ್ರೌಢಶಾಲಾ ಸಹಶಿಕ್ಷಕರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಅಬ್ರಹಾಂ ಮತ್ತು ಶಿಕ್ಷಣ ಸಂಯೋಜಕ ಹರಿಪ್ರಸಾದ ಹಾಗೂ ಯುವಶಕ್ತಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಅಧ್ಯಕ್ಷ ಅಂಬ್ರೋಸ್ ಡಿಸೋಜ ಹಾಗೂ ಗೌರವಾಧ್ಯಕ್ಷ ದೇವದಾಸ ರೈ ಗುಂಡ್ಯಡ್ಕ ನಿವೃತ್ತರನ್ನು ಸನ್ಮಾನಿಸಿದರು.
ವಿದ್ಯಾರ್ಥಿನಿ ಚೈತ್ರಾ ಪ್ರಾರ್ಥಿಸಿದರು. ಪ್ರಾಂಶುಪಾಲ ಗೋಪಾಲಕೃಷ್ಣ ಉಪಾಧ್ಯಾಯ ಸ್ವಾಗತಿಸಿದರು. ಪ್ರಾಧ್ಯಾಪಕ ಹರಿಪ್ರಕಾಶ್ ಬೈಲಾಡಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಗುರು ಸುನೀತಾ ನಿವೃತ್ತರ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕಿ ರವಿಕಲಾ ವಂದಿಸಿ, ಪ್ಲೇವಿ ಡಿ ಸೋಜ ಸನ್ಮಾನ ಪತ್ರ ವಾಚಿಸಿದರು.